ತಳವಾರಗೇರಾದಲ್ಲಿ ಮಾ.20ರಿಂದ 17ನೇವರ್ಷದ ಮಹಾಶಿವಶರಣ ವಿಶ್ವಜ್ಯೋತಿ ವಿಶ್ವರಾಧ್ಯ ಮಹಾಪುರಾಣ

ಸುರಪುರ ಟೈಮ್ಸ್ ವಾರ್ತೆ

ಸುರಪುರ ; ಸೊಲ್ಲಾಪೂರ ಜಿಲ್ಲೆಯ ಹೊಟಗಿಬೃಹನ್ಮಠದತಾಲೂಕಿನತಳವಾರಗೇರಿಯ ಶಾಖಾ ಬೃಹನೃಠದಲ್ಲಿ 17ನೇವರ್ಷದ ಮಹಾಶಿವಶರಣ ವಿಶ್ವಜ್ಯೋತಿ ವಿಶ್ವರಾಧ್ಯ ಮಹಾಪುರಾಣ ಮಾ.20ರಿಂದ ನಡೆಯಲಿದೆ.
ಮಾರ್ಚ30ರಂದು ಮಹಾಪುರಾಣ ಮಹಾಮಂಗಲ, ಸಾಮೂಹಿಕ ವಿವಾಹ, ರಥೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.ಶ್ರೀಮದ್ ಕಾಶೀ ಜ್ಞಾನ ಸಿಂಹಾಸನದ ಪೀಠಾದೀಪತಿ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಕಾರ್ಯ ಕ್ರಮದ ಸಾನ್ನಿಧ್ಯವನ್ನು ವಹಿಸುವರು.
ಮಾರ್ಚ್ 20ರಿಂದ ಪ್ರತಿದಿನ ಸಾಯಂಕಾಲ ಶರಣ ರಮೇಶ ಯಾಳಗಿ ವರು ಮಹಾಪುರಾಣ ವಾಚನ ನಡೆಸ ಲಿದ್ದು, ಸಂಗೀತ ಕಾರ್ಯಕ್ರಮ ಗುರುಕುಮಾರ ಹೂಗಾರ, ಮಹಾದೇವ ತಬಲಾ ವಾದನ ನುಡಿಸುವರು.
ಸೊಲ್ಲಾಪುರದ ಬೃಹನ್ಮಠದ ಚನ್ನ ಯೋಗಿ ರಾಜೇಂದ್ರ ಶಿವಾಚಾರ್ಯ, ಮಾಗಣಗೇರಿ ಬೃಹನ್ಮಠದ ಶಿವಾಚಾರ್ಯ ರತ್ನ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
ಮಾರ್ಚ್30ರಂದು ಬೆಳಗ್ಗೆ 6ಗಂಟೆಗೆ
ಚನ್ನವೀರ ಶಿವಾಚಾರ್ಯರ ಮೂರ್ತಿಗೆ ರುದ್ರಾಭೀಷೇಕ ಕಾರ್ಯಕ್ರಮ ನಡೆಯಲಿದಿದೆ.ಈ ಸಂದರ್ಭಲದಲಿ ಜಂಗಮ ವಟು ಗಳಿಗೆ ಅಯ್ಯಾಚಾರ ಭಕ್ತರಿಗೆ ಶಿವಧೀಕ್ಷೆ ಕಾರ್ಯಕ್ರಮಗಳು ನಡೆಯಲಿವೆ.
ಅಂದು ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ಪುರಾಣ ಮಹಾಮಂಗಲ ನಂತರ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆ ನಡೆಯುವು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!