ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 4.9 ಕೋಟಿ ವೆಚ್ಚದ ಶಾಲಾ ಕಟ್ಟಡ ನಿರ್ಮಾಣ; ಶಾಸಕ ಆರ್ವಿನ್

ಸುರಪುರ ಟೈಮ್ಸ್ ವಾರ್ತೆ
ಸುರಪುರ : ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿಯೊಂದಿಗೆ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಸಮೀಪದ ರಂಗಂಪೇಟೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ವತಿಯಿಂದ 2025-26 ನೇ ಸಾಲಿನಲ್ಲಿ 4.9 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕರ್ನಾಟಕ ಮೌಲನಾ ಆಜಾದ್ ಪಬ್ಲಿಕ್ ಶಾಲೆಯ ನೂತನ ಕಟ್ಟಡಕ್ಕೆ ಶನಿವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಕರ್ನಾಟಕ ಮೌಲನಾ ಆಜಾದ್ ಪಬ್ಲಿಕ್ ಶಾಲೆಯ ಮಕ್ಕಳು ಸ್ವಂತ ಕಟ್ಟಡದಲ್ಲಿ ಮತ್ತು ಉತ್ತಮ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂಬುದು ನನ್ನ ತಂದೆಯವರ ಕನಸಾಗಿತ್ತು ಎಂದ ಅವರು, ಗುತ್ತಿಗೆದಾರರು 8-9 ತಿಂಗಳಲ್ಲಿ ತ್ವರಿತ ಗತಿಯಲ್ಲಿ ಈ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು. ಉತ್ತಮ ಶಿಕ್ಷಣದಿಂದ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯ. ಕಾರಣ ಈ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ, ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಆಶಿಸುತ್ತೇನೆ. ಹುಣಸಗಿ ತಾಲೂಕಿನಲ್ಲಿಯೂ ಕರ್ನಾಟಕ ಮೌಲನಾ ಆಜಾದ್ ಪಬ್ಲಿಕ್ ಶಾಲೆ ಇರುತ್ತದೆ. ಕ್ಷೇತ್ರದಲ್ಲಿ ಮೂಲಸೌಲಭ್ಯಗಳ ಜತೆಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲುರು, ಧರ್ಮಗುರು ಏಕ್ಬಾಲ್ ಅಹ್ಮದ್ ಒಂಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಗ್ಯಾನಪ್ಪ ಮೇಟಿ, ಶಾಲೆಯ ಮುಖ್ಯಗುರು ಶಿವಲಿಂಗಮ್ಮ ಹನುಮರೆಡ್ಡಿ, ಪ್ರಮುಖರಾದ ರಾಜಾ ವಾಸುದೇವ ನಾಯಕ, ರಾಜಾ ಪಿಡ್ಡ ನಾಯಕ (ತಾತಾ), ನಿಂಗರಾಜ್ ಬಾಚಿಮಟ್ಟಿ, ಮಲ್ಲು ಬಿಲ್ಲವ್ ವೇದಿಕೆಯಲ್ಲಿದ್ದರು. ಭೂ ದಾನಿಯಾದ ನಗರಸಭೆ ಮಾಜಿ ಸದಸ್ಯ ಖಾಲೀದ್ ಅಹ್ಮದ್ ತಾಳಿಕೋಟಿಗೆ ಸನ್ಮಾನಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ಅಬ್ದುಲ್ ಗಫಾರ್ ನಗನೂರಿ ಮಾತನಾಡಿದರು. ನಗರಸಭೆ ಮಾಜಿ ಸದಸ್ಯ ಅಬ್ದುಲ್ ಅಲಿಂ ಗೋಗಿ ಪ್ರಾಸ್ತಾವಿಕ ಮಾತನಾಡಿದರು.ನಯೋಪ್ರಾ ಮಾಜಿ ಅಧ್ಯಕ್ಷ ಸುಗೂರೇಶ ವಾರದ, ನಗರಸಭೆ ಮಾಜಿ ಅಧ್ಯಕ್ಷ ಶೇಖ್ ಮಹಿಬೂಬ್ ಒಂಟಿ, ಎಪಿಎಂಸಿ ಮಾಜಿ ಅಧ್ಯಕ್ಷ ದುರ್ಗಪ್ಪ ಗೋಗಿಕೇರಾ, ಮುಖಂಡರಾದ ಅಬ್ದುಲ್ ಮಜೀದ್ ಸಾಬ್, ಹುಸ್ಮಾನ್ ಪಾಷಾ, ಮೊಹ್ಮದ್ ಗೌಸ್ ಕಿಣ್ಣಿ, ನಾಸೀರ್ ಕುಂಡಾಲೆ, ಖಮರುದ್ದೀನ್ ನಾರಾಯಣಪೇಠ, ಸುವರ್ಣಾ ಸಿದ್ರಾಮ ಎಲಿಗಾರ್, ಪ್ರಕಾಶ ಅಲಬನೂರ್, ಅಶೋಕ ಸಜ್ಜನ್, ಶಕೀಳ್ ಅಹ್ಮದ್, ಮಲ್ಕಪ್ಪಗೌಡ ಹಸನಾಪುರ, ನಾಗಪ್ಪ ಕಟ್ಟಿಮನಿ, ರಮೇಶ ಯಾದವ, ಮಲ್ಲಣ್ಣ ಹುಬ್ಬಳ್ಳಿ, ಧರ್ಮಣ್ಣ ಮಡಿವಾಳರ, ಖಾಜಾ ಖಲೀಲ್ ಅಹ್ಮದ್ ಅರಕೇರಿ, ಮಿರ್ಜಾ ಬೇಗ್, ಮೌಲಾನಾ ಸೌದಾಗರ, ತೋಫಿಕ್ ಹುಸೇನ್ ಅರಕೇರಿ, ಶರಣು ಅರಕೇರಿ, ಈರಣ್ಣ ಕುಂಬಾರ ಸೇರಿ ಇತರರಿದ್ದರು.

ಫೋಟೊ : ಸುರಪುರ ಸಮೀಪದ ರಂಗಂಪೇಟೆಯಲ್ಲಿ ಮೌಲನಾ ಆಜಾದ್ ಪಬ್ಲಿಕ್ ಶಾಲೆಯ ನೂತನ ಕಟ್ಟಡಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೂಮಿ ಪೂಜೆ ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!