ಆಟೋ, ಕ್ರೂಸರ್ ನಡುವೆ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು..!
ಸುರಪುರ ಟೈಮ್ಸ್ ವಾರ್ತೆ
ಸುರಪುರ :ಆಟೋ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೆ ಇಬ್ಬರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶೆಳ್ಳಿಗಿ ಕ್ರಾಸ್ ಬಳಿ ನಡೆದಿದೆ.
ತಾಲೂಕಿನ ದೇವಾಪುರ ಗ್ರಾಮದ ಬುಡ್ಡಪ್ಪ ತಳವಾರ್, ದೇವಪ್ಪ ಚಿಂಚೋಡಿ ಮೃತಪಟ್ಟಿದ್ದು, ಇನ್ನುಳಿದ ವ್ಯಕ್ತಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಆಸ್ಪತ್ರೆಗೆ ಕರೆದೋಯ್ಯುವ ಮಾರ್ಗ ಮಧ್ಯದಲ್ಲಿ ರಾಚಯ್ಯ ಸ್ವಾಮಿ ಅಸುನಿಗಿದ್ದಾನೆ.
ಇನ್ನು ಘಟನೆಯಲ್ಲಿ ಕ್ರೂಸರ್ ಹಾಗೂ ಆಟೋದಲ್ಲಿದ್ದ ಬೇರೆಯವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.ಇನ್ನು ಈ ಘಟನೆ ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ