ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಮುಖ್ಯ; DYSP ಜಾವೀದ್ ಇನಾಮದಾರ್

ಸುರಪುರ ಟೈಮ್ಸ್ ವಾರ್ತೆ
ಸುರಪುರ; ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಪ್ರತಿವರ್ಷ ಡಿಸೆಂಬರರ್‌ನಲ್ಲಿ ಅಪರಾಧ ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಜಾವೀದ್ ಇನಾಮದಾರ್ ಹೇಳಿದರು.
ಅವರು ನಗರದ ವೀರಪ್ಪ ನಿಷ್ಠ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪೊಲೀಸ ಇಲಾಖೆ ಸುರುಪುರು ಇವರ ಸಂಯೋಗದಲ್ಲಿ ಅಪರಾಧ ತಡೆ ಮಾಸಾಚಾರಣೆ – 2025 ಮತ್ತು ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗರಣೆ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು ಕೇವಲ ‍ಪೊಲೀಸ್ ಇಲಾಖೆಯಿಂದ ಅಪರಾಧಗಳ ತಡೆ ಸಾಧ್ಯವಿಲ್ಲ ಇದಕ್ಕೆ ಸಾರ್ವಜನಿಕರು ಸಹಕಾರ ನೀಡುವುದೂ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಹಾಗೂ ವಿದ್ಯಾರ್ಥಿಗಳಿಗೆ ಕಾನೂನಿನ ಕುರಿತು ಅರಿವನ್ನು ಮೂಡಿಸುವುದು ಅವಶ್ಯಕವಾಗಿದೆ ಎಂದರು.

ಅಪರಾಧಗಳಲ್ಲಿ ಸಿಲುಕುವ ಅಪಾಯಗಳು, ಸಾಮಾಜಿಕ ಮಾಧ್ಯಮದ ಅಸದ್ಯಾವಹಾರ, ಹಾಗೂ ಕಾನೂನು ಉಲ್ಲಂಘನೆಯ ಪರಿಣಾಮಗಳು ಬಗ್ಗೆ ವಿದ್ಯಾರ್ಥಿಗಳನ್ನು ಎಚ್ಚರಿಸಿದರು ಮುಂದಾಗಿ, ಮಾದಕ ವಸ್ತುಗಳು ಮತ್ತು ಮದ್ಯಪಾನದ ದುಷ್ಪರಿಣಾಮಗಳು, ದೇಹ ಮನಸ್ಸಿನ ಮೇಲೆ ಉಂಟಾಗುವ ಹಾನಿ ಹಾಗೂ ಭವಿಷ್ಯದ ಮೇಲೆ ಬೀರುವ ಕೆಟ್ಟ ಪರಿಣಾಮಗಳನ್ನು ವಿವರಿಸಿದರು.

ಸಂಚಾರ ನಿಯಮಗಳ ಪಾಲನೆಯ ಅಗತ್ಯತೆ, ಹೆಲೈಟ್ ಮತ್ತು ಸೀಟ್-ಬೆಲ್ಸ್ ಬಳಕೆ, ಅತಿವೇಗ ಮತ್ತು ಮೊಬೈಲ್ ಬಳಕೆಯಿಂದಾಗುವ ರಸ್ತೆ ಅಪಘಾತಗಳ ಹೆಚ್ಚಳ ಬಗ್ಗೆ ತಿಳಿಸಿದರು.ವಿದ್ಯಾರ್ಥಿಗಳು ಇಂದು ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳು ನಾಳೆಯ ಉತ್ತಮ ಸಮಾಜಕ್ಕೆ ಆಧಾರವಾಗುತ್ತವೆ” ವಿದ್ಯಾರ್ಥಿಗಳು ಜವಾಬ್ದಾರಿಯುತ ನಾಗರಿಕರಾಗಬೇಕು ಹಾಗೂ ಕಾನೂನು ಪಾಲನೆ, ನೈತಿಕತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಿಐ ಉಮೇಶ್ ಎಂ ನಾಯಕ ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ ಎದುರಾಗುತ್ತಿರುವ ಹೊಸ ರೀತಿಯ ಅಪಾಯಗಳ ಕುರಿತು ವಿದ್ಯಾರ್ಥಿಗಳಿಗೆ ತೀವು ಜಾಗೃತಿ ಮೂಡಿಸಿದರು. ಇತ್ತೀಚೆಗೆ ಸೈಬರ್ ಅಪರಾಧಗಳು ಅತಿವೇಗವಾಗಿ ಹೆಚ್ಚುತ್ತಿದ್ದು. ಯುವಕರನ್ನೇ ಗುರಿಯಾಗಿಸಿಕೊಂಡಿರುವ ವಂಚನೆಗಳು ಹೆಚ್ಚುತ್ತಿರುವುದನ್ನು ಅವರು ವಿವರಿಸಿದರು. ಆನ್‌ಲೈನ್ ಮೂಲಕ ನಡೆಯುವ ಹಣಕಾಸು ವಂಚನೆಗಳು, OTP/ಲಿಂಕ್‌ಗಳ ಮೂಲಕ ಮಾಡುವ ಮೋಸ, ಅಪರಿಚಿತರಿಂದ ಬರುವ ಸಂದೇಶಗಳು ಹಾಗೂ ಕ್ಲಿಕ್ ಮಾಡಿರಿ’ ಎಂಬ ಪ್ರಲೋಭನೆಗಳ ಹಿಂದೆ ಇರುವ ಅಪಾಯಗಳನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು. ‘ಯಾವುದೇ OTP/ಪಾಸ್ವರ್ಡ್ ಅನ್ನು ಯಾರಿಗೂ ನೀಡಬಾರದು. ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯಬಾರದು, ಮತ್ತು ವೈಯಕ್ತಿಕ ಮಾಹಿತಿಯನ್ನು ಕೇವಲ ಅಧಿಕೃತ ಹಾಗೂ ಸುರಕ್ಷಿತ ವೆಬ್‌ಸೈಟ್‌ಗಳಲ್ಲಿ ಮಾತ್ರ ಹಂಚಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಸಂಚಾರ ನಿಯಮಗಳ ಪಾಲನೆ ಯಾಕೆ ಪ್ರತಿಯೊಬ್ಬರ ಜೀವಕ್ಕೆ ಸಂಬಂಧಿಸಿದೆ ಎಂಬುದನ್ನು ಸ್ಪಷ್ಟವಾಗಿ ವಿವರಣೆ ನೀಡಿದವರು,ಹೆಲ್ಕೆಟ್ ಧರಿಸುವುದು ಕೇವಲ ಕಾನೂನು ಪಾಲನೆ ಮಾತ್ರವಲ್ಲ, ಅದು ಜೀವನವನ್ನು ರಕ್ಷಿಸುವ ಗುರ್ತಿನ ಚಿಹ್ನೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಅತಿವೇಗ, ಮೊಬೈಲ್ ಬಳಸಿ ವಾಹನ ಚಲಾಯಿಸುವುದು, ಸೀಟ್‌ ಬೆಲ್ಟ್ ಬಳಸದಿರುವುದು ಇವುಗಳು ಕ್ಷಣ ಮಾತ್ರದಲ್ಲಿ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದರು.
ತಂಬಾಕು, ಗಾಂಜಾ, ಸಿಗರೇಟ್, ಹುಕ್ಕಾ ಮತ್ತು ಇತರೆ ಧೂಮಪಾನ ಉತ್ಪನ್ನಗಳ ದೇಹ-ಮನಸ್ಸಿನ ಮೇಲೆ ಬೀರುವ ಭಯಾನಕ ಪರಿಣಾಮಗಳು, ವ್ಯಸನದ ದಾಸ್ಯತೆ ಮತ್ತು ಅದು ಭವಿಷ್ಯವನ್ನು ಹೇಗೆ ಹಾಳುಮಾಡುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ನೀಡಿದರು.

ಶಸಸ್ತ್ರ ಮೀಸಲು ಪಡೆಯ ಮುಖ್ಯಪೇದೆ ಪರಶುರಾಮ ಯಂಕಂಚಿ ಹಾಗೂ ದಯಾನಂದ ಜಮಾದಾರ್ ಪೊಲೀಸ್ ಪೇದೆ ಸುರಪುರ ಪೊಲೀಸ್ ಠಾಣೆ ಇವರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಾಚಾರ್ಯರಾದ ಡಾ. ಶರಣಬಸಪ್ಪ ಸಾಲಿ ಯವರು ಅತಿಥಿಗಳನ್ನು ಸ್ವಾಗತಿಸಿ ಸನ್ಮಾನಿಸಿದರು, ಡಾ. ಅಶೋಕ ಪಾಟೀಲ್, ಎಕ್ಸಾಮ್ ಡೀನ್, ಸಂಯೋಜಕಾದ ಪ್ರೊ. ಸಿದ್ದಣ್ಣಗೌಡ ಪಾಟೀಲ್, ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಪ್ರೊ. ಗಂಗಾಧರ ಹೂಗಾರ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!