ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ, ಕಲೋತ್ಸವ ಸಹಕಾರಿಯಾಗಿವೆ; ಗಂಗಾಧರ ನಾಯಕ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಹೊರತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಅತ್ಯುತ್ತಮ ವೇದಿಕೆ ಎಂದು ಗಂಗಾಧರ ನಾಯಕ ಹೇಳಿದರು.
ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜಿಪಂ, ತಾಪಂ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಸುರಪುರ, ಸಮೂಹ ಸಂಪನ್ಮೂಲ ಕೇಂದ್ರ ತಿಂಥಣಿ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಗೆಲುವು-ಸೋಲು ಮುಖ್ಯವಲ್ಲ, ಸಕ್ರಿಯವಾಗಿ ಪಾಲ್ಗೊಳ್ಳುವುದು ಮುಖ್ಯ ಎಂದರು.
ಗೋವಿಂದಪ್ಪ ತನಿಖೆದಾರ ಶಿಕ್ಷಕರ ಸಂಘದ ಅಧ್ಯಕ್ಷರು ಮಾತನಾಡಿ, ‘ಪ್ರತಿಭಾ ಕಾರಂಜಿ ಮಗುವಿನ ಸರ್ವತೋಮುಖ ಪ್ರಗತಿ ಜೊತೆಗೆ ವಿವಿಧ ಸಾಂಸ್ಕೃತಿಕ ಪ್ರತಿಭೆ ಹೊರ ಹಾಕುವ ಜೊತೆಗೆ ಮುಂಬರುವ ದಿನಗಳಲ್ಲಿ ಉನ್ನತ ಸ್ಥಾನ ಪಡೆಯಲು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಭೀಮಣ್ಣ ಕವಾಲ್ದಾರ್, ದೇವೇಂದ್ರಪ್ಪ ಅಂಬಿಗೇರ್, ಮಲ್ಲಿಕಾರ್ಜುನ ಸಾಹುಕಾರ್ ಹಾಗೂ ಅಧಿಕಾರಿ ವರ್ಗದ ರಾಜಶೇಖರ್ ದೇಸಾಯಿ ಗುರು ರಾಥೋಡ್, ಸೋಮನಾಥ ಬಾಕ್ಲಿ ಇಸಿಓ ,ಮಹಾಂತೇಶ ಸಿ ಆರ್ ಸಿ ಮಂಜಲಾಪುರ್, ಶಿವಾನಂದ ಸ್ವಾಮಿ, ಆರ್ ದೊರೆ ಸುದ್ದಿ ಸಂಪಾದಕರು ಪ್ರಜಾ ಆಕ್ರೋಶ ಪತ್ರಿಕೆ ಹಾಗೂ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಈ ಭಾಗದ ಶಿಕ್ಷಣ ಸಂಯೋಜಕರು ಹಾಗೂ ವಲಯ ಸಂಯೋಜಕರು ಹಾಗೂ ಗ್ರಾಮದ ಯುವಕರು ಮುಖಂಡರು ಗ್ರಾಮ ಪಂಚಾಯತಿ ಸದಸ್ಯರುಗಳು ಭಾಗವಹಿಸಿದ್ದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಫೂರಸಾಬ ಹವಲ್ದಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾನಮ್ಮ ರತ್ನರಾಜ್ ಶಾಲಿಮನಿ ಅಧ್ಯಕ್ಷರು ಗ್ರಾಮ ಪಂಚಾಯತ್ ತಿಂಥಣಿ, ಡಿ ಎನ್ ಹಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಿಂಥಣಿ, ಮುದೇಪ್ಪ ಬೂದುಗುಂಪಿ, ಲಿಂಗಣ್ಣ ಆಚಾರ್ಯ, ಸಂಜೀವಪ್ಪ ನಾಯಕ್, ಫಕ್ರುದ್ದೀನ್ ಹವಲ್ದಾರ್ ಇಸ್ಮಾಯಿಲ್ ಕೆಇಬಿ, , ಮನೋಹರ್ ಪತ್ತಾರ ದೇವರಾಜ್ ದಳವಾಯಿ, ಸೇವಾ ನಾಯಕ ದಾದಲಪುರ್, ಬಸನಗೌಡ ಶಾಂತಪುರ್ ಶ್ರೀಮತಿ ಅಕ್ಕುಬಾಯಿ ಕಸ್ತೂರಿಬಾ ಸ್ಕೂಲ್, ಚಿಂತಾಮಣಿ ಹೈಸ್ಕೂಲ್, ಶ್ರೀಮತಿ ವಿಜಯಲಕ್ಷ್ಮಿ ಬಂಡೋಳಿ, ಶ್ರೀ ಶರಣಗೌಡ,ಶ್ರೀ ಭೈರಣ್ಣ ಅಂಬಿಗರ,
ಬೈಲಪ್ಪ ಕುರ್ಲಿ, ಬಾಬು ಹವಾಲ್ದಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಮರೇಶ್ ಹುಜರತ್ತಿ ಮುಖ್ಯ ಗುರುಗಳು ತಿಂಥಣಿ ರವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.
ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರುಷಶಂಕರ್ ಶಿಕ್ಷಕರು ವಂದನಾರ್ಪಣೆ ನೆರವೇರಿಸಿದರು
ತಿಂಥಣಿ ಕ್ಲಸ್ಟರ್ ಶಾಲೆಗಳು ಭಾಗವಹಿಸಿದ್ದವು ಮಕ್ಕಳಿಂದ ವಿವಿಧ ಜಾನಪದ ನೃತ್ಯ ಹಾಗೂ ಕಲಿಕೆ ಸಂಬಂಧಪಟ್ಟಂತೆ ಪ್ರದರ್ಶನ ಹಾಗೂ ಗಾಯನ ನರ್ತನ ನೃತ್ಯ ಹಾಗೂ ವಿವಿಧ ವೇಷ ಭೂಷಣದ ವಿದ್ಯಾರ್ಥಿಗಳು ಅಲಂಕೃತಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.



