ವಿವಿಧ ಬೇಡಿಕೆ ಈಡೇರಿಕೆಗೆ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ಯಾರಿ ಕಾರ್ಮಿಕ ಸಂಘಟನೆ ಗಾಂಧಿ ಚೌಕ್ ನಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದವರು ಪ್ರತಿ ವರ್ಷವು ಕೂಡ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ವಿವಿಧ ಬಗೆಯ ಕಿಟ್ಗಳನ್ನು ಕಾರ್ಮಿಕ ಇಲಾಖೆ ವಿತರಣೆ ಮಾಡುತ್ತದೆ, ಸುಮಾರು 10-15 ವರ್ಷಗಳಿಂದ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ನೋಂದಾಯಿತ ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ಕೊಡುತ್ತಿರುವ ಕಿಟ್‌ಗಳ ಹಾಗೂ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ದೂರಿದ್ದರು. 

ನಿಜವಾದ ಫಲಾನುಭವಿಗಳನ್ನು ಗುರುತಿಸುವಲ್ಲಿ ಕಾರ್ಮಿಕ ಇಲಾಖೆ ವಿಫಲವಾಗಿದೆ.ಕಾರ್ಮಿಕರಲ್ಲದವರಿಗೆ ಈ ಸೌಲಭ್ಯಗಳನ್ನು ಕೊಡುವ ಮುಖಾಂತರ ಸರ್ಕಾರದ ಸುಮಾರು ಸಾವಿರಾರು ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ದೂರಿದ್ದರು. 2025-26 ಬಂದಿರುವ ಕಿಟ್‌ಗಳನ್ನು ನಿಜವಾದ ಫಲಾನುಭವಿಗಳಿಗೆ ವಿತರಿಸಬೇಕು. ಒಂದು ವೇಳೆ ಲೋಪವಾದರೆ ಇದರ ವಿರುದ್ಧ ಕಟ್ಟಡ ಕಾರ್ಮಿಕರ ಸಂಘಟನೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಆನ್‌ಲೈನ್ ಗಳಲ್ಲಿ ಕಟ್ಟಡ ಕಾರ್ಮಿಕರಿಗೆ ನೊಂದಣಿ ಹಾಗೂ ನವಿಕರಣಕ್ಕೆ ಕಾರ್ಮಿಕ ಇಲಾಖೆ ನಿಡಿರುವದು ಅವೈಜ್ಞಾನಿಕವಾಗಿದೆ. ಅದೇಷ್ಟೋ ಕಾರ್ಮಿಕರಿಗೆ ಆನ್‌ಲೈನ್ ಸೆಂಟರ್ ಗಳಲ್ಲಿ ನೊಂದಾಯಿತ ನೊಂದಾಯಿತ ಕಾರ್ಡಗಳಿಗೆ ನವಿಕರಣ ಮಾಡದೆ ಉದ್ದೇಶ ಪೂರ್ವಕವಾಗಿ ಹೊಸ ಕಾರ್ಡ್ ಮಾಡಿಕೊಡಲಾಗುತ್ತಿದೆ. ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ಬರುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ವಿಷಯಕ್ಕೆ ಅನೇಕ ಬಾರಿ ನಮ್ಮ ಸಂಘಟನೆಯಿಂದ ಮನವಿ ಸಲ್ಲಿಸಿದರೂ ಕೂಡ ಕಾರ್ಮಿಕ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿರುವುದಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಈಗಲಾದರು ಅಧಿಕಾರಿಗಳು ಆನ್ ಲೈನ್ ಸೆಂಟರ್‌ಗಳಿಗೆ ಕಾರ್ಮಿಕ ಕಾರ್ಡ್‌ಗಳ ನೊಂದಣಿ ಹಾಗೂ ನವಿಕರಣಗೊಳಿಸುವ ಆದೇಶವನ್ನು ರದ್ದುಪಡಿಸಬೇಕು. ವಿವಿಧ ಸೌಲಭ್ಯಗಳಿಗಾಗಿ ಕಟ್ಟಡ ಕಾರ್ಮಿಕರು ಸಲ್ಲಿಸುತ್ತಿರುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ದೋರಣೆ ಎದ್ದು ಕಾಣುತ್ತದೆ. ಜೇಷ್ಠತೆ ಆಧಾರದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡದೆ ಬೇಕಾಬಿಟ್ಟಿಯಾಗಿ ಕಾರ್ಮಿಕರಿಗೆ ಸೌಲಭ್ಯ ಕೊಡುತ್ತಿರುವದರಲ್ಲಿ ಭ್ರಷ್ಟಾಚಾರ ನಡೆಯುತ್ತಿರುವದು ಎದ್ದು ಕಾಣುತ್ತದೆ, ಈ ತಾರತಮ್ಯ ನೀತಿ ಸುಮಾರು ವರ್ಷಗಳಿಂದ ನಡೆಯುತ್ತಲೆ ಬಂದಿದ್ದರೂ ಕೂಡಾ ಇದನ್ನು ಸರಿಪಡಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ . ಈ ರೀತಿಯ ನ್ಯೂನತೆಗಳು ಆಗದಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ತಾಲೂಕು ದಂಡಾಧಿಕಾರಿ ಎಚ್.ಎ ಸರಕಾವಸ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಮತ್ತು ಕಲ್ಲು ಹೊಡೆಯುವ ಕ್ವಾರಿ ಕಾರ್ಮಿಕ ಸಂಘಟನೆ ಪದಾಧಿಕಾರಿಗಳಾದ
ತಿಮ್ಮಯ್ಯ ತಳವಾರ,ತಿಮ್ಮಯ್ಯ ದೊಣ್ಣಿಗೇರಾ, ದೇವೇಂದ್ರಪ್ಪ ಗುಡಾಳಕೇರಿ, ಮರೇಪ್ಪ ದೇಸಾಯಿ ದೊಣ್ಣಿಗೇರಾ, ಅಬ್ದುಲ್ ಕಾಫ ತಾಳಿಕೋಟಿ, ಮೈನುದ್ದೀನ್ ಖಾನಾಪುರ್, ಹರಿಸಿಂಗ್ ಪವಾರ್ ಕಕ್ಕೇರ, ತಿಮ್ಮಯ್ಯ ದೇವಿಕೇರಾ, ಶಾಮಲಿಂಗ ಕಕ್ಕೇರ, ಮಹಿಬೂಬ್ ಖಾನಾಪುರ್, ರಾಮಯ್ಯ ಇಳಿಗೇರ್ ರುಕ್ಮಾಪುರ, ಬಸವರಾಜ್ ಪೂಜಾರಿ ಸುರಪುರ, ಮರಿಯಪ್ಪ ಸತ್ಯಂಪೆಟ್, ಭೀಮಣ್ಣ ಮೇದಾಗಲ್ಲಿ ಸುರಪುರ, ಯಲ್ಲಪ್ಪ ಬೋವಿಗಲ್ಲಿ, ಭೀಮಣ್ಣ ಎಂ ಸುರಪುರ, ಮಂಜೂರ್ ಸಾಬ್ ತಿಂಥಣಿ ಸೇರಿದಂತೆಇತರರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!