ಪಿಯುಸಿ ವಿದ್ಯಾರ್ಥಿಗಳಿಗೆ  ಕನ್ನಡ ಸಂಪದಾ ಪರೀಕ್ಷಾ ಕೈಪಿಡಿ ವರದಾನ; ಬೂದೆಪ್ಪ ಎನ್.ಶೆಟ್ಟಿ

ಸುರಪುರ ಟೈಮ್ಸ್ ವಾರ್ತೆ

ಸುರಪುರ :ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಕನ್ನಡ ಸಂಪದಾ ಪರೀಕ್ಷಾ ಕೈಪಿಡಿ ಬಹಳಷ್ಟು ವರದಾನವಾಗಲಿದೆ ಎಂದು ಶೆಟ್ಟಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಬೂದೆಪ್ಪ ಎನ್ ಶೆಟ್ಟಿ ಹೇಳಿದರು. ವಿಷಯವಾರು ಪ್ರಮುಖ ಪ್ರಶ್ನೆಗಳು, ಅಧ್ಯಾಯಾಧಾರಿತ ಅಭ್ಯಾಸ ಪ್ರಶ್ನೆಗಳು ಹಾಗೂ ಪರೀಕ್ಷಾ ಮಾದರಿಯ ಮಾಹಿತಿ ಈ ಕೈಪಿಡಿಯಲ್ಲಿ ಒಳಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಇದು ಮಾರ್ಗದರ್ಶಕವಾಗಲಿದೆ ಎಂದು ತಿಳಿಸಿದರು.

ಅವರು ನಗರದ ಶ್ರೀಮತಿ ಎನ್ .ಎನ್. ಶೆಟ್ಟಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾದ ಶ್ರೀ ನಿಂಗಯ್ಯ ಆರ್ ಕಿಲ್ಲೇದಾರ ರಚಿಸಿರುವ ದ್ವಿತೀಯ ಪಿಯುಸಿ ಕನ್ನಡ ಸಂಪದ ಪರೀಕ್ಷಾ ಕೈಪಿಡಿಯನ್ನು ಬಿಡುಗಡೆಗೊಳಿ ಮಾತನಾಡಿದ ಅವರು  ಇದು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಗಳಿಸಲು ಬಹಳಷ್ಟು ಪ್ರಯೋಜನಕಾರಿಯಾಗಿದೆ ಎಂದು ನುಡಿದರು. ಕನ್ನಡ ಸಂಪದ ಪರೀಕ್ಷಾ ಕೈಪಿಡಿ ರಚನಕಾರ ನಿಂಗಯ್ಯ ಕಿಲ್ಲೇದಾರ ಮಾತನಾಡಿ ಇದು ವಿದ್ಯಾರ್ಥಿಗಳು ಪ್ರತಿಶತ ಅಂಕ ಪಡೆಯಲು ಬಹಳಷ್ಟು ಸಹಕಾರಿಯಾಗಿದೆ ಮತ್ತು ನನ್ನ ಬೋಧನಾ ಅನುಭವದ ಆಧಾರದ ಮೇಲೆ ಈ ಪರೀಕ್ಷಾ ಕೈಪಿಡಿಯನ್ನು ರಚಿಸಲಾಗಿದೆ ಇದರ ಸದುಪಯೋಗವನ್ನು ಕರ್ನಾಟಕದ ಎಲ್ಲಾ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಹೇಳಿದರು. ಅದರಲ್ಲೂ ಹಿಂದುಳಿದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಈ ಪರೀಕ್ಷಾ ಕೈಪಿಡಿ ತಪ್ಪದೇ ಅಭ್ಯಾಸ ಮಾಡಿ ನಮ್ಮ ಭಾಗದ ಫಲಿತಾಂಶವನ್ನು ಹೆಚ್ಚಿಸಬೇಕೆಂದು ಹೇಳಿದರು. ಸಮಾರಂಭದಲ್ಲಿ ಕಾಲೇಜಿನ, ಕಾರ್ಯದರ್ಶಿ  ತಿರುಪತಿ ಎನ್ ಶೆಟ್ಟಿ, ಪ್ರಾಂಶುಪಾಲ  ಲಕ್ಷ್ಮಿ ಬಿ ಶೆಟ್ಟಿ, ಪ್ರಧಾನ ಗುರುಗಳಾದ  ರಾಜೇಶ್ವರಿ ಟಿ.ಶೆಟ್ಟಿ, ಉಪನ್ಯಾಸಕರಾದ  ರಾಜಶೇಖರ ದೇಸಾಯಿ ಮಠ, ಶಿವಕುಮಾರ್, ಲಿಂಗರಾಜ್, ಮಹಮ್ಮದ್ಸಾ, ಸಂಗಮೇಶ್ ಪಾಲ್ಕಿ, ನಿಂಗನಗೌಡ, ಪೂಜಾ ,ಸಹನಾ ಉಪಸ್ಥಿತರಿದ್ದರು. ಸಂಗೀತಾ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡಿದರು ಶ ಶಿವಶಂಕರ್ ಮೋಳ್ಕರ್ ನಿರೂಪಿಸಿದರು. ಸಂಜೀವ್ ರೆಡ್ಡಿ ಸರ್ ವಂದಸಿದರು.

Leave a Reply

Your email address will not be published. Required fields are marked *

error: Content is protected !!