ಬೋನ್ಹಾಳ ಗ್ರಾಮಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಲು ಒತ್ತಾಯ; ರಾಹುಲ್ ಹುಲಿಮನಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಬೋನ್ಹಾಳ ಗ್ರಾಮದಿಂದ ಶಾಲಾ ,ಕಾಲೇಜು ವಿದ್ಯಾರ್ಥಿಗಳ ನಿತ್ಯ ಸಂಚಾರಕ್ಕಾಗಿ ಪ್ರತ್ಯೇಕ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು, ಸಾರ್ವಜನಿಕರು ಶನಿವಾರ ಸುರಪುರ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಮಾಡಿದರು.
ದಲಿತ ಸಂಘಟನೆಯ ರಾಜ್ಯ ಸಂಚಾಲಕ ರಾಹುಲ್ ಹುಲಿಮನಿ ಮಾತನಾಡಿ, ‘ಸಾರಿಗೆ ಬಸ್‍ಗಳ ಸಮಸ್ಯೆಯಿಂದ ಶಾಲಾ, ಕಾಲೇಜುಗಳಿಗೆ ತೆರಳಲು ನಿತ್ಯ ಸಮಸ್ಯೆಯಾಗುತ್ತಿದೆ. ಸುರಪುರ ಪಟ್ಟಣಕ್ಕೆ ತೆರಳಲು ಬೆಳಗಿನ ಸಮಯದಲ್ಲಿ ಒಂದೇ ಬಸ್ ಇರುವುದರಿಂದ ತಳ್ಳಳ್ಳಿ ಕೆ ,ಚಿಕ್ಕನಹಳ್ಳಿ ಬಿ.ದೊಡ್ಡಿ, ಎಲ್ಲಾ ಗ್ರಾಮಗಳ ವಿದ್ಯಾರ್ಥಿಗಳು ಒಂದೇ ಬಸ್‍ನಲ್ಲೆ ತೆರಳಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯವರು ಬೋನ್ಹಾಳ ಗ್ರಾಮದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್‍ನ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಸುರಪುರ ಡಿಪೋ ಮ್ಯಾನೇಜರ್ ಗೆ ಮನವಿ ಮಾಡಿ ಬೆಳಿಗ್ಗೆ 8.45 ಕ್ಕೆ ಸುರಪುರದಿಂದ ಬೋನಾಳಕ್ಕೆ ಹೊರಟು ಮರಳಿ ಬೋನಾಳ ದಿಂದ ಸುರಪುರಕ್ಕೆ ಬರಬೇಕು ಮತ್ತು ಸಾಯಂಕಾಲ 4:30ಕ್ಕೆ ಹೊರಟು ಮರಳಿ ಬೋನಾಳದಿಂದ ವಾಪಸ್ ಬರಬೇಕು ಈ ಸೌಲಭ್ಯ ಒದಗಿಸಿ ಕೊಡಬೇಕು ಎಂದು ಹೇಳಿದರು.ನಮ್ಮ ಮನವಿ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ ಎಲ್ಲಾ ವಿದ್ಯಾರ್ಥಿಗಳ ವೃಂದದೊಂದಿಗೆ ಡಿಪೋ ಮುಂದುಗಡೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ರಾಜು ಶಕಾಪುರ್, ವೈಜನಾಥ ಹೊಸಮನಿ, ನಾಗರಾಜ್ ಬೇವಿನಗಿಡ, ಗಣೇಶ್ ದೇವಿಕೇರಿ, ಅವಿನಾಶ್ ಹೊಸ್ಮನಿ, ಹಣಮಂತ್ ಕೊಡ್ಲಿ ಗಜ ತಳವಾರ್,ಶರಣಪ್ಪ ಹುಲಿಮನಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.



