ದೇಶ ಸೇವೆಯಂತಹ ಪುಣ್ಯ ಕಾರ್ಯ ಮತ್ತೊಂದಿಲ್ಲ;ಬಿಇಓ ಯಲ್ಲಪ್ಪ ಕಾಡ್ಲೂರ

ಸುರಪುರ ಟೈಮ್ಸ್ ವಾರ್ತೆ

ಸುರಪುರ;ನಮ್ಮ ದೇಶ ಸುರಕ್ಷತೆಯಿಂದ ಇರಬೇಕಾದರೇ ಸೈನಿಕರ ತ್ಯಾಗ, ಬಲಿದಾನವೇ ಕಾರಣ. ಸೈನಿಕರು ನಮಗೆ ಸಂರಕ್ಷಣೆ ನೀಡಿದರೇ. ರೈತ ಅನ್ನದಾತ ಇವರಿಬ್ಬರನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು BEO ಯಲ್ಲಪ್ಪ ಕಾಡ್ಲೂರ ಹೇಳಿದರು.
ನಗರದ ಬಾಲಕರ ಸರಕಾರಿ ಪ್ರೌಢ ಶಾಲೆಯಲ್ಲಿ ಭಾರತೀಯ ಸೈನಿಕರ ದಿನಾಚರಣೆ ಪ್ರಯುಕ್ತ ಯೋಧರಾದ ಹಣಮಂತ ಕವಲಿ ಕುಂಬಾರಪೇಟ ಅವರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲೆಯ ಮಾಜಿ ವಿದ್ಯಾರ್ಥಿಯಾಗಿರುವ ಹಣಮಂತ ಕವಲಿ ಕುಂಬಾರಪೇಟ ಅವರು ಕಳೆದ 23 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಇಡೀ ತಾಲೂಕಿಗೆ ಹೆಮ್ಮೆಯ ತರುವ ಸಂಗತಿ. ನಮ್ಮೆಲ್ಲರ ಸುರಕ್ಷತೆಗಾಗಿ ಹಗಲಿರುಳು ದುಡಿಯುವ ರಾಷ್ಟ್ರ ರಕ್ಷಣೆಯಲ್ಲಿ ತಮ್ಮ ಜೀವನದಸಾರ್ಥಕತೆಯನ್ನು ಕಾಣುತ್ತಿರುವ ಸೈನಿಕರ ತ್ಯಾಗ ಮತ್ತು ಸಮರ್ಪಿತ ಸೇವೆಯನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಲೇಬೇಕು.1949ರಲ್ಲಿ ಕೊನೆಯ ಬ್ರಿಟಿಷ್ ಪ್ರಧಾನ ದಂಡ ನಾಯಕ ಸರ್, ಎಫ್.ಆರ್.ಆರ್.ಬುಚ್ ಅವರಿಂದ ಆಗಿನ ಜನರಲ್ ಆಗಿದ್ದ ಕೆ.ಎಂ.ಕಾರ್ಯಪ್ಪ ಅವರು ಸ್ವತಂತ್ರ ಭಾರತದ ಮೊದಲ ಸೇನಾ ದಂಡ ನಾಯಕರಾಗಿ ಅಧಿಕಾರ ಸ್ವೀಕರಿಸಿದ ದಿನವನ್ನು ಸೇನಾ ದಿನಾಚರಣೆಯನ್ನಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

ಬಿಆರ್‌ಪಿ ಖಾದರ ಪಟೇಲ ಮಾತನಾಡಿ, ಸೈನಿಕರು ದೇಶದ ನಿಜವಾದ ಹಿರೋಗಳು.ರಾಷ್ಟ್ರಕ್ಕೆ ಶತ್ರುಗಳಿಂದ ಧಕ್ಕೆ ಆಗಬಾರದು. ದೇಶದ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ದಿನದ 24 ಗಂಟೆ ಕಣ್ಣಲ್ಲಿ ಕಣ್ಣಿಟ್ಟು ನಮ್ಮ ರಾಷ್ಟ್ರ ಗಡಿ ಕಾಯುವ ಸೈನಿಕರನ್ನು ನಾವು ಪೂಜ್ಯ ಭಾವನೆಯಿಂದ ನೋಡಲೇಬೇಕು ಹಾಗೂ ಅವರನ್ನು ಗೌರವಿಸಿ-ಸನ್ಮಾನಿಸಬೇಕು ಎಂದು ಸೈನಿಕರ ಶ್ರಮ ಕುರಿತು ಕೊಂಡಾಡಿದರು.
ಸನ್ಮಾನ ಸ್ವೀಕರಿಸಿದ ಯೋಧರಾದ ಹಣಮಂತ ಕವಲಿ ಕುಂಬಾರಪೇಟ ಮಾತನಾಡಿ, ಯುವಕರು ಸೈನಿಕರಾಗಿ ಸೇವೆ ಸಲ್ಲಿಸಲು ಮುಂದೆ ಬರಬೇಕು. ವಿದ್ಯಾರ್ಥಿ ದಿಸೆಯಿಂದಲೇ ದೇಶಭಕ್ತಿ ಮೈಗೂಡಿಸಿಕೊಳ್ಳಬೇಕೆಂದರು. ಪ್ರಾಚಾರ್ಯ ಸೋಫಿಸಾಬ ಗುತ್ತೇದಾರ, ಶಿಕ್ಷಕರಾದ ದೇವಪ್ಪ ಜಾಲಿಬೆಂಚಿ, ಮಹ್ಮದ ಅಲಿ, ಮಹೇಶ ಹುಜರತಿ, ಈರಮ್ಮ ಅಂಗರಗಿ, ಸರಸ್ವತಿ ಇತರರಿದ್ದರು. ಲಕ್ಷ್ಮಣ ಬಿರಾದಾರ ನಿರೂಪಿಸಿದರು. ಜಯರಾಮ ಚವ್ಹಾಣ ಸ್ವಾಗತಿಸಿರು. ಆನಂದ ಪರತಾನಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!