ಏ.15 ರವರೆಗೆ ನೀರು ಹರಿಸಲು ಕೃಷ್ಣರೆಡ್ಡಿ ಮುದನೂರ ಒತ್ತಾಯ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ನಾರಾಯಣಪುರದ ಬಸವ ಸಾಗರ ಬಲದಂಡೆಮತ್ತು ಎಡದಂಡೆ ಕಾಲುವೆಗೆ ಏ.15 ರ ವರೆಗೆ ನೀರು ಹರಿಸಬೇಕು ಎಂದು ಬಿಜೆಪಿ ಯುವ ಮುಖಂಡ ಕೃಷ್ಣರೆಡ್ಡಿ ಮುದನೂರ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಸವ ಸಾಗರದಲ್ಲಿ ಸಾಕಷ್ಟು ನೀರು ಇದೆ.
ಕಳೆದ ವರ್ಷವು ಕೂಡಾ ಜಲಾಶಯದಲ್ಲಿ ಸಾಕಷ್ಟು ನೀರಿದ್ದು ಬೇಸಿಗೆ ಬೆಳೆಗೆ ನೀರು ಹರಿಸಲಿಲ್ಲ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸದರು. ನಾವು ಕೇಳುವುದು ನೀರು ಕೊಡಿ ಎಂದು ಮಾತ್ರ.
ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದೆ. ಮಾರ್ಚ್ 23ಕ್ಕೆ ನೀರು ನಿಲ್ಲಿಸಿದರೆ ಬೆಳೆ ಕೈಗೆ ಬರುವುದಿಲ್ಲ ಎಂದು ಹೇಳಿದರು. ಜಲಾಶಯದಲ್ಲಿ ನೀರು ಇದ್ದು ಕಾಲುವೆಗಳಿಗೆ ನೀರು ಹರಿಸುವುದಿಲ್ಲ ಅಂದರೆ ಇದು ಯಾವ ನ್ಯಾಯ. ನೀರು ಇಲ್ಲದೆ ಇದ್ದರೆ ನಾವ್ಯಾರು ಕೇಳುತ್ತಿರಲಿಲ್ಲ. ಕಾರಣ ಜಲಾಶಯದಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದೆ. ಸರಕಾರ ರೈತರಿಗೆ ಅನ್ಯಾಯ ಮಾಡಬಾರದು. ಏ.15 ರ ವರೆಗೆ ನೀರು ಬಿಟ್ಟರೆ ಮಾತ್ರ ಈ ಭಾಗದ ಬೆಳೆಗಳು ರೈತರಿಗೆ ಕೈ ಹಿಡಿಯುತ್ತವೆ. ಇಲ್ಲದಿದ್ದರೆ ರೈತರ ಸ್ಥಿತಿ ಗಂಭೀರವಾಗುತ್ತದೆ. ಸರಕಾರ ನೀರು ಹರಿಸಲು ನಿರ್ಲಕ್ಷ್ಯವಹಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
