ಹಣ ಕಳೆದುಕೊಂಡವನ ಖುಷಿಗೆ ಈಗ ಪಾರವೇ ಇಲ್ಲ… ಅದಕ್ಕೆ ಕಾರಣವಾಗಿದ್ದು ಪೊಲೀಸರು

ಸುರಪುರ ಟೈಮ್ಸ್ ವಾರ್ತೆ

ಸುರಪುರ:ದಾರಿಯಲ್ಲಿ ಹೊಗುವಾಗ ಹಣ ಕಳೆದುಕೊಂಡಿದ್ದ ವೈಕ್ತಿಗೆ, ಪೊಲೀಸ್ ಇಲಾಖೆಯ ಪೇದೆಯೊಬ್ಬರು ತಮಗೆ ರಸ್ತೆಯಲ್ಲಿ ಸಿಕ್ಕ ಹಣವನ್ನ ಮರುಕಳಿಸಿ ಮಾನವಿಯತೆ ಮೆರೆದಿದ್ದಾರೆ.
ಸಂಪಾದನೆ ಮಾಡುವುದೇ ಕಷ್ಟವಾಗಿರುವ ದಿನದಲ್ಲಿ, ಸಂಪಾದನೆ ಮಾಡಿದ್ದ ಹಣ ಕಳೆದುಕೊಂಡಿದ್ದ ವ್ಯಕ್ತಿ ಗೌಡಪ್ಪಗೌಡನಿಗೆ ಪೊಲೀಸರ ಸಹಾಯ ಸಂತಸ ಅರಳುವಂತೆ ಮಾಡಿದೆ
ಮಂಗಳವಾರ ಸುರಪುರ ಪೊಲೀಸ್ ಠಾಣೆಯ ನಿರೀಕ್ಷಕರ ಆದೇಶದ ಮೇರೆಗೆ ಇಂದು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಜಾಗೃತಿ ಪ್ರಯುಕ್ತ ದೇವಪುರ್ ಬಿಟ್ ಪೊಲೀಸ್ ದಯಾನಂದ್ ಬೈಕ್ ಮೂಲಕ ದೇವಪೂರಿಗೆ ಬರುವಾಗ ಗಾಳಿ ಮಾರ್ಗಮ್ಮ ದೇವಸ್ಥಾನದ ಸಮೀಪದಲ್ಲಿ 1,47,410=00 ರೂಪಾಯಿ ಕೇಸರಿ ಶಾಲಿನಲ್ಲಿ ರೋಡಿನ ಮೇಲೆ ಬಿದ್ದ ದುಡ್ಡನ್ನು ನೋಡಿ ಪೊಲೀಸ್ ಠಾಣೆಯ ಠಾಣಾಧಿಕಾರಿಯಾದ ಉಮೇಶ್ ಎಂ ರವರಿಗೆ ಮಾಹಿತಿ ತಿಳಿಸಿ ಕೇಸರಿ ಶಾಲಿನಲ್ಲಿರುವ ದುಡ್ಡನ್ನು ಕಟ್ಟಿ ಅಲ್ಲೇ ನಿಂತು ಯಾರಾದರೂ ಕಳೆದುಕೊಂಡವರು ಬರುತ್ತಾರೆಂದು ಸ್ವಲ್ಪ ಸಮಯದ ವರೆಗೆ ಅಲ್ಲೇ ನಿಂತಿದ್ದು ಗಾಬರಿಯಿಂದ ಒಬ್ಬ ಯುವಕ ಓಡೋಡಿ ಬಂದು ಸರ್, ಈ ದುಡ್ಡು ನಂದು ಕಳೆದುಕೊಂಡಿದ್ದೇನೆ ಬೆಳಗ್ಗೆ ಅರಳಹಳ್ಳಿ ಯಿಂದ ನಮ್ಮ ಮನೆಯಿಂದ ಹೊಲದಲ್ಲಿ ಬೆಳೆದ ಹತ್ತಿಯನ್ನು ಕುಂಬಾರಪೇಟ ಮಿಲ್ ನಲ್ಲಿ ಮಾರಿ ದುಡ್ಡು ತೆಗೆದುಕೊಂಡು ಟ್ಯಾಕ್ಟರ್ ನಲ್ಲಿ ಕೇಸರಿ ಶಾಲಿನಲ್ಲಿ ದುಡ್ಡನ್ನು ಕಟ್ಟಿಕೊಂಡು ಟ್ಯಾಕ್ಟರ್ ಟಾಪ್ ಬ್ಯಾಗಿನಲ್ಲಿ ಇಟ್ಟುಕೊಂಡು ಬರುತ್ತಿದ್ದಾಗ ಬಿದ್ದಿರುತ್ತವೆ ಎಂದು ರೈತ ಮಾಹಿತಿ ನೀಡಿದ್ದಾನೆ.ಆ ಪೋಲಿಸಪ್ಪ ಗಾಬರಿಯಾಗಬೇಡ ಎಲ್ಲಾ ದುಡ್ಡು ಇಲ್ಲಿವೆ ಧೈರ್ಯವಾಗಿರು ನಮ್ಮ ಠಾಣೆಯ ಠಾಣಾಧಿಕಾರಿಗೆ ದುಡ್ಡು ಸಿಕ್ಕ ಬಗ್ಗೆ ಮಾಹಿತಿ ತಿಳಿಸಿದ್ದು ನಡಿ ಪೊಲೀಸ್ ಠಾಣೆಗೆ ಹೋಗಿ ನಮ್ಮ ಸಾಹೇಬರ ಮುಖಾಂತರ ನಿನ್ನ ದುಡ್ಡು ನಿನಗೆ ಕೊಡಲಾಗುತ್ತದೆ ಎಂದು ತಿಳಿಸಿ.ರೈತನನ್ನು ಠಾಣೆಗೆ ಕರೆದುಕೊಂಡು ಬಂದು ಹತ್ತಿ ಮಾರಿದರ ಬಗ್ಗೆ ಪರಿಶೀಲನೆ ಮಾಡಿದ್ದಾಗ ಕಳೆದುಕೊಂಡ ವ್ಯಕ್ತಿ ಅರಳಳ್ಳಿ ಗ್ರಾಮದ ರೈತನಾಗಿದ್ದು ಗೌಡಪ್ಪಗೌಡ ತಂದೆ ರಾಮನಗೌಡ ಮಾಲಿಪಾಟೀಲ್ ಎಂಬ ಮಾಹಿತಿಯನ್ನು ತಿಳಿದ್ದಾಗ ,ಅರಳಹಳ್ಳಿ ಗ್ರಾಮದವರಾದ ವೆಂಕಟಪ್ಪ ನಾಯಕ್ ಜಾಗಿರದಾರ್ ರವರ ಸಮ್ಮುಖದಲ್ಲಿ ಗೌಡಪ್ಪ ಗೌಡಗೆ ಸುರಪುರು ಪೊಲೀಸ್ ಠಾಣೆಯ ಉಮೇಶ್ ಎಂ. ಪಿ ಐ ಅವರು 1,47,410 ರೂಪಾಯಿಗಳು ಮರಳಿ ಕೊಟ್ಟಿದ್ದು. ಈ ಸಂದರ್ಭದಲ್ಲಿ ಕೃಷ್ಣ ಸುಭೇದಾರ್ ಪಿಎಸ್ಐ ಸಣ್ಣಕೆಪ್ಪ ಟಣಿಕೆದಾರ್ ಮುಖ್ಯಪೇದೆ. ನಿಂಗಾರೆಡ್ಡಿ ನಾಯಕ್ ಪೊಲೀಸ್ ಪೇದೆ ಇದ್ದು ಹಾಗೂ ದಯಾನಂದ ಜಮಾದಾರ್ ಪೊಲೀಸ್ ಪೇದೆ ಕಾರ್ಯಕ್ಕೆ ಉಮೇಶ್ ಎಂ. ಪಿ ಐ ಹಾಗೂ ಕೃಷ್ಣ ಸುಬೇದಾರ್ ಪಿಎಸ್ಐ ಸುರಪುರು ಪೊಲೀಸ್ ಠಾಣೆ ರವರ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!