ತಿಂಥಣಿ ಶ್ರೀ ಮೌನೇಶ್ವರ ಜಾತ್ರೆ ನಿಮಿತ್ತ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಗ್ರಾಮಕ್ಕೆ ಭೇಟಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕಲ್ಯಾಣ ಕರ್ನಾಟಕ ಭಾಗದಲ್ಲೇ ಹಿಂದು-ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ತಿಂಥಣಿ ಮೌನೇಶ್ವರ ಜಾತ್ರೆ ಪ್ರಯುಕ್ತ ಇಂದು ಜಿಲ್ಲಾಧಿಕಾರಿಗಳು ಜಾತ್ರಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರಿಗೆ ಯಾವುದೇ ಅಸೌಕರ್ಯ ಉಂಟಾಗದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಭೇಟಿ ಸಂದರ್ಭದಲ್ಲಿ ಭದ್ರತೆ, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಆರೋಗ್ಯ ಸೇವೆ, ಅಗ್ನಿಶಾಮಕ ವ್ಯವಸ್ಥೆ ಹಾಗೂ ಸಂಚಾರ ನಿಯಂತ್ರಣ ಸೇರಿದಂತೆ ಮೂಲಭೂತ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು. ಜಾತ್ರೆ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಹಾಗೂ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ವ್ಯವಸ್ಥಿತವಾಗಿ ಜಾತ್ರೆ ನಡೆಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಶ್ರೀ ಧರ ಗೋಟೂರ್ ,ತಾಲೂಕು ದಂಡಾಧಿಕಾರಿ ಎಚ್.ಎ.ಸರಕಾವಸ್ ಇಓ ಬಸವರಾಜ್ ಸಜ್ಜನ್, ಹಾಗೂ ಕರ್ನಾಟಕ ಮೂಲಭೂತ ಸೌಕರ್ಯ ನಿಗಮದ ಅಧಿಕಾರಿಗಳು ಹಾಗೂ ಸಿಪಿಐ ಉಮೇಶ್ ನಾಯಕ ಡಿಟಿ ರೇವಪ್ಪ ಶಿವನಂದಯ್ಯ ಮಠ ,ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಹಾಗೂ ಗ್ರಾಮಸ್ಥರಾದ ಗಂಗಾಧರ ನಾಯಕ ತಿಂಥಣಿ, ಭೀಮಣ್ಣ ಕವಲ್ದಾರ್, ಮಲ್ಲಿಕಾರ್ಜುನ್ ಸಾಹುಕಾರ್, ದೇವೇಂದ್ರಪ್ಪ ಅಂಬಿಗೇರ,ಶರಣಯ್ಯ ಸ್ವಾಮಿ ಹಾಗೂ ವಿಶ್ವಕರ್ಮ ಸಮಾಜದ ವಿವಿಧ ಸಂಘಟನೆಯ ಮನೋಹರ್ ಪತ್ತಾರ್ ಶಹಪುರ,ದೇವೇಂದ್ರಪ್ಪ ವಿಶ್ವಕರ್ಮ ಒಕ್ಕೂಟದ ಕಾರ್ಯದರ್ಶಿಗಳು ಹಾಗೂ ತಾಲೂಕಾಧ್ಯಕ್ಷ ದೇವೇಂದ್ರಪ್ಪ ತಳವಾರಗೇರ ಹಾಗೂ ಸ್ಥಳೀಯರು ಹಿರಿಯರು ಯುವಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
