BLO ಕೆಲಸ ಕಾರ್ಯಗಳಿಂದ ಶಿಕ್ಷಕರನ್ನು ಕೈಬಿಡುವಂತೆ ಸರ್ಕಾರಿ ನೌಕರರ ಸಂಘ ಮತ್ತು  ತಾಲೂಕು ಶಿಕ್ಷಕರ ಸಂಘದ ಮನವಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ;ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ BLO (ಬೂತ್ ಲೆವೆಲ್ ಅಧಿಕಾರಿ) ಸಂಬಂಧಿತ ಕೆಲಸ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸುವುದನ್ನು ತಕ್ಷಣ ಕೈಬಿಡಬೇಕೆಂದು ಸರಕಾರಿ ನೌಕರರ ಸಂಘ ಮತ್ತು ಸುರಪುರ ತಾಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಳು ಸುರಪುರ ತಹಶೀಲ್ದಾರ್ ಮನವಿ ಮಾಡಿಕೊಂಡಿದ್ದಾರೆ.
ಇಂದು ತಾಲೂಕು ದಂಡಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದ ಅವರು ಶಿಕ್ಷಕರು ತಮ್ಮ ಮೂಲ ಕರ್ತವ್ಯವಾದ ಬೋಧನಾ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಿರುವ ಸಂದರ್ಭದಲ್ಲಿ, ಮತದಾರರ ಪಟ್ಟಿ ತಿದ್ದುಪಡಿ, ಮನೆಮನೆ ಸಮೀಕ್ಷೆ, ಚುನಾವಣಾ ಪೂರ್ವ ಸಿದ್ಧತೆ ಸೇರಿದಂತೆ ವಿವಿಧ BLO ಕೆಲಸಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗುತ್ತಿರುವುದು ಪಾಠ ಕಾರ್ಯಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದೆ ಇಲಾಖೆಯ ಹಲವಾರು ಯೋಜನೆಗಳ ಹೊರೆಯಾಗಿದೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಸುರಪುರ ತಾಲೂಕಿನಲ್ಲಿ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ಲಭ್ಯವಿರುವ ಶಿಕ್ಷಕರನ್ನೇ BLO ಕೆಲಸಗಳಿಗೆ ಬಳಸಿಕೊಳ್ಳುವುದು ಶಿಕ್ಷಣ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದರ ನೇರ ಪರಿಣಾಮ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಮೇಲೆ ಬೀರುತ್ತಿದೆ ಎಂಬ ಆತಂಕವನ್ನು ಸಂಘ ವ್ಯಕ್ತಪಡಿಸಿದೆ.
ಆದ್ದರಿಂದ ಚುನಾವಣಾ ಸಂಬಂಧಿತ BLO ಕೆಲಸ ಕಾರ್ಯಗಳಿಗೆ ಇತರ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಿ, ಶಿಕ್ಷಕರನ್ನು ಸಂಪೂರ್ಣವಾಗಿ ಶಿಕ್ಷಣ ಸೇವೆಗೆ ಮಾತ್ರ ಬಳಸುವಂತೆ ಸರ್ಕಾರ ಹಾಗೂ ಚುನಾವಣಾ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸುರಪುರ ತಾಲೂಕು ಶಿಕ್ಷಕರ ಸಂಘವು ಒತ್ತಾಯಿಸಿದರು ಈ ಸಂದರ್ಭದಲ್ಲಿ
ರಾಮಕೃಷ್ಣ ಕಲಬುರ್ಗಿ ಹಾಗೂ ಗೋವಿಂದಪ್ಪ ತನಕೆದಾರ ಶರಣ ಬಸವ ಗೋನಾಲ ಮಾಳಪ್ಪ ಹುಲಿಕೆರಿ ಲಕ್ಷಣ ನಾಯಕ ಗುರುನಾಥ ರಾಠೋಡ್ ,ರವಿ ನಾಯಕ ಸೇರಿದಂತೆ ಇತರರು ಶಿಕ್ಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!