ಇಂದಿನಿಂದ ರಂಗಂಪೇಟೆಯ ಶ್ರೀ ಈಶ್ವರ ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸದ


ಸುರಪುರ ಟೈಮ್ಸ್ ವಾರ್ತೆ

ಸುರಪುರ ;ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಶ್ರೀ ಈಶ್ವರ ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸ ಜರಗಲಿದೆ ಇಂದು ಸಾಯಂಕಾಲ: 06:30 ಕ್ಕೆಶ್ರೀ ಬನಶಂಕರಿ ದೇವಿಗೆ ಕಾಯಿಪಲ್ಯ ಹಬ್ಬ ಅಲಂಕಾರ, ಕುಂಕುಮ ಅರ್ಚನೆ, ಮಹಾ ಮಂಗಳಾರತಿ ನಾಳೆ  ಶನಿವಾರ ಬೆಳಿಗ್ಗೆ : 04:00 ಗಂಟೆಗೆ ಶ್ರೀ ಬನಶಂಕರಿ ದೇವಿಗೆ ಪಂಚಾಮೃತ ಅಭಿಷೇಕ, ಮಂಗಲ ಸ್ನಾನ, ಅಲಂಕಾರ, ಮಹಾ ಮಂಗಳಾರುತಿ ಬೆಳಿಗ್ಗೆ : 8:30 ಗಂಟೆಗೆ ಉತ್ಸವ ಮೂರ್ತಿಗಳಿಗೆ ಗಂಗಾ ಸ್ನಾನ, ಪಲ್ಲಕ್ಕಿ ಉತ್ಸವದೊಂದಿಗೆ ಪುರವಂತರ ಸೇವೆ ಗರ್ಭ ಗುಡಿ ಪ್ರವೇಶ
ಬೆಳಿಗ್ಗೆ : 11:00 ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ, ಮಹಾ ಮಂಗಳಾರುತಿ ನಂತರ ಮಹಾ ಪ್ರಸಾದ ಜರಗಲಿದೆ ಎಂದು ಶ್ರೀ ಈಶ್ವರ ಬನಶಂಕರಿ ದೇವಿ ದೇವಸ್ಥಾನ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!