ಗುರಿ ತಲುಪಲು ಸತತ ಅಧ್ಯಯನ ಅಗತ್ಯ;ಕೋರಿಸಂಗಯ್ಯ ಗಡ್ಡದ
ಸುರಪುರ ಟೈಮ್ಸ್ ವಾರ್ತೆ
ಕೊಡೇಕಲ್ : ಪ್ರಪಂಚದಲ್ಲಿ ಯಾರು ಬೇಕಾದರೂ ಏನನ್ನಾದರೂ ಕಳ್ಳತನ ಮಾಡಬಹುದು ಆದರೆ ನಾವು ಕಲಿತ ವಿದ್ಯೆಯನ್ನು ಯಾರು ಕದಿಯಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ವಿದ್ಯೆಯತ್ತ ಹೆಚ್ಚಿನ ಗಮನಹರಿಸಿ ಸತತ ಅಧ್ಯಯನ ಮಾಡಿದ್ದರೆ ಗುರಿ ಮುಟ್ಟಲು ಸಾಧ್ಯ ಎಂದು ಕೊಡೇಕಲ್ ವಲಯ ಕಸಾಪ ಅಧ್ಯಕ್ಷ ಕೋರಿಸಂಗಯ್ಯ ಗಡ್ಡದ ಹೇಳಿದರು.
ಗ್ರಾಮದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಸಂಜೆ ಜರುಗಿದ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶಾಲೆ ಒಂದು ದೇಗುವಿದ್ದಂತೆ ಇಲ್ಲಿ ನಿತ್ಯ ವ್ಯಾಸಂಗಕ್ಕೆ ಬರುವ ಮಕ್ಕಳು ಶ್ರದ್ದೇಯಿಂದ ಗುರುಗಳು ಹೇಳಿಕೊಡುವ ಪಾಠವನ್ನು ಅರ್ಥಸಿಕೊಂಡು ಅಧ್ಯಯನ ಮಾಡಬೇಕು ಅಂದಿನ ಪಠ್ಯವನ್ನು ಅಂದೇ ಅಭ್ಯಾಸ ಮಾಡುವ ರೂಢಿಯನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶಿವಶಂಕರ ಯಡಹಳ್ಳಿ ಮಾತನಾಡಿ ಪ್ರತಿಯೊಬ್ಬ ಪಾಲಕರಿಗೆ ತಮ್ಮ ಮಕ್ಕಳು ಉತ್ತಮ ವ್ಯಾಸಂಗ ಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವುದರ ಜೊತೆಗೆ ಒಳ್ಳೆಯ ಉದ್ಯೋಗದಲ್ಲಿರಬೇಕೆಂಬ ಕನಸು ಕಾಣುತ್ತಾರೆ ಪಾಲಕರು ಕಂಡ ಕನಸನ್ನು ನನಸು ಮಾಡುವುದು ಮಕ್ಕಳ ಕರ್ತವ್ಯ ಆದರೆ ಕೇವಲ ಉದ್ಯೋಗಕ್ಕಾಗಿ ಅಭ್ಯಾಸ ಮಾಡದೇ ದೇಶದ ಅಭಿವೃದ್ಧಿಗೆ ಪೂರಕವಾಗುವಂತಹ ಕಾರ‍್ಯಗಳನ್ನು ಮಾಡುವ ವ್ಯಕ್ತಿಯಾಗಬೇಕು ಅಂದಾಗ ಮಾತ್ರ ಭಾರತ ಮಾತೆಗೆ ನಾವು ಕೊಡುವ ಗೌರವವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ನವೋದಯ, ಮುರಾರ್ಜಿ ವಸತಿ ಶಾಲೆಗಳಿಗೆ ಆಯ್ಕೆಯಾಗಿರುವ ಮಕ್ಕಳನ್ನು ಸತ್ಕರಿಸಲಾಯಿತು.
ಬಸವ ಪೀಠಾಧಿಪತಿಗಳಾದ ಶ್ರೀ ವೃಷಬೇಂದ್ರಅಪ್ಪ ಸಾನಿಧ್ಯವಹಿಸಿ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಸಿದ್ದನಗೌಡ ಪೋಲಿಸಪಾಟೀಲ, ಧರೆಪ್ಪ ಮೇಟಿ, ಕನಕಪ್ಪ ಜಂಗಳಿ, ಮಲ್ಲಿಕರ‍್ಜುನ ಜಂಗಳಿ, ಸಂಗಣ್ಣ ಪೊಲಿಸಪಾಟೀಲ, ಚಂದ್ರಶೇಖರ ಹೋಕ್ರಾಣಿ, ಮಾಳಪ್ಪ ಡವಳಗಿ, ಭೀಮನಗೌಡ ಬಿರಾದಾರ, ಶರಣಗೌಡ ಪಾಟೀಲ, ಸೇರಿದಂತೆ ಹಲವರು ಉಪಸ್ಥಿತರಿದ್ದ ಕಾರ‍್ಯಕ್ರಮವನ್ನು ಭಾಗಣ್ಣ ಅರೇನಾಡ ನಿರೂಪಣೆ ಮಾಡಿದರುಎಸ್.ಎಸ್ ಮಾರನಾಳ ಸ್ವಾಗತಿಸಿದರು ರಾಜು ಯಡಹಳ್ಳಿ ವಂದಿಸಿದರು.
