RKN ಕಪ್ ಕ್ರಿಕೆಟ್ ಟೂರ್ನಿ | ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ , ಕ್ರೀಡೆಯಿಂದ ದೇಹ, ಮನಸ್ಸು ಸದೃಢ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಆಟ ಆಡುವುದರಿಂದ ದೇಹ ಮತ್ತು ಮನಸ್ಸು ಸದೃಢವಾಗಿರುತ್ತದೆ. ಸದೃಢವಾದ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಇಲ್ಲಿಯ ಶ್ರೀ ಪ್ರಭು ಕಾಲೇಜು ಮೈದಾನದಲ್ಲಿ ರಾಜಾ ವೆಂಕಟಪ್ಪ ನಾಯಕ, ರಾಜಾ ಶ್ರೀರಾಮ ನಾಯಕ ಮತ್ತು ರಾಜಾ ರೂಪ ಕುಮಾರ ನಾಯಕ (ಬಂಟಿ ಧಣಿ) ಅವರ ಸ್ಮರಣರ‍್ಥವಾಗಿ ಮಂಗಳವಾರ ಆರ್‌ಕೆಎನ್ ಕಪ್ ಹರ‍್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟರ‍್ನಾಮೆಂಟ್ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳು ಪ್ರತಿದಿನ ಮನಸ್ಸಿಗೆ ಹೊಸ ಚೈತನ್ಯ ಮತ್ತು ಸಂತಸವನ್ನು ನೀಡುತ್ತವೆ. ಸ್ನೇಹ, ಸಹಬಾಳ್ವೆಗೆ ಸಹಕಾರಿಯಾಗುವ ಕ್ರೀಡೆಗಳಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು. ಕ್ರೀಡೆ ಯಾವಾಗಲೂ ನಮಗೆ ಉತ್ಸಾಹ ಕೊಡುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಆಗ ಕ್ರೀಡೆಯ ಮಹತ್ವ ಹೆಚ್ಚುತ್ತದೆ ಎಂದರು.
ಅರಸು ಮನೆತನ ರಾಜಾ ಲಕ್ಷ್ಮೀ ನಾರಾಯಣ ನಾಯಕ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.ಟೂರ್ನಿಯಲ್ಲಿ ಪ್ರಥಮ ಬಹುಮಾನ 2,55,555 ಮತ್ತು ಟ್ರೋಫಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ವತಿಯಿಂದ ಮತ್ತು ದ್ವಿತೀಯ ಬಹುಮಾನ 1,55,555 ಮತ್ತು ಟ್ರೋಫಿಯು ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ ಮತ್ತು ಪ್ರಥಮ ರ‍್ಜೆ ಗುತ್ತಿಗೆದಾರ ವೆಂಕೋಬ ಯಾದವ ಅವರಿಂದ ಇರುತ್ತದೆ. ಟರ‍್ನಿಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ವೈಯಕ್ತಿಕ ಬಹುಮಾನಗಳು ಇರುತ್ತವೆ ಎಂದು ಆಯೋಜಕರು ತಿಳಿಸಿರುತ್ತಾರೆ.
ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ, ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ್,ರಾಜಾ ವಿಜಯಕುಮಾರ ನಾಯಕ ಪ್ರಮುಖರಾದ ಮಲ್ಲಣ್ಣ ಸಾಹು ಮುಧೋಳ, ರಾಜಾ ಸಂತೋಷ ನಾಯಕ, ರಾಜಾ ವಾಸುದೇವ ನಾಯಕ , ರಾಜಾ ಶುಶಾಂತ ನಾಯಕ, ಬಸವರಾಜ ಜಮದ್ರಖಾನಿ, ಬೀರಲಿಂಗ ಬಾದ್ಯಾಪುರ, ಅಬ್ದುಲ್ ಗಫಾರ್, ಗ್ಯಾನಚಂದ ಜೈನ್, ಆಬ್ದುಲ್ ಅಲಿಂ ಗೋಗಿ, ವೇಣುಗೋಪಾಲ ನಾಯಕ ಜೇರ‍್ಗಿ, ರಾಜಾ ಪಿಡ್ಡ ನಾಯಕ, ಭೀಮರಾಯ ಮೂಲಿಮನಿ, ಖಾಲೀದ್ ಅಹ್ಮದ್, ರಂಗನಗೌಡ ಪಾಟೀಲ್, ಭಂಡಾರೆಪ್ಪ ನಾಟೇಕರ್, ಭೀಮನಗೌಡ ಲಕ್ಷ್ಮೀ ಸೇರಿ ಕಾಂಗ್ರೆಸ್ ಪಕ್ಷದ ಹಿರಿಯ, ಕಿರಿಯ ಮುಖಂಡರು, ಕಾರ್ಯಕರ್ತರು ಮತ್ತು ಕ್ರೀಡಾಭಿಮಾನಿಗಳು ಇದ್ದರು.
ಕ್ರೀಡಾಪಟುಗಳು ತಮ್ಮ ಜೀವನದಲ್ಲಿ ಕ್ರೀಡಾ ಸ್ಪೂರ್ತಿ ಅಳವಡಿಸಿಕೊಂಡರೆ ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುಂದೆ ಸಾಗಬಹುದು. ಕ್ರೀಡೆಗಳಲ್ಲಿ ತೊಡಗಿಸಿ ಕೊಳ್ಳವುದರಿಂದ ಉತ್ತಮ ಆರೋಗ್ಯ ಸಂಪಾದಿ ಸುವುದರ ಜತೆಗೆ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಕೀರ್ತಿ ಸಂಪಾದಿಸಬಹುದು.
–ರಾಜಾ ವೇಣುಗೋಪಾಲ ನಾಯಕ, ಶಾಸಕರು, ಸುರಪುರ.










