ಸರ್ವೋತ್ತಮ ಸೇವಾ ಪ್ರಶಸ್ತಿ’ಗೆ ಕೃಷಿ ಇಲಾಖೆಯ ಚಂದ್ರಶೇಖರ ಎಂ.ಪತ್ತಾರ ಆಯ್ಕೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ:ರಾಜ್ಯ ಸರಕಾರದ ನೌಕರರಿಗೆ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿ’ಗೆ ಕೃಷಿ ಇಲಾಖೆ ಚಂದ್ರಶೇಖರ ಎಂ.ಪತ್ತಾರ ಆಯ್ಕೆ ಆಗಿದ್ದಾರೆ.
ಇವರು ಇಲಾಖೆ ಅನೇಕ ಜನಪರ ಕಾರ್ಯಕ್ರಗಳನ್ನು ಯಶಸ್ವಿಯಾಗಿ ನಡೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಿಸ್ತು, ಸಭ್ಯತೆ, ಪಾರದರ್ಶಕ ಆಡಳಿತದಿಂದ ಅಧಿಕಾರಿ ವರ್ಗ ಮತ್ತು ಸಾರ್ವಜನಿಕರಲ್ಲಿ ಮೆಚ್ಚುಗೆ ಗಳಿಸಿರುವ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆತಿರುವುದು ತಾಲೂಕಿಗೆ ಜನತೆಗೆ ಸಂತಸ ತಂದಿದೆ. ಸರ್ವೋತ್ತಮ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ ಪತ್ತಾರ ಅವರಿಗೆ ಸುರಪುರ ಟೈಮ್ಸ್ ವಾರ್ತೆ ವತಿಯಿಂದ ಹಾರ್ದಿಕ ಅಭಿನಂದನೆಗಳು

