ಕನ್ನಡ ಭಾಷೆ ಶ್ರೀಮಂತಿಕೆಗೆ ಎಲ್ಲರ ಶ್ರಮ ಅಗತ್ಯ:ವೆಂಕಟೇಶ ನಾಯಕ ಭೈರಿಮಡ್ಡಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕನ್ನಡ ಭಾಷೆ ಸಾವಿರಾರು ವರ್ಷ ಇತಿಹಾಸ ಹೊಂದಿದ್ದು, ಈ ನಾಡಿನಲ್ಲಿ ಹಲವು ರಾಜಮನೆತನಗಳು ಆಳ್ವಿಕೆ ಮಾಡಿ ಭಾಷೆಯನ್ನು ಶ್ರೀಮಂತಗೊಳಿಸಲು ಶ್ರಮಿಸಿವೆ ಎಂದು ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ ಹೇಳಿದರು.
ಇಂದು ಕರವೇ ಸುರಪುರ ತಾಲೂಕ ಘಟಕದ ವತಿಯಿಂದಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಗಾಂಧಿ ವೖತ್ತ , ಗಾಂಧಿನಗರ , ವಲ್ಲಭಾಯಿ ಚೌಕ್ ಹತ್ತಿರ , ಕುಂಬಾರಪೇಟ , ದಿವಳಗುಡ್ಡ , ತಿಮ್ಮಾಪುರ ರಂಗಪೇಟ , ದಲ್ಲಿರುವ ಕರವೇ ಧ್ವಜಸ್ತಂಭ ವೖತ್ತಗಳಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಧ್ವಜಾರೋಹಣ ನೆರವೇರಿಸಿ 70 ನೇ ವರ್ಷದ ರಾಜ್ಯೋತ್ಸವವನ್ನು ಎಲ್ಲಾ ಕರವೇ ತಾಲೂಕ ಪದಾಧಿಕಾರಿಗಳು ಸೇರಿ ಅದ್ದೂರಿಯಾಗಿ ಆಚರಣೆ ಮಾಡಿ ಮಾತನಾಡಿದ ಅವರು ರಾಜರ ಆಶ್ರಯದಲ್ಲಿ ಹಲವು ಕವಿಗಳು, ಸಂತರು, ಅಂದಿನ ಕಾಲದಲ್ಲಿ ನಮ್ಮ ನಾಡಿನ ವೈಭವದ ಪರಂಪರೆಯನ್ನು ಅಕ್ಷ ರಗಳಲ್ಲಿ ದಾಖಲಿಸಿರುವುದು ನಮ್ಮ ನಾಡಿನ ಗತ ವೈಭವದ ಕನ್ನಡಿಯಾಗಿದೆ. ವಿವಿಧ ಕವಿಗಳು ನಾಡಿನ ಸೌಂದರ್ಯ, ಸಂಸ್ಕೃತಿ, ಸಂಪತ್ತು, ಜನ ಜೀವನ ಭಾಷಾ ಶ್ರೀಮಂತಿಕೆಯನ್ನು ತಮ್ಮದೇ ಆದ ಶೈಲಿಯಲ್ಲಿ ರಚಿಸಿರುವ ಹಾಡುಗಳು ಕನ್ನಡಿಗರ ಸ್ಮೃತಿಯಲ್ಲಿ ಶಾಶ್ವತವಾಗಿ ಕಂಪು ಬೀರುತ್ತಿವೆ ಎಂದು ನುಡಿದರು.
ಬುಲೆರೊ ಪಿಕಪ್ ವಾಹನದಲ್ಲಿ ಭುವನೇಶ್ವರಿ ಭಾವಚಿತ್ರವನ್ನು ಗಾಂಧಿ ವೖತ್ತದಿಂದ ದರ್ಬಾರ್ ರಸ್ತೆ , ಮಾರ್ಕೆಟ್ ರಸ್ತೆ , ಹಳೆಬಸ್ ಸ್ಟ್ಯಾಂಡ್ , ಕುಂಬಾರಪೇಟ , ಹಸನಾಪೂರ ಪಂಪ್ , ತಿಮ್ಮಾಪುರ , ರಂಗಪೇಟ ಮೂಲಕ ತಹಶೀಲ್ ಕಛೇರಿಯವರಿಗೆ ಕರವೇ ಪದಾಧಿಕಾರಿಗಳು ಕನ್ನಡಾಂಬೆಗೆ ಜೈಕಾರ , ಧ್ವನಿವರ್ಧಕದಲ್ಲಿ ಕನ್ನಡ ಹಾಡುಗಳ ಹಾಡುಗಳ ಹಚ್ಚಿಕೊಂಡು ದ್ವಿಚಕ್ರ ವಾಹನ ಹಾಗೂ ಕಾರಗಳ ಮೂಲಕ ಮೆರವಣಿಗೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಕರವೇ ತಾಲೂಕ ಪದಾಧಿಕಾರಿಗಳಾದ ಮಲ್ಲು ವಿಷ್ಣು ಸೇನೆ , ನಾಗೇಂದ್ರ ದೊರೆ , ಹಣಮಗೌಡ ಶಖಾಪೂರ , ಆನಂದ ಮಾಚಗುಂಡಾಳ , ನಾಗರಾಜ ಡೊಣ್ಣಿಗೇರಿ , ಸಾಯಬಣ್ಣ ದೊರಿ , ಅಯ್ಯಪ್ಪ ವಗ್ಗಾಲಿ , ಲಕ್ಷ್ಮಣ ಬೋವಿ , ಮಲ್ಲು ಬೇವಿನಾಳ , ತಿಮ್ಮಯ್ಯ ತಳವಾರ , ಯುವ ಘಟಕದ ವಿಜ್ಜು ನರಸಿಂಗಪೇಟ , ನಗರ ಘಟಕದ ನಿಂಗಣ್ಣ ಮಾಲಗತ್ತಿ , ಇಸ್ಮಾಯಿಲ್ , ಹಬೀಬ್ ವಿಧ್ಯಾರ್ಥಿ ಘಟಕದ ಮಾಳಪ್ಪ ಗೋನಾಲ , ಆಟೋ ಘಟಕದ ಆನಂದ ರತ್ತಾಳ , ಮಲ್ಲಣ್ಣ ಹಸನಾಪೂರ , ಯಮನಪ್ಪ ಗದ್ವಾಲ , ಬಸವರಾಜ ,ವಿವಿಧ ಗ್ರಾಮಶಾಖೆಯ ರಾಮುಲು ಬೇವಿನಾಳ , ಬಲಭೀಮ ಬೊಮ್ಮನಹಳ್ಳಿ , ಅರ್ಜುನ ಯಕ್ಷಿಂತಿ , ಮಹಾರಾಜ ಹೆಮ್ಮಡಿಗಿ , ಮೌನೇಶ ಬಡಿಗೇರ , ವೆಂಕಟೇಶ ಕುರಿ ಸೇರಿದಂತೆ ಅನೇಕ ಕರವೇ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.







