ಸುರಪುರದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯಿಂದ ಗಣರಾಜ್ಯೋತ್ಸವ–ರಾಯಣ್ಣ ಸ್ಮರಣೆ

ಸುರಪುರ ಟೈಮ್ಸ್ ವಾರ್ತೆ

ಸುರಪುರ;ಭಾರತವು ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದ್ದು, ಪ್ರಜೆಗಳಿಂದಲೇ, ಪ್ರಜೆಗಳಿಗಾಗಿಯೇ ಪ್ರಜೆಗಳಿಗೊಸ್ಕರವೇ ನಡೆಸುವ ಆಡಳಿತವೇ ಪ್ರಜಾಪ್ರಭುತ್ವವಾಗಿದೆ. ಪ್ರಜೆಗಳನ್ನು ಪ್ರಭುಗಳೆಂದೇ ಭಾವಿಸುವ ದೇಶವು ಭಾರತವಾಗಿದೆ.ಈ ದೇಶಕ್ಕಾಗಿಯೇ ತನ್ನ ಬದುಕನ್ನೇ ತ್ಯಾಗ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ ಎಂದು ಜಯ ಕರ್ನಾಟಕ ರಕ್ಷಣಾ ಸೇನೆಯ ಸಂಘಟಿಕರು ಹೇಳಿದರು. ಅವರು ನಗರದ ನಗರಸಭೆ ಮುಂಭಾಗ, ರಾಯಣ್ಣ ವೃತ್ತದ ಹತ್ತಿರದ  ಜಯ ಕರ್ನಾಟಕ ರಕ್ಷಣಾ ಸೇನೆಯ ಗೂಡ್ಸ್ ಚಾಲಕರ ಘಟಕದಲ್ಲಿ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹುತಾತ್ಮ ದಿನದ ಪ್ರಯುಕ್ತ ಜಯ ತಾಲೂಕ ಘಟಕದ ವತಿಯಿಂದ ರಾಷ್ಟ್ರಧ್ವಜಾರೋಹಣ ಹಾಗೂ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಶರಣು ಬೈರಿಮರಡಿ, ತಾಲೂಕ ಅಧ್ಯಕ್ಷ ಮಲ್ಲಪ್ಪ ನಾಯಕ ಕಬಡಗೇರ, ಉಪಾಧ್ಯಕ್ಷ ಕೃಷ್ಣ ಹವಿನ ಕುಂಬರಪೇಟ, ಕಾರ್ಯಾಧ್ಯಕ್ಷ ಶಿವರಾಜ ವಗ್ಗರ್, ಕಾರ್ಯದರ್ಶಿ ಹಣಮಂತ ಭಂಡಾರಿ, ನಗರ ಘಟಕ ಅಧ್ಯಕ್ಷ ಶಿವಕುಮಾರ ಗಾಜಲದಿನ್ನು, ಆಟೋ ಚಾಲಕರ ಘಟಕ ಅಧ್ಯಕ್ಷ ಹಣಮಂತ ಸತ್ಯಂಪೇಟೆ, ಗೂಡ್ಸ್ ಚಾಲಕರ ಘಟಕ ಅಧ್ಯಕ್ಷ ರಂಗಪ್ಪ ನಾಯಕ ಮಕಾಶಿ, ನಗರ ಘಟಕ ಉಪಾಧ್ಯಕ್ಷ ವೀರೇಶ್ ರತ್ತಾಳ್, ಯುವ ಘಟಕ ಉಪಾಧ್ಯಕ್ಷರ ರವಿಕುಮಾರ್ ಟರ್ಕಿ ಸೇರಿದಂತೆ ಬಸವರಾಜ ರುಕ್ಮಪುರ, ನಹೀಮ್ ಮುಲ್ಲಾ, ಗೊಣೆಪ್ಪ ಗೌಡ ಸಿರಾಜ್, ಎಂ.ಡಿ. ಹುಸೇನ್, ನಾಗರಾಜ ಹಸನಪುರ, ಚನ್ನಪ್ಪ ತಳವಾರ್ಗೆರ, ಬಸವರಾಜ ದೇವಾಪುರ, ಹಸೆನ್ ಸುರಪುರ, ಗುಲಾಮ್ ಸಾಬ್, ರಾಜಾಸಾಬ್, ಸಮ್ಮದ್ ಮುಲ್ಲಾ ಹಾಗೂ ಸಂಘಟನೆಯ ಎಲ್ಲಾ ಪದಾಧಿಕಾರಿಗಳು, ಕನ್ನಡಪ್ರೇಮಿಗಳು ಮತ್ತು ದೇಶಪ್ರೇಮಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವು ರಾಷ್ಟ್ರಭಕ್ತಿ ಮತ್ತು ಸಂಘಟನೆಯ ಏಕತೆಯನ್ನು ಪ್ರತಿಬಿಂಬಿಸುವಂತೆ ಯಶಸ್ವಿಯಾಗಿ ನೆರವೇರಿತು.

Leave a Reply

Your email address will not be published. Required fields are marked *

error: Content is protected !!