“ಆರೋಗ್ಯವೇ ನಿಜವಾದ ಸಂಪತ್ತು. ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದ್ಬಳಕೆ ಮಾಡಿಕೊಳ್ಳಿ” – ಡಾ.ಠಾಕಪ್ಪ ಎನ್. ಗಚ್ಚಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ: “ಆರೋಗ್ಯವೇ ನಿಜವಾದ ಸಂಪತ್ತು. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು” ಎಂದುಮೂತ್ರಪಿಂಡ,ಕಿಡ್ನಿ ಹರಳು, ಕಿಡ್ನಿ ಕಸಿ ಶಸ್ತ್ರಚಿಕಿತ್ಸ ವೈದ್ಯರಾದ ಡಾ. ಠಾಕಪ್ಪ ಎನ್. ಗಚ್ಚಿ ಹೇಳಿದರು.
ಇಲ್ಲಿಯ ರಂಗಂಪೇಟೆಯ ಜಿವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಸ್ವಕುಳ ಸಾಳಿ ಸಮಾಜದ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ ಅವರು ಹಿಂದಿನ ದಿನಗಳಲ್ಲಿ ವಾಂತಿ-ಬೇದಿ, ಟೈಫಾಯಿಡ್, ಕ್ಷಯ, ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು.ಆದರೆ
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಬಡಜನರು ಆರ್ಥಿಕವಾಗಿ ಹಣ ಭರಿಸಲು ಅಸಾಧ್ಯವಾಗಿದೆ.ಸ್ವಕುಳ ಸಾಳಿ ಸಮಾಜದವರು ಬಡ ಜನರಿಗೆ ಉಚಿತವಾಗಿ ಶಿಬಿರಗಳ ಮೂಲಕವೇ ಚಿಕಿತ್ಸೆಗೆ ಮುಂದಾಗಿದೆ
ಬಡ ಜನರ ಸೇವೆಯನ್ನು ಅವರ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು ಸಾಧ್ಯ ಎಂಬುದನ್ನು ಅರಿತಿದ್ದೇನೆ ಎಂದರು.ಸಕ್ಕರೆ ಮತ್ತು ಹೃದಯ ರೋಗ ತಜ್ಞ ಡಾ.ಸೋಮನಾಥ ಚಿಲ್ಲಾಳ,ನವಜಾತ ಶಿಶು ಮತ್ತು ಮಕ್ಕಳ ತಜ್ಞ ಡಾ. ವೆಂಕಟೇಶ
ಟೊಣಪೆ ಪ್ರಸೂತಿ, ಬಂಜೆತನ ಮತ್ತು ಸ್ತ್ರೀರೋಗ ತಜ್ಞ
ಡಾ. ಜ್ಯೋತಿ ಧೋತ್ರೆ,ವಿಕಿರಣ ತಜ್ಞರಾದ ,ಡಾ. ಪ್ರವೀಣ ಜೆ.ಕಾಂಬಳೆ,ಡಾ.ಲಕ್ಷ್ಮೀನಾರಾಯಣ ಗಚ್ಚಿ,ಸರ್ಜನ್ ಡಾ. ಮಹೇಶ ಚಂದ್ರಶೇಖರ ಧೋತ್ರೆ ಆಯುರ್ವೇದಿಕ ತಜ್ಞರಾದ ಡಾ.ಶ್ವೇತಾ ಚಿಲ್ಲಾಳ,ಡಾ.ದರ್ಶನಾ ಪಾಡಮುಖಿ,ಡಾ. ಶೇತಾ ವಿಕಬೋಟೆ,ಕನ್ಸಲ್ಟೆಂಟ್ ಜನರಲ್, ಲೇರ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜನ್ ಡಾ. ಪ್ರಕಾಶ ಎಸ್. ಕಟ್ಟಿಮನಿ,ದಂತ ವೈದ್ಯ ಡಾ.ರಾಹುಲ್ ಧೋತ್ರೆ ,ನರ್ಸಿಂಗ್ ಅಧಿಕಾರಿ ಚಂದ್ರಯ್ಯ ಮಾಣಕಿಂಡ್ ಅವರು ರೋಗಿಗಳಿಗೆ ಆಹಾರ ಪದ್ಧತಿ,ತೂಕ ಕಡಿಮೆ, ಮಹಿಳೆ
ಯರಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಯಿತು.ನಂತರ ರೋಗಿಗಳಿಗೆ ಉಚಿತ ಔಷಧಿ ನೀಡಲಾಯಿತು.ಘನಶ್ಯಾಮ ಪಾಣಿಭಾತೆ ನಿರೂಪಿಸಿ ವಂದಿಸಿದರು.ಸಮಾಜದ ಅಧ್ಯಕ್ಷ ರು,ಮುಖಂಡರು,ಯುವಕರು ಶಿಬಿರದಲ್ಲಿ ಉಪಸ್ಥಿತರಿದ್ದರು.



