ಚಿಕ್ಕನಹಳ್ಳಿಯಲ್ಲಿ ಸಾಲಬಾಧೆಗೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ!

ಸುರಪುರ ಟೈಮ್ಸ್ ವಾರ್ತೆ
ಹುಣಸಗಿ: ಸಾಲಬಾದೆಗೆ ರೈತನೊಬ್ಬ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಸವರಾಜ ತಂದೆ ಭೀಮಣ್ಣ ತುಂಬಗಿ (28) ಮೃತ ವ್ಯಕ್ತಿಯಾಗಿದ್ದು, ಈತ ಗ್ರಾಮದಲ್ಲಿ ವೈಯಕ್ತಿಕವಾಗಿ ಸುಮಾರು 8 ರಿಂದ 10ಲಕ್ಷವರೆಗೆ ಕೈ ಸಾಲ ಮಾಡಿಕೊಂಡಿದ್ದು.ಬ್ಯಾಂಕ್ ನಲ್ಲಿ ಕೂಡ 1 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದನು.ಇನ್ನು ಬೇರೆಯವರ ಜಮೀನುಗಳು ಲೀಸ್ ಹಾಕಿಕೊಂಡು ಬೆಳೆ ಬೆಳೆದಿದ್ದ ಸರಿಯಾಗಿ ಫಸಲು ಬಾರದ ಹಿನ್ನಲೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಸವರಾಜ ಮೃತಪಟ್ಟಿದ್ದಕ್ಕೆ ಕುಟುಂಬಸ್ಥರು ಆತಂಕಪಡುವಂತಾಗಿದ್ದು, ಸರ್ಕಾರದಿಂದ ಮೃತ ರೈತನಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನು ಈ ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!