ಹುಣಸಗಿಗೆ ಸಾರಿಗೆ ಘಟಕ, ಬಸ್ ನಿಲ್ದಾಣಕ್ಕೆ ಅನುಮೋದನೆ


ಸುರಪುರ ಟೈಮ್ಸ್ ವಾರ್ತೆ
ಹುಣಸಗಿ: ಯಾದಗಿರಿ ಜಿಲ್ಲೆಯ ಕೊನೆಯ ತಾಲೂಕು ಭತ್ತದ
ಖಣಜವೆಂದು ಗುರುತಿಸಿಕೊಂಡಿರುವ ನೂತನ ಹುಣಸಗಿ ತಾಲೂಕಿಗೆ ಬಸ್ ಘಟಕ ಹಾಗೂ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವುಕುಮಾರ ಅನುಮೋದನೆ ನೀಡಿದ್ದಾರೆಂದು ಶಾಸಕ ರಾಜಾ ವೇಣುಗೋಪಾಲ ನಾಯಕ್ ತಿಳಿಸಿದ್ದಾರೆ. ಕೆಕೆಆರ್‌ಟಿಸಿ ಸಂಸ್ಥೆಯು ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಸೇರಿದ 8 ಎಕರೆ 23 ಗುಂಟೆ ಜಮೀನನನ್ನು ಮಂಜೂರಾತಿ ನೀಡಿದೆ. ಅದಕ್ಕಾಗಿ ಈಶಾನ್ಯ ಸಾರಿಗೆ ಸಂಸ್ಥೆಯು ಕೆಬಿಜೆಎನ್‌ಗೆ 45.63 ಲಕ್ಷ ರೂ. ಗಳನ್ನು ಪಾವತ್ತಿಸುವ ಷರತ್ತಿಗೊಳಪಟ್ಟು ಸಾರಿಗೆ ನಿಗಮಕ್ಕೆ
ಹಸ್ತಾಂತರಿಸುವಂತೆ ಆದೇಶ ಹೊರಡಿಸಿದ್ದಾರೆಂದು ಆರ್‌ವಿಎನ್ ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಜಮೀನು ಹಸ್ತಾಂತರದ ಪ್ರಕ್ರಿಯೇ ಕಗ್ಗಂಟಾಗಿ ಪರಿಣಮಿಸಿತ್ತು. ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ನರಸಿಂಹ ನಾಯಕ (ರಾಜುಗೌಡ) ಇದೇ ಜಮೀನನ್ನು ಸಾರಿಗೆ ನಿಗಮಕ್ಕೆ ನೀಡುವಂತೆ ಬೇಡಿಕೆಯನ್ನು ಸಲ್ಲಿಸಿದ್ದನ್ನು ಸ್ಮರಿಸಬಹುದು. ನಂತರ ವಿಧಾನಸಭಾ ಚುನಾವಣೆಗಳು ಬಂದು ಜಮೀನು ಹಸ್ತಾಂತರ ಪ್ರಕೀಯೇ ಸ್ಥಗಿತಗೊಂಡಿತ್ತು. ಆದಷ್ಟು ಬೇಗ ಬಸ್ ಘಟಕ ಹಾಗೂ ಬಸ್ ನಿಲ್ದಾಣದ ಕಾರ್ಯಾರಂಭವಾಗಲಿ ಎನ್ನುವುದು ಸಾರ್ವಜನಿಕರ ಒತಾಸೆಯಾಗಿದೆ.

Leave a Reply

Your email address will not be published. Required fields are marked *

error: Content is protected !!