ಖಾಸಗಿ ಶಾಲಾ ವಾಹನ ಪಲ್ಟಿ: ಮಕ್ಕಳ ಜೀವದ ಜತೆ ಆಟವಾಡುವ ಖಾಸಗಿ ಶಾಲೆಗಳು..!ತಪ್ಪಿದ ಭಾರಿ ಅನಾಹುತ…
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಖಾಸಗಿ ಶಾಲಾ ವಾಹನಗಳು ಕುರಿತುಂಬಿಕೊಂಡು ಹೋಗುವಂತೆ ಶಾಲಾ ವಿದ್ಯಾರ್ಥಿಗಳನ್ನು ತಮ್ಮ ವಾಹನಗಳಲ್ಲಿ ಕರೆದೊಯ್ಯುತ್ತಿರುವ ಘಟನೆಗಳು ಆಗ್ಗಿಂದ್ದಾಗೆ ಕಣ್ಣಿಗೆ ಬೀಳುತ್ತಿವೆ…!
ಭವಿಷ್ಯದಲ್ಲಿ ನೂರಾರು ಕನಸುಗಳನ್ನು ಹೊತ್ತು ಶಿಕ್ಷ ಣ ಪಡೆಯಲು ಗ್ರಾಮೀಣ ಪ್ರದೇಶದ ಅನೇಕ ಮಕ್ಕಳು ತೂಕದ ಸ್ಕೂಲ್ ಬ್ಯಾಗ್ ಬೆನ್ನಿಗೇರಿಸಿ ಸರಕಾರಿ ಶಾಲೆಗಳು ಮತ್ತು ಆಂಗ್ಲಶಾಲೆಗಳು ಎಷ್ಟೇ ದೂರದಲ್ಲಿದ್ದರೂ ಅಧ್ಯಯನ ಮಾಡಬೇಕೆಂದು ಮುಗಿಬಿದ್ದು ವಾಹನಗಳಲ್ಲಿ ಓಡಾಟ ಮಾಡುತ್ತಿದ್ದಾರೆ. ಆದರೆ ಪೋಷಕರಿಗೆ ವಾಹನದಲ್ಲಿ ಓಡಾಡುವ ತಮ್ಮ ಮಕ್ಕಳ ಸುರಕ್ಷ ತೆ ಬಗ್ಗೆ ಆತಂಕ ಮೂಡಿಸುವ ವಾತಾವರಣ ಸೃಷ್ಟಿಯಾಗಿ ಹಂತದೇ ಸುರಪುರ ತಾಲೂಕಿನ ಹೆಗ್ಗಣದೊಡ್ಡಿ ಗ್ರಾಮದಲ್ಲಿರುವ ಶ್ರೀ ಕೃಷ್ಣ ಸಾಯಿ ಪಬ್ಲಿಕ್ ಶಾಲೆಯ ವಾಹನ ಪಲ್ಟಿಯಾಗಿ ಮೂರು ಜನ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಶಾಲೆಯಿಂದ ವಿದ್ಯಾರ್ಥಿಗಳನ್ನು ಹೊತ್ತು ಸಾಗುತ್ತಿರುವಾಗ ಚಿಗರಿಹಾಳ ಗ್ರಾಮದ ಸಮೀಪದಲ್ಲಿ ವಾಹನ ಪಲ್ಟಿಯಾಗಿದೆ. ವಾಹನದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೆಂದು ತಿಳಿದುಬಂದಿದೆ. ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅದೃಷ್ಟವಶಾತ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಭಾರಿ ಅನಾಹುತ ಒಂದು ತಪ್ಪಿದಂತಾಗಿದೆ.
ಮೇಲ್ವಿಚಾರಣೆ ಮಾಡೋರಿಲ್ಲ
ಜಿಲ್ಲಾಡಳಿತ ಮತ್ತು ಶಿಕ್ಷ ಣ ಇಲಾಖೆ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ಮಕ್ಕಳ ಸುರಕ್ಷ ತೆ ಕುರಿತಾಗಿ ಲಿಖಿತ ಆದೇಶ ಹೊರಡಿಸಿದೆಯೇ ವಿನಃ ಆದೇಶ ಪಾಲನೆಯಾಗುತ್ತಿದೆಯೇ ಎಂದು ಮೇಲ್ವಿಚಾರಣೆ ಮಾಡುತ್ತಿಲ್ಲ ಎಂಬ ಆರೋಪವಿದೆ. ಕೇಂದ್ರ ಸರಕಾರ ಹೊರಡಿಸಿರುವ ಆರ್.ಟಿ.ಇ ನಿಯಮಗಳನ್ನು ಪಾಲಿಸುವಲ್ಲಿ ಅನೇಕ ಶಿಕ್ಷ ಣ ಸಂಸ್ಥೆಗಳು ಎಡವಿದೆ ಎಂಬ ಕೂಗು ಕೇಳಿಬರುತ್ತಿದೆ.
ಸುರಕ್ಷ ತೆಗೆ ಆರ್.ಟಿ.ಇ ನಿಯಮಗಳೇನು ?
ವಾಹನ ಚಾಲಕರಿಗೆ ಪರವಾನಗಿ ಕಡ್ಡಾಯ, ಖಾಸಗಿ ವಾಹನದಲ್ಲಿ ವೇಗ ನಿಯಂತ್ರಕ ಇರಬೇಕು. ವಾಹನಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ, ತುರ್ತು ನಿರ್ಗಮನ ಬಾಗಿಲುಗಳು ವಾಹನದಲ್ಲಿರಬೇಕು. ಅಗತ್ಯತೆಗಿಂತ ಹೆಚ್ಚಿನ ಮಕ್ಕಳು ವಾಹನದಲ್ಲಿರಬಾರದು. ವಾಹನಗಳಲ್ಲಿ ಮಹಿಳಾ ಸಹಾಯಕಿಯರು ಇರಬೇಕು. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಅಗ್ನಿ ನಿರೋಧಕ ಸಾಧನ ಅಳವಡಿಸಿರಬೇಕು. ವಾಹನದ ಪರವಾನಗಿ ಮತ್ತು ವಿಮೆ ಕಡ್ಡಾಯ. ಚಾಲಕರ ಮತ್ತು ಸಹಾಯಕರ ಗುರುತಿನ ಪತ್ರ ಕಡ್ಡಾಯ. ಆಗಿಂದ್ದಾಗೆ ವಾಹನಗಳ ತಪಾಸಣೆ ಅಗತ್ಯ. ಶಾಲಾ ವಾಹನಗಳಲ್ಲದೆ ಖಾಸಗಿ ವಾಹನಗಳಲ್ಲಿಯೂ ರಾಜ್ಯ ಸಾರಿಗೆ ಸಂಸ್ಥೆಯದ್ದೇ ರೀತಿಯ ಅನೇಕ ನಿಯಮಗಳನ್ನು ಪಾಲಿಸಬೇಕಿದೆ.
ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸಾರಿಗೆ ನಿಯಮಗಳನ್ನು ಪಾಲಿಸದೆ, ಚಾಲಕರನ್ನು ನೇಮಿಸಿಕೊಳ್ಳುವುದೇ ಇಂತಹ ಅನಾಹುತಗಳಿಗೆ ಕಾರಣ. ಚಾಲನೆಯಲ್ಲಿ ಪರಿಣಿತಿ ಪಡೆದಿರುವವರನ್ನು ನೇಮಕ ಮಾಡಿಕೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.
ಸದ್ಧ್ಯ ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಸುರಪುರ ಸಾರ್ವಜನಿಕ ಆಸ್ಪತ್ರೆಗೆ ಧಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.





