ಮುಸ್ಲಿಂ ಸಮಾಜದ ಸಾಧನೆ ಮಾಡಿದ ವ್ಯಕ್ತಿಗಳಿಗೆ ಗೌರವ ಸನ್ಮಾನ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ನಗರದ ಟೈಲರ್ ಮಂಜಿಲ್ ಆವರಣದ ಒಳಗಡೆ ಇರುವ ಪುರಾತನ ಮಸೀದಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ
ಡಾ.ಮೌಲಾನಾ ಅಬ್ಬುಲ್ ಕಲಾಂ ಆಜಾದ್ ಶಿಕ್ಷಣ ಸರ್ಕಾರಿ ಶಾಲಾ ಕಟ್ಟಡಕ್ಕೆ ತಮ್ಮ ಜಮೀನನ್ನು ದೇಣಿಗೆ ನೀಡಿದ ಕಾಲಿದ ಸಾಬ್ ತಾಳಿಕೋಟಿಯವರನ್ನು ಇತ್ತಿಚೆಗೆ ಪ್ರೆಸ್ ಕ್ಲಬ್ ವತಿಯಿಂದ ಭಾರತ ಸೇವಾ ರತ್ನ ಪ್ರಶಸ್ತಿ ಪಡೆದಿರುವ ಸಮಾಜದ ಯುವಕರ ಪರವಾಗಿ ಸದಾ ಸಮಾಜ ಸೇವೆ ಮಾಡುವ ಅಮ್ಜದ್ ಖಾನ್ ಭಗವಾನ್ ವಕೀಲರಿಗೂ ಮತ್ತು ಶಿಕ್ಷಣ ವೃತ್ತಿಯಲ್ಲಿ ತಮ್ಮ ಸೇವೆ ಚಿನ್ನು ಮಿಯಾ ಪಟೇಲ್ ಗಣನೀಯ ಸಾಧನೆ ಮಾಡಿದ ಮುಸ್ಲಿಂ ಸಮಾಜದ ವ್ಯಕ್ತಿಗಳಿಗೆ ಗೌರವ ಸನ್ಮಾನ ನೀಡಿ ಅಭಿನಂದಿಸಲಾಯಿತು.
ಶಿಕ್ಷಣ, ಸಮಾಜ ಸೇವೆ, ಕ್ರೀಡೆ, ವ್ಯಾಪಾರ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆಯ ಮೂಲಕ ಸಮಾಜಕ್ಕೆ ಮಾದರಿಯಾದ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಮುಸ್ಲಿಂ ಸಮಾಜದ ಸಾಧಕರು ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ಸಾಧನೆಗಳು ಸಮಾಜದ ಒಗ್ಗಟ್ಟಿಗೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು. ಇಂತಹ ಗೌರವ ಸಮಾರಂಭಗಳು ಸಮಾಜದಲ್ಲಿ ಸಾಧನೆಗೆ ಉತ್ತೇಜನ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುನೌವರ ಸಾಬ್ ಅರಿಕೇರಿ, ರಬ್ಬಾನಿ ಮೊಲಿಸಾಬ್, ದಾವುದ್ ಇಬ್ರಾಹಿಂ ಪಠಾಣ್, ಆಬಿದ ಪಗಡಿ, ಎಂ ಪಟೇಲ್, ಖಾಜಾಜಮೀರ್, ಇಮಾಮ್ ಸಾಬ್ ವಾಗಣ್ಗೇರಾ, ಚಾಂದ್ ಸಾಬ್ ಕುಂಬಾರಪೇಟೆ, ಫಜಲ್ ನಾಸಿ, ಸೇರಿದಂತೆ ಸಮಾಜದ ಹಿರಿಯರು, ಯುವಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಅಂತ್ಯದಲ್ಲಿ ಸನ್ಮಾನಿತರಾದವರು ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.


