ಸುರಪುರ : ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಸುರಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಜರುಗಿತು.
ಸಮೀಪದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಸಂಬಂಧ ಭಾನುವಾರ ಸಭೆ ಜರುಗಿತು. ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಶಹಾಪುರ ತಾಲೂಕಿನ ಅಧ್ಯಕ್ಷರಾದ ಮಹೇಶ ಆನೆಗುಂದಿ ವೀಕ್ಷಕರಾಗಿ ಆಗಮಿಸಿದ್ದರು.
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಸುರಪುರ-ಹುಣಸಗಿ ತಾಲೂಕುಗಳ ಸಮಾಜದ ಹಿರಿಯರು, ಯುವ ಬಂಧುಗಳು ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಸುರಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲಕಪ್ಪ ಪಾಟೀಲ್, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಸುಗೂರೇಶ ವಾರದ, ಸಮಾಜದ ಮುಖಂಡರಾದ ಬಸವರಾಜ ಜಮದ್ರಖಾನಿ, ಸುನೀಲ್ ಸರಪಟ್ಟಣಶೆಟ್ಟರ, ಚಂದ್ರಕಾಂತ ಕಳ್ಳಿಮನಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಸೋಮಶೇಖರ ಶಾಬಾದಿ, ಶರಣಪ್ಪ ಕಲಕೇರಿ, ಶಿವರಾಜಪ್ಪ ಗೋಲಗೇರಿ,ವಿರೇಶ ನಿಷ್ಠಿ ದೇಶಮುಖ, ಶಿವಶರಣ ಸಾಹುಕಾರ ಹೈಯಾಳ ರುಕ್ಮಾಪುರ ಸೇರಿ ಅನೇಕ ಪ್ರಮುಖರು ಇದ್ದರು.
ಸುರಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳು :
ಮಲ್ಲಣ್ಣ ಸಾಹುಕಾರ ಮುಧೋಳ (ಗೌರವಾಧ್ಯಕ್ಷ), ಸುರೇಶ ತಂಬಾಕೆ (ಅಧ್ಯಕ್ಷ), ದೇವಿಂದ್ರಪ್ಪಗೌಡ ಪೋಲಿಸ್ ಪಾಟೀಲ್, ಶರಣಬಸವ ಅಕ್ಕಿ ಕಕ್ಕೇರಾ, ಶಿವರಾಜ ಗುಳಗಿ, ಬಸವರಾಜ ಬೂದೆಪ್ಪ ಜಾಲಹಳ್ಳಿ, ರವಿಶಂಕರ ಸೊನ್ನದ (ಉಪಾಧ್ಯಕ್ಷರು), ಶರಣಬಸವ ಅರಕೇರಿ ತಿಮ್ಮಾಪುರ (ಪ್ರಧಾನ ಕಾರ್ಯದರ್ಶಿ), ವಿನೋದ ಅವಂಟಿ (ಕೋಶಾಧಿಕಾರಿ), ರಾಜಶೇಖರ ವಾಲಿ, ಮಹೇಶ ದೇವಶೆಟ್ಟಿ, ನಾಗರಾಜ ಬಳಿ, ಸಿದ್ದಣ್ಣ ಚೊಕ್ಕ ಸತ್ಯಂಪೇಟೆ (ಸಂಘಟನಾ ಕಾರ್ಯದರ್ಶಿ),ಶಿವನಗೌಡ ಬಿರೆದಾರ (ಕಾರ್ಯದರ್ಶಿ), ಸೂಗುರೇಶ ಪಾಣಿ (ಸಹ ಕಾರ್ಯದರ್ಶಿ).




