ನಗರದ ಬಿ. ಸಿ .ಎಮ್. ವಸತಿ ನಿಲಯದಲ್ಲಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತೋತ್ಸವ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ನಗರದ ಬಿ. ಸಿ .ಎಮ್. ವಸತಿ ನಿಲಯದಲ್ಲಿ ಇಂದು ಭಾರತ ಮಾತೆಯ ಹೆಮ್ಮೆಯ ಪುತ್ರ ಸನಾತನ್ನ ಧರ್ಮದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತೋತ್ಸವನ್ನು ವಿಶೇಷವಾಗಿ ಆಚರಿಸಲಾಯಿತು. ಭಾವಚಿತ್ರಕ್ಕೆ ವಸತಿ ನಿಲಯದ ತಾಲೂಕ ಅಧಿಕಾರಿಯಾದ ಯಂಕಣ್ಣ ತನಕೆದರ ಪೂಜೆ ಮಾಡಿ ವಿವೇಕಾನಂದರ ಸಂದೇಶಗಳನ್ನು ಹೇಳಿದರು. ಇದೆ ಸಂದರ್ಭದಲ್ಲಿ ಎಬಿವಿಪಿ ಉತ್ತರ ಪ್ರಾಂತದ ರಾಜ್ಯ ಉಪಾಧ್ಯಕ್ಷ ಡಾ. ಉಪೇಂದ್ರ ನಾಯಕ ಸುಬೇದಾರ್ ಎಬಿವಿಪಿ ನಡೆದುಬಂದ ದಾರಿ ಕುರಿತು ಹಾಗೂ ವಿದ್ಯಾರ್ಥಿಗಳ ನಾಯಕತ್ವ ಗುಣಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಅಮರೇಶ್ ರುಕ್ಮಾಪುರರವರು ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು.ಎಬಿವಿಪಿ ಕಾರ್ಯದರ್ಶಿ ಮಹೇಶ್ ರಾಜು ಕರಡ್ಕಲ್,ವಿನೋದ್ ನಾಯಕ ಯಾಳಗಿ ಹಾಗೂ ವಸತಿ ನಿಲಯದ ಸಿಬ್ಬಂದಿ ವರ್ಗದವರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

