ಶ್ರೀ ತಿಂಥಣಿ ಮೌನೇಶ್ವರ ಅದೂರಿ ರಥೋತ್ಸವ,ಭಕ್ತ ಸಾಗರದಲ್ಲಿ ಭವ್ಯ ಸಂಭ್ರಮ,ಸಾವಿರಾರು ಭಕ್ತರ ಜಯಘೋಷ,ಡಿಸಿ–ಎಸ್‌ಪಿ–ಎಸಿ–ಡಿಎಸ್‌ಪಿ– ತಹಸೀಲ್ದಾರ ಭಾಗಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಹಿಂದೂ-ಮುಸ್ಲಿಂರ ಭಾವೈಕ್ಯತೆಯ ಹರಿಕಾರರಾಗಿರುವ ದಕ್ಷಿಣ ಕಾಶಿ ಖ್ಯಾತಿಯ ಸುರಪುರ ತಾಲೂಕಿನ ಸುಕ್ಷೇತ್ರ ತಿಂಥಣಿ ಮೌನೇಶ್ವರರ ರಥೋತ್ಸವವು ರವಿವಾರ ಸಂಜೆ ಲಕ್ಷಾಂತರ ಭಕ್ತರ ಜಯಘೋಷಗಳ ನಡುವೆ ಸಡಗರ-ಸಂಭ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು.
ರವಿವಾರ ಸಾಯಂಕಾಲ ಮೌನೇಶ್ವರರ ರಥ ಸಾಗುವ ರಾಜ ಬೀದಿಯಲ್ಲಿ ನೆರೆದಿದ್ದ ಅಪಾರ ಭಕ್ತಸಾಗರದ ಜಯಘೋಷ ಮುಗಿಲು ಮುಟ್ಟಿತ್ತು. ”ಏಕ್ ಲಾಕ್ ಐಂಸಿ ಹಜಾರ್ ಪಾಚೋ ಪೀರ್ ಪೈಗಂಬರ್ ಜೀತಾ ಪೈಗಂಬರ್ ಮೌನೋದ್ದೀನ್, ಕಾಶೀಪತಿ ಗಂಗಾಧರ ಹರಹರ ಮಹಾದೇವ” ಎನ್ನುವ ಮೌನೇಶ್ವರರಿಗೆ ಭಕ್ತರಿಂದ ಉದ್ಗರಿಸುವ ಜಯಘೋಷಗಳು ಆಕಾಶಕ್ಕೆ ತಲುಪಿ ದೇವಲೋಕದ ದೇವಾನು ದೇವತೆಗಳನ್ನು ತಿಂಥಣಿ ಕ್ಷೇತ್ರದೆಡೆಗೆ ಗಮನಿಸುವಂತೆ ಕೋರುವಂತೆ ಭಾಸವಾಗುತ್ತಿತ್ತು.
ಮೌನೇಶ್ವರರ ಜಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ಕೈಮುಗಿದು ಮೌನೆಶ್ವರರ ಕೃಪೆಗೆ ಪಾತ್ರರಾದರು. ಮೌನೇಶ್ವರನ ರಥ ಎಳೆದು ಮೌನೇಶ್ರನ ಕೃಪೆಗೆ ಪಾತ್ರರಾಗಿ ಭಕ್ತಿ ಭಾವ ಮೆರೆದರು.
ಭಕ್ತವೃಂದಕ್ಕೆ ತೊಂದರೆಯಾಗದಂತೆ ದೇವಸ್ಥಾನದ ಸಮಿತಿಯವರು ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿದ್ದರು. ದೂರದ ಊರುಗಳಿಂದ ಆಗಮಿಸಿದ ಭಕ್ತಾಧಿಗಳು ದೂಳಗಾಯಿವರೆಗೂ ಇರುವುದರಿಂದ ಅಲ್ಲಲ್ಲಿ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ಜಾತ್ರೆಯಲ್ಲಿ ನಾಟಕ ಕಂಪನಿಗಳು, ತಿಂಡಿ ತಿನಿಸುಗಳು, ಸರ್ಕಸ್ ಕಂಪನಿಗಳು, ಮಕ್ಕಳಿಗೆ ಪ್ರಿಯವಾದ ಜೋಕಾಲಿಗಳು, ಮಕ್ಕಳ ಆಟಿಕೆ ಅಂಗಡಿಗಳು, ಹೆಂಗಳೆಯರಿಗೆ ಪ್ರಿಯವಾದ ಬಳೆಗಳು, ಜಿಲೇಬಿ, ಭಜಿ ಅಂಗಡಿಗಳು ಜನರನ್ನು ಸೆಳೆಯುತ್ತಿವೆ.ಸುರಪುರ ಅರಸು ಸಂಸ್ಥಾನದ ಯುವರಾಜ ರಾಜಾ ಲಕ್ಷ್ಮೀನಾರಾಯಣ ನಾಯಕರು ರಥಕ್ಕೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಅರ್ಪಿಸಿದರು. ಪೂಜ್ಯರಾದ ಮೌನೇಶ್ವರ ಮಹಾಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.ದೇವಸ್ಥಾನದ ಪೂಜ್ಯ ಮೌನೇಶ್ವರ ಮಹಾಸ್ವಾಮಿಗಳು ಸೇರಿದಂತೆ ಆಫಜಲಪೂರ, ಏಕದಂಡಿಗಿಯ ಪೂಜ್ಯರು ಅನೇಕ ಮಠಾಧೀಶರು, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಎಸ್‌ಪಿ ಪೃತ್ವಿಕ್ ಶಂಕರ್, ಸಹಾಯಕ ಆಯುಕ್ತ ಶ್ರೀಧರ ಗೋಟೂರ್. ಡಿಎಸ್ಪಿ ಜಾವೀದ್ ಇನಾಂದಾರ, ತಹಸೀಲ್ದಾರ ಹುಸೇನಸಾಬ ಸರ್ಕಾವಸ್, ಉಪತಹಸೀಲ್ದಾರ ರೇವಪ್ಪ ತೆಗ್ಗಿನಮನಿ, ದೇವಾಲಯದ ಮೇಲ್ವಿಚಾರಕ ಶಿವಾನಂದ ಹಿರೇಮಠ, ಗ್ರಾಪಂ ಅಧ್ಯಕ್ಷೆ ಮಾನಮ್ಮ ರತ್ನರಾಜ ಶಾಲಿಮನಿ, ಉಪಾಧ್ಯಕ್ಷೆ ಬಸಮ್ಮ ಪರಮನಗೌಡ, ಪಿಡಿಓ ದೇವಿಂದ್ರಪ್ಪ ಹಳ್ಳಿ, ಮುಖಂಡರಾದ ವೆಂಕಟೇಶ ಯರಡೋಣಿ, ಮಲ್ಲಪ್ಪ ಕುರ್ಲಿ, ಹಣಮಂತ್ರಾಯಗೌಡ ದಾದಲಪುರ, ಮಾನಯ್ಯಗೌಡ ದಳಪತಿ, ಚಿನ್ನಪ್ಪ ಗುಡಗುಂಟಿ, ಮಲ್ಲಿಕಾರ್ಜುನ ಸಾಹುಕಾರ, ಸಂಜೀವನಾಯಕ, ಇಮಾಮಸಾಬ ಹವಾಲ್ದಾರ್, ಮಾನಯ್ಯ ಕವಾಲ್ದಾರ್, ಗಂಗಾಧರನಾಯಕ, ಮಮ್ಮದಲಿ ಗೋಡಿಹಾಳ್, ಸಲಿಂಸಾಬ ಕಂಬಾರ, ಫಕ್ರುದ್ದೀನ್ ಹವಾಲ್ದಾರ್, ಮೌನೇಶ ಬೋಯಿ, ಗ್ರಾಪಂ ಸದಸ್ಯರುಗಳು, ನೂರಾರು ಪುರವಂತರು, ತಿಂಥಣಿಯ ವಿವಿಧ ಸಂಘಗಳ ಪದಾಧಿಕಾರಿಗಳು, ರಾಜಕೀಯ ಧುರೀಣರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುರಪುರ ಅರಸು ಸಂಸ್ಥಾನದ ಯುವರಾಜ ರಾಜಾ ಲಕ್ಷ್ಮೀನಾರಾಯಣ ನಾಯಕರು ರಥಕ್ಕೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಅರ್ಪಿಸಿದರು. ಪೂಜ್ಯರಾದ ಮೌನೇಶ್ವರ ಮಹಾಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.ದೇವಸ್ಥಾನದ ಪೂಜ್ಯ ಮೌನೇಶ್ವರ ಮಹಾಸ್ವಾಮಿಗಳು ಸೇರಿದಂತೆ ಆಫಜಲಪೂರ, ಏಕದಂಡಿಗಿಯ ಪೂಜ್ಯರು ಅನೇಕ ಮಠಾಧೀಶರು, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಎಸ್‌ಪಿ ಪೃತ್ವಿಕ್ ಶಂಕರ್, ಸಹಾಯಕ ಆಯುಕ್ತ ಶ್ರೀಧರ ಗೋಟೂರ್. ಡಿಎಸ್ಪಿ ಜಾವೀದ್ ಇನಾಂದಾರ, ತಹಸೀಲ್ದಾರ ಹುಸೇನಸಾಬ ಸರ್ಕಾವಸ್, ಉಪತಹಸೀಲ್ದಾರ ರೇವಪ್ಪ ತೆಗ್ಗಿನಮನಿ, ದೇವಾಲಯದ ಮೇಲ್ವಿಚಾರಕ ಶಿವಾನಂದ ಹಿರೇಮಠ, ಗ್ರಾಪಂ ಅಧ್ಯಕ್ಷೆ ಮಾನಮ್ಮ ರತ್ನರಾಜ ಶಾಲಿಮನಿ, ಉಪಾಧ್ಯಕ್ಷೆ ಬಸಮ್ಮ ಪರಮನಗೌಡ, ಪಿಡಿಓ ದೇವಿಂದ್ರಪ್ಪ ಹಳ್ಳಿ, ಮುಖಂಡರಾದ ವೆಂಕಟೇಶ ಯರಡೋಣಿ, ಮಲ್ಲಪ್ಪ ಕುರ್ಲಿ, ಹಣಮಂತ್ರಾಯಗೌಡ ದಾದಲಪುರ, ಮಾನಯ್ಯಗೌಡ ದಳಪತಿ, ಚಿನ್ನಪ್ಪ ಗುಡಗುಂಟಿ, ಮಲ್ಲಿಕಾರ್ಜುನ ಸಾಹುಕಾರ, ಸಂಜೀವನಾಯಕ, ಇಮಾಮಸಾಬ ಹವಾಲ್ದಾರ್, ಮಾನಯ್ಯ ಕವಾಲ್ದಾರ್, ಗಂಗಾಧರನಾಯಕ, ಮಮ್ಮದಲಿ ಗೋಡಿಹಾಳ್, ಸಲಿಂಸಾಬ ಕಂಬಾರ, ಫಕ್ರುದ್ದೀನ್ ಹವಾಲ್ದಾರ್, ಮೌನೇಶ ಬೋಯಿ, ಗ್ರಾಪಂ ಸದಸ್ಯರುಗಳು, ನೂರಾರು ಪುರವಂತರು, ತಿಂಥಣಿಯ ವಿವಿಧ ಸಂಘಗಳ ಪದಾಧಿಕಾರಿಗಳು, ರಾಜಕೀಯ ಧುರೀಣರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಥೋತ್ಸವ ಸಂದರ್ಭದಲ್ಲಿ ನೂಕುನುಗ್ಗಲು ಆಗದಂತೆ ಭಾರೀ ಪೊಲೀಸ ಬಿಗಿ ಬಂದೋಬಸ್ಯ ಕಲ್ಪಿಸಿದರು. ನದಿತೀರ ಹಾಗೂ ದೇವಸ್ಥಾನದ ಹೊರ ಮತ್ತು ಒಳಗೆ ಸೇರಿದಂತೆ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು ಆಳವಡಿಸಲಾಗಿತ್ತು. ರಥೋತ್ಸವ ನಂತರ ಸಂಜೆ ಪಲ್ಲಕ್ಕಿ ಮಹಾಸೇವಾ ವಿಜೃಂಭಣೆಯಿಂದ ಜರುಗಿತು.



