ಇಂದು ಸಂಜೆ ಶ್ರೀಕರ ಭಟ್ ಜೋಷಿ ಅವರಿಗೆ ಶರಣ ಶ್ರೀ ಪ್ರಶಸ್ತಿ ಪ್ರದಾನ

ಸುರಪುರ ಟೈಮ್ಸ್ ವಾರ್ತೆ
ಪ್ರತಿ ವರ್ಷದಂತೆ ಈ ವರ್ಷವೂಮಹಾಶಿವರಾತ್ರಿ ಅಂಗವಾಗಿ ಶ್ರೀ ಶರಣಬಸಮ್ಮವೇಶ್ವರ ದೇವಸ್ಥಾನ (ಗುಮ್ಮನವರ ನಿವಾಸ) ತಿಮ್ಮಾಪುರ,ರಂಗಂಪೇಠದಲ್ಲಿ 20ನೇ ವರ್ಷದ ಶ್ರೀ ಶರಣಬಸವೇಶ್ವರ ಪುರಾಣ ಮಹೋತ್ಸವ ಹಾಗೂ ಶರಣರ ಸಂತರಿಂದ ಸದ್ಭಾವ ಚಿಂತನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಇಂದು ಸುರಪುರ ತಾಲ್ಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀಕರ ಜೋಷಿ ಅವರಿಗೆ ಶರಣ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.