ಸಾಮಾಜಿಕ ಭದ್ರತಾ ಯೋಜನೆ ಸದುಪಯೋಗ ಪಡಿಸಿಕೊಳ್ಳಿ – ವಿನೋದ ಕುಮಾರ ನಾಯಕ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಮತ್ತು ಜೀವನ ಸುರಕ್ಷಾ ವಿಮಾ ಯೋಜನೆ ಗಳನ್ನು ಸದ್ಬಳಸಿಕೊಳ್ಳುವಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್. ಮಾಲಗತ್ತಿ ಶಾಖಾ ವ್ಯವಸ್ಥಾಪಕ ವಿನೋದ ಕುಮಾರ ನಾಯಕ ಹೇಳಿದರು.
ಇಂದು ಮಾಲಗತ್ತಿ ಶಾಖೆಯಲ್ಲಿ ಅಯ್ಯಣ್ಣ ತಂದೆ ಬಸವರಾಜ್ ಯನಗುಂಟಿ ಅವರಿಗೆ ನಾಲ್ಕು ಲಕ್ಷ ರೂಪಾಯಿ ವಿಮಾ ಪರಿಹಾರ ನೀಡುವ ಮೂಲಕ ಯೋಜನೆಗಳ ವಿವರಗಳನ್ನು ನೀಡಿದರು.
ಇತ್ತೀಚಿಗೆ ಬಸವರಾಜ್ ತಂದೆ ಅಯ್ಯಣ್ಣ ಯನಗುಂಟಿ ಮರಣ ಹೊಂದಿದ ಸಂದರ್ಭದಲ್ಲಿ ಅವರ ಎರಡು ಲಕ್ಷ ವಿಮಾ ಪರಿಹಾರ ಚೆಕ್ ನೀಡಿ ಎಲ್ಲಾ ಗ್ರಾಹಕರು, ಸಾರ್ವಜನಿಕರು ಸಾಮಾಜಿಕ ಭದ್ರತಾ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿದರು
ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ಅಧಿಕಾರಿ ಸಾಯಿ ರಾಮ್ ಹಾಗೂ ಬಸನಗೌಡ ಬಿಸಿ ಜಿಲ್ಲಾ ಸಂಯೋಜಕರು ಅವರು ಸರ್ಕಾರ ಅತಿ ಕಡಿಮೆ ಪ್ರೀಮಿಯಂ ನಲ್ಲಿ 18ರಿಂದ 50 ವರ್ಷ ಒಳಗಿನವರಿಗೆ ,
ವಾರ್ಷಿಕ 436 ರೂಪಾಯಿ ಪ್ರೀಮಿಯಂ ಪಾವತಿಸಿದರೆ ಸಾಮಾನ್ಯ ಸಾವು ಸಂಭವಿಸಿದಲ್ಲಿ ಎರಡು ಲಕ್ಷ ರೂಪಾಯಿ ಪರಿಹಾರ ದೊರೆಯಲಿದೆ.ಹಾಗೂ 18ರಿಂದ 70 ವರ್ಷ ಒಳಗಿನವರಿಗೆ ವಾರ್ಷಿಕ 20 ರೂಪಾಯ ವಿಮಾ ಪ್ರೀಮಿಯಂ ಪಾವತಿಸಿ ಅಪಘಾತದಲ್ಲಿ ಸಾವು ಸಂಭವಿಸಿದಾಗ ಎರಡು ಲಕ್ಷ ರೂಪಾಯಿ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.
ವಿಮಾ ಪರಿಹಾರ ಪಡೆದ ಶ್ರೀ ಅಯ್ಯಣ್ಣ ತಂದೆ ಬಸವರಾಜ್ ವರು ಪರಿಹಾರ ಸೌಲಭ್ಯ ದೊರಕಿಸಿಕೊಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು
ಈ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳು ರಾಮಾಂಜನೇಯಲು ಕ್ಯಾಷರು , ಚಂದ್ರಶೇಖರ್ ಯನಗುಂಟಿ ಬ್ಯಾಂಕ್ ಮಿತ್ರ ಶಮಿ ಅಲ್ಲಾ ಮುಖಂದರ್ ಕ್ಯಾಜುವಲ್ ವರ್ಕರ್ ಹಾಗೂ ಸೇರಿದಂತೆ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.



