ತಕ್ಷ ಉತ್ಸವ- 2025 ಸಾಂಸ್ಕೃತಿಕ ಚಟುವಟಿಕೆಗಳ ಅನಾವರಣ ಡಿ.28 ಕ್ಕೆ ; ಅಂಬಿಕಾ ಎಂ.ಯನಗುಂಟಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಸಮೀಪದ ಹಸನಾಪುರ ತಕ್ಷಶಿಲಾ ಇಂಟರ್ ನ್ಯಾಷನಲ್ ಸೂಲ್ಕ್ನಲ್ಲಿ ಡಿ.28 ರಂದು ಭಾನುವಾರ ಸಂಜೆ 4 ಗಂಟೆಗೆ ತಕ್ಷ ಉತ್ಸವ-2025 ಅದ್ಧೂರಿ ಸಮಾರಂಭ ಏರ್ಪಡಿಸಲಾಗಿದೆ ಎಂದು ತಕ್ಷಶಿಲಾ ಇಂಟರ್ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷೆ ಅಂಬಿಕಾ ಎಂ.ಯನಗುಂಟಿ ಹೇಳಿದರು.
ಇಲ್ಲಿಯ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ವೈ.ವರದರಾಜ್ ಏಜುಕೇಷನಲ್ ಮತ್ತು ಕಲ್ಚರಲ್ ಟ್ರಸ್ಟ್ನ ಈ ಶಾಲೆಯಲ್ಲಿ ಶಾಲೆಯ ಎರಡನೇ ವಾರ್ಷಿಕೋತ್ಸವ ಸಮಾರಂಭದ ನಿಮಿತ್ತ ತಕ್ಷಶಿಲಾ ಉತ್ಸವ ಆಯೋಜಿಸಿದ್ದು ಉತ್ಸವವನ್ನು ಸಂಭ್ರಮದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಕಲಬುರಗಿಯ ಬ್ರಹ್ಮಪುರ-ಶಜಾಬಜಾರ್‌ದ ಚವುದಾಪುರಿ ಹಿರೇಮಠದ ಪೂಜ್ಯ ಡಾ.ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಉದ್ಘಾಟಿಸುವರು. ಶಾಸಕ ರಾಜಾ ವೇಣುಗೋಪಾಲ ನಾಯಕ ಮುಖ್ಯ ಅತಿಥಿಯಾಗಿರುತ್ತಾರೆ. ಎಸಿಟಿ ಅಧ್ಯಕ್ಷ, ಶಿಕ್ಷಣ ತಜ್ಞ ಡಾ.ಗುರುರಾಜ್ ಕರಜಗಿ, ಡಿವೈಎಸ್‌ಪಿ ಜಾವೇದ್ ಇನಾಮದಾರ್, ಎಸಿಟಿ ನಿರ್ದೇಶಕ ಎನ್.ಎಂ.ಪಾಟೀಲ್, ಡಿಡಿಪಿಐ ಚನ್ನಬಸಪ್ಪ ಮುಧೋಳ, ತಹಸೀಲ್ದಾರ್ ಹೆಚ್.ಎ.ಸರಕಾವಸ್, ಪಿಐ ಉಮೇಶ್ ಎಂ.ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ, ಉದ್ಯಮಿ ಗ್ಯಾನ್‌ಚಂದ ಜೈನ್ ಅತಿಥಿಗಳಾಗಿರುತ್ತಾರೆ.
ವೈ.ವರದರಾಜ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷೆ ಅಂಬಿಕಾ ಎಂ.ಯನಗುಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಕೂಲ್‌ನ ಪ್ರಧಾನ ರಾಕೇಶ್ ನಾಯರ್, ಶಿಕ್ಷಕರು ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಗೌರಿಶಂಕರ ಯನಗುಂಟಿ, ಪ್ರಮುಖರಾದ ಶಂಕರ ಬಡಿಗೇರ್, ರಂಗಣ್ಣ ಪೂಜಾರಿ ದೇವಿಕೇರಾ, ಜಗದೀಶ್ ನಂಬಾ ಹಸನಾಪುರ, ರಂಗನಾಥ ಬಿರಾದಾರ್ ಕವಡಿಮಟ್ಟಿ, ರಾಜು ಗೋನಾಲ, ಮೌನೇಶ್ ಪೂಜಾರಿ ದೇವಿಕೇರಾ, ಬಸವರಾಜ ದೋರನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಅನಾವರಣ
ತಕ್ಷ ಉತ್ಸವದಲ್ಲಿ ಶಿಕ್ಷಣ ತಜ್ಞ ಡಾ.ಗುರುರಾಜ್ ಕರಜಿಗಿ ಭಾಗವಹಿಸಿ ಶಿಕ್ಷಣದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಉತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಶಾಲಾ ಮಕ್ಕಳಿಂದ ನೃತ್ಯ, ಸಂಗೀತ, ಹಾಡುಗಾರಿಕೆ ಮತ್ತು ನಾಟಕಗಳ ಪ್ರದರ್ಶನವಿದ್ದು ಉತ್ಸವದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಅನಾವರಣಗೊಳ್ಳಲಿವೆ. ಒಟ್ಟಾರೆ ತಕ್ಷ ಉತ್ಸವ-2025 ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ತಾಲೂಕಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸ್ಥಳೀಯವಾಗಿ, ಸುಲಭವಾಗಿ ಸಿಗಬೇಕು ಎಂಬ ಸದುದ್ಧೇಶದಿಂದ ತಕ್ಷಶಿಲಾ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರತಿಷ್ಠಾಪಿಸಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಎರಡು ವರ್ಷದಲ್ಲಿಯೇ ನಿರೀಕ್ಷೆಗೂ ಮೀರಿ ಶಾಲೆ ಅಭಿವೃದ್ಧಿ ಹೊಂದಿದೆ. ವಿದ್ಯಾರ್ಥಿಗಳ ಸಂಖ್ಯೆ ನಿರೀಕ್ಷೆಗೂ ಮೀರಿದೆ. ನುರಿತ ಶಿಕ್ಷಕರಿಂದ ಉತ್ತಮ ಬೋಧನೆ ನೀಡಲಾಗುತ್ತಿದೆ. ಪಠೇತರ ಚಟುವಟಿಕೆಗಳಿಗೂ ಪ್ರಾಶಸ್ರ್ತ ನೀಡಲಾಗುತ್ತಿದೆ ಎಂದು ಸ್ಕೂಲ್‌ನ ಅಧ್ಯಕ್ಷೆ ಅಂಬಿಕಾ ಯನಗುಂಟಿ ಹೇಳಿದರು.

ಫೋಟೊ :  ಸುರಪುರ ಪತ್ರಿಕಾ ಭವನದಲ್ಲಿ ತಕ್ಷಶಿಲಾ ಇಂಟರ್‌ನ್ಯಾಷನಲ್ ಸ್ಕೂಲ್‌ನವರು ತಕ್ಷ ಉತ್ಸವ-2025 ಕಾರ್ಯಕ್ರಮದ ಭಿತ್ತಿಪತ್ರ ಪ್ರದರ್ಶಿಸಿದರು.

Leave a Reply

Your email address will not be published. Required fields are marked *

error: Content is protected !!