ಹೆಲ್ಮೆಟ್ ಚಿಕ್ಕದು ರಕ್ಷಣೆ ದೊಡ್ಡದು :ಡಿವಾಯ್ಎಸ್ಪಿ ಜಾವೇದ್ ಇನಾಂದಾರ್
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಜೀವನ ಮುಂದುವರಿಯಬೇಕಾದರೆ ಜೀವ ಇರಬೇಕು. ಜೀವ ಇರಬೇಕಾದರೆ ನಾವೆಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಡಿ.ವೈ.ಎಸ್. ಪಿ. ಜಾವೇದ್ ಇನಾಂದಾರ್ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ನಡಾವಳಿಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ದ್ವಿಚಕ್ರ ವಾಹನ ಸವಾರಿ ಹಾಗೂ ಹಿಂಬದಿ ಸವಾರರಾಗಿ ಪ್ರಯಾಣಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಚಿಕ್ಕದು ರಕ್ಷಣೆ ದೊಡ್ಡದು ಎಂಬ ಸತ್ಯ ಅರಿಯಬೇಕು.ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸುವುದನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಚಾಲನೆ ಪರವಾನಗಿ, ಆರ್.ಸಿ. ಪುಸ್ತಕ, ವಿಮೆ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕಾನೂನಿನ ಭಯಕ್ಕಷ್ಟೇ ಅಲ್ಲದೆ, ನಿಮ್ಮ ಬದುಕು ಮತ್ತು ನಿಮ್ಮ ಮೇಲೆ ಅವಲಂಬನೆಯಾಗಿರುವ ಕುಟುಂಬ ಸದಸ್ಯರ ಹಿತದೃಷ್ಟಿಯಿಂದಲೂ ಹೆಲ್ಮೆಟ್ ಧರಿಸುವುದು ಒಳಿತು ಎಂದು ಹೇಳಿದರು.
ಸರ್ಕಲ್ ಇನ್‌ಸ್ಪೆಕ್ಟರ್ ಉಮೇಶ್ ನಾಯಕ ಮಾತನಾಡಿ,
ನಿಮ್ಮ ಅತೀ ವೇಗದ ಚಾಲನೆಯು ಅಪಘಾತಕ್ಕೆ ಕಾರಣವಾಗಿ ಶಾಶ್ವತ
ಅಂಗವೈಕಲ್ಯ ಉಂಟಾಗಬಹುದು ಎಚ್ಚರ. ಮಿತ ವೇಗದಲ್ಲಿ ವಾಹನ ಚಾಲನೆ ಮಾಡಿ ಮತ್ತು
ಸುರಕ್ಷಿತವಾಗಿರಿ!ವಾಹನ ಚಲಾಯಿಸುವಾಗ ವೇಗದ ಮಿತಿಯ ಬಗ್ಗೆ ಗಮನವಿರಲಿ. ಅತೀ ವೇಗದ ಚಾಲನೆಯಿಂದ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಕಾರಣವಾಗಬಹುದು ಎಚ್ಚರ!ا
ನೀವೂ ಸುರಕ್ಷಿತವಾಗಿರಿ,
ನಿಮ್ಮವರನ್ನೂ ಸುರಕ್ಷಿತವಾಗಿರಿಸಿ.
ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸಿ.ರಸ್ತೆ ಅಪಘಾತಗಳಲ್ಲಿ ಸಂಭವಿಸಬಹುದಾದ ಪ್ರಾಣ ಹಾನಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಇದೇ
‘ಡಿ. 12ರಂದು ಹೆಲ್ಮೆಟ್ ಧರಿಸುವ ಬಗ್ಗೆ ಪ್ರಚಾರ ಮಾಡಿ, ಕಡ್ಡಾಯ ಮಾಡಲಾಗುವುದು. ನಂತರ ಹೆಲ್ಮೆಟ್ ಧರಿಸದ ಹಾಗೂ ಸಂಚಾರಿ ನಿಯಮಗಳು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು. ನಂತರ ಕೆಲ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ನೀಡಿದರು ಗುಲಾಬಿ ಹೂ ಕೊಟ್ಟು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಹೇಳಿದರು . ಇದೇ ವೇಳೆ ಪೊಲೀಸ್ ಸಿಬ್ಬಂದಿ ವರ್ಗದವರು, ಗೃಹರಕ್ಷಕ ದಳದವರು, ಸಾರ್ವಜನಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.





