ಡಿ.26ಕ್ಕೆ ತಾಲೂಕು ಮಟ್ಟದ ವಿಕಲಚೇತನರ ದಿನಾಚರಣೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಇಲ್ಲಿಯ ಗರುಡಾದ್ರಿ ಕಲಾ ಮಂದಿರದಲ್ಲಿ ಡಿ.26 ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸುರಪುರ-ಹುಣಸಗಿ ತಾಲೂಕು ಮಟ್ಟದ ವಿಕಲಚೇತನರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವಿಕಲಚೇತನರ ಹಕ್ಕುಗಳ ಒಕ್ಕೂಟ ಮತ್ತು ಗ್ರಾಮೀಣ ನಗರ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಮುಖಂಡರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡರು, ವಿಶ್ವ ವಿಕಲಚೇತನರ ದಿನಾಚರಣೆ ನಿಮಿತ್ತವಾಗಿ ಈ ದಿನಾಚರಣೆ ಆಯೋಜಿಸಲಾಗಿದೆ. ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್, ಶರಣಬಸಪ್ಪಗೌಡ ದರ್ಶನಾಪುರ, ಸಂತೋಷ್ ಲಾಡ್ ಘನ ಉಪಸ್ಥಿತಿ. ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಉದ್ಘಾಟಿಸುವರು. ಶಾಸಕ ರಾಜಾ ವೇಣುಗೋಪಾಲ ನಾಯಕ ಅಧ್ಯಕ್ಷತೆ ವಹಿಸುವರು.
ಸಂಸದ ಜಿ.ಕುಮಾರ ನಾಯಕ ಮತ್ತು ಮಾಜಿ ಸಚಿವ ರಾಜುಗೌಡ ಅವರು ಜ್ಯೋತಿ ಬೆಳಗಿಸುವರು. ದೇವಪುರದ ಶ್ರೀ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ, ಲಕ್ಷ್ಮೀಪುರ ಶ್ರೀಗಿರಿ ಸಂಸ್ಥಾನ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಂಗಳೂರಿನ ಡಿಎಕ್ಸ್ ಮ್ಯಾಕ್ಸ್ ಕಂಪನಿ ನಿರ್ದೇಶಕ ಎಸ್.ಪಿ.ದಯಾನಂದ ವಿಶೇಷ ಆಹ್ವಾನಿತರಾಗಿರುತ್ತಾರೆ.
ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ, ಪ್ರಮುಖರಾದ ವೇಣುಗೋಪಾಲ ಜೇವರ್ಗಿ, ಗ್ಯಾನಚಂದ್ ಜೈನ್, ಜಿಪಂ ಮಾಜಿ ಉಪಾಧ್ಯಕ್ಷ ಸುರೇಶ್ ಸಜ್ಜನ್, ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಬಿ.ಎಂ.ಅಳ್ಳಿಕೋಟೆ, ಎಚ್.ಸಿ.ಪಾಟೀಲ್, ವೇಣುಮಾಧವ ನಾಯಕ, ಸಂಗಣ್ಣ ವೈಲಿ, ನಿಂಗರಾಜ್ ಬಾಚಿಮಟ್ಟಿ, ಚಂದ್ರಶೇಖರ ದಂಡಿನ್, ಸಿದ್ದಣ್ಣ ಮಲಗಲದಿನ್ನಿ, ಕಾಳಪ್ಪ ಕಾವತಿ ಸೇರಿ ಇನ್ನಿತರ ಪ್ರಮುಖರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಒಕ್ಕೂಟದ ಮುಖಂಡರಾದ ಸಂಗನಗೌಡ ಧನರೆಡ್ಡಿ, ಮಾಳಪ್ಪ ಪೂಜಾರಿ, ಬಸವರಾಜ ಬನ್ನೆಟ್ಟಿ, ನಾಗೇಂದ್ರ ದೊರೆ, ಶರಣಪ್ಪ ಬಡಿಗೇರ, ಮಲ್ಲಿಕಾರ್ಜುನ ಅನಸೂರ, ಸಿದ್ದಪ್ಪ ಕಲ್ಲೂರ, ಪರಶುರಾಮ, ದ್ಯಾವಣ್ಣ ಬೊಮ್ಮನಹಳ್ಳಿ, ಯಮನಪ್ಪ ವಾಗಣಗೇರಿ, ಗುರು ಗುತ್ತೇದಾರ್, ಸೋಮು ಕಟ್ಟಿಮನಿ ಅಲ್ದಾಳ, ಹುಸನಪ್ಪ ದೇವಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.






