ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ವಿಠಲ್ ಯಾದವ್ ವರಿಂದ ನಾಮಪತ್ರ ಸಲ್ಲಿಕೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ. ಮುಂದಿನ 5 ವರ್ಷ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಲು ಸುರಪುರ ಮತಕ್ಷೇತ್ರದಿಂದ ವಿಠಲ್ ಯಾದವ್ ಇಂದು ನಾಮಪತ್ರ ಸಲ್ಲಿಕೆ ಮಾಡಿದರು.
ಚುನಾವಣೆ ಮತದಾನ ಪ್ರಕ್ರಿಯೆ ನ.9ರಂದು ನಡೆಯಲಿದೆ. ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿ-1960ರ ನಿಯಮ 13 ಮತ್ತು 14 ಹಾಗೂ ಬ್ಯಾಂಕಿನ ಬೈಲಾ ನಿಯಮದಂತೆ ಚುನಾವಣೆಗೆ ಮಂಗಳವಾರ ಅಧಿಸೂಚನೆ ಪ್ರಕಟಿಸಲಾಗಿದೆ. ಅ.26ರಿಂದ ನ.1ರ ವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3ಗಂಟೆ ವರೆಗೆ ಬ್ಯಾಂಕಿನ ಕಚೇರಿಯಲ್ಲಿ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ.
ನ.2ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಸಿ ಅದೇ ದಿನದಂದು ಕ್ರಮಬದ್ಧ ಅಭ್ಯರ್ಥಿಗಳ ಪ್ರಕಟಣೆ ಹೊರಡಿಸಲಾಗುತ್ತದೆ. ನ.3ರ ಮಧ್ಯಾಹ್ನ 3 ಗಂಟೆ ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, ಅದೇ ದಿನದಂದು ಸ್ಪರ್ಧಾ ಕಣದಲ್ಲಿ ಉಳಿದ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ಸಂಜೆ 4 ಗಂಟೆಗೆ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುತ್ತದೆ.
ಚಿಹ್ನೆ ಸಹಿತ ಕ್ರಮಬದ್ಧವಾಗಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ನ.4ರಂದು ಬೆಳಗ್ಗೆ 11 ಗಂಟೆಗೆ ಪ್ರಕಟಿಸಲಾಗುತ್ತದೆ. ನ.9ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿಮತದಾನ ನಡೆಯಲಿದ್ದು, ಮತದಾನ ಮುಗಿದ ನಂತರ ಅದೇ ದಿನ ಮತ ಎಣಿಕೆ ನಡೆಸಿ ಚುನಾವಣಾ ಫಲಿತಾಂಶ ಘೋಷಿಸಲಾಗುವುದು.ಸೋಮಶೇಖರ್ ಗೋ ನಾಯಕ ,
ಬಾಪುಗೌಡ ಪಾಟೀಲ್ ,
ರಾಮಕೃಷ್ಣ ಕುಲಕರಣಿ ,
ಪರುಶುರಾಮ ಕಮತಿಗಿ, ರಮೇಶ್ ಕುಲಕರ್ಣಿ, ಹನುಮಂತರಾಯ ಮಕಾಶಿ, ಮಹೇಶ್ ಯಾದವ,
ನದಿ ಮುಲ್ಲಾ ಹುಸೇನ್, ಎಸ್ ಎಂ ಮುಲ್ಲಾ. ಹಣಮಂತ ಡಿ ನಾಯಕ, ಮಲ್ಕಪ್ಪ ವಾಗಣಗಿರ, ವೆಂಕಟೇಶ್ ಕಲಾಲ, ಮಲ್ಲಣ್ಣ ಸಾಹುಕಾರ್ ಜಾಲಿಬೆಂಚಿ, ಮಲ್ಲಿಕಾರ್ಜುನ್ ರೆಡ್ಡಿ ಅಮ್ಮಾಪುರ್, ವಿಜಯ್ ಯಾದವ್, ದೇವು ಫಸಲಾದಿ, ಸನ್ನಿ ಯಾದವ್, ಹನುಮೇಶ್ ಯಾದವ್, ಮಹೇಶ್ ಸರ್ವಿ, ವೆಂಕಣ್ಣ ಹೋತಪೀಠ, ಸುರೇಶ್ ಯಾದವ್,
ಈ ಸಂದರ್ಭದಲ್ಲಿ ಸೋಮಶೇಖರ್ ಗೋ ನಾಯಕ ,ಬಾಪುಗೌಡ ಪಾಟೀಲ್ ,ರಾಮಕೃಷ್ಣ ಕುಲಕರಣಿ,ಪರುಶುರಾಮ ಕಮತಿಗಿ, ರಮೇಶ್ ಕುಲಕರ್ಣಿ, ಹನುಮಂತರಾಯ ಮಕಾಶಿ, ಮಹೇಶ್ ಯಾದವ,
ನದಿ ಮುಲ್ಲಾ ಹುಸೇನ್, ಎಸ್ ಎಂ ಮುಲ್ಲಾ. ಹಣಮಂತ ಡಿ ನಾಯಕ, ಮಲ್ಕಪ್ಪ ವಾಗಣಗಿರ, ವೆಂಕಟೇಶ್ ಕಲಾಲ, ಮಲ್ಲಣ್ಣ ಸಾಹುಕಾರ್ ಜಾಲಿಬೆಂಚಿ, ಮಲ್ಲಿಕಾರ್ಜುನ್ ರೆಡ್ಡಿ ಅಮ್ಮಾಪುರ್, ವಿಜಯ್ ಯಾದವ್, ದೇವು ಫಸಲಾದಿ, ಸನ್ನಿ ಯಾದವ್, ಹನುಮೇಶ್ ಯಾದವ್, ಮಹೇಶ್ ಸರ್ವಿ, ವೆಂಕಣ್ಣ ಹೋತಪೀಠ, ಸುರೇಶ್ ಯಾದವ್ ಸೇರಿದಂತೆ ಅಪಾರ ಬೆಂಬಲಿಗರು ಉಪಸ್ಥಿತರಿದ್ದರು.


