ಮೇ 5 ಕ್ಕೆ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲುಮನವಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ; ಬುದ್ದಗಯಾ ಮಹಾಬೋಧಿ ಮಹಾ ವಿಹರಾದ ಆಡಳಿತ ಮಂಡಳಿ ಸಂಪೂರ್ಣವಾಗಿ ಬೌದ್ಧರಿಗೆ ನೀಡುವಂತೆ ಒತ್ತಾಯಿಸಿ, ಮೇ.5ರಂದು ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಎಲ್ಲಾ ಬೌದ್ಧ ಅನುಯಾಯಿಗಳು, ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳು
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿಸಬೇಕು ಎಂದು ರಾಹುಲ್ ಹುಲಿಮನಿ ಮನವಿ ಮಾಡಿದ್ದಾರೆ.
ನಗರದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಮಾತನಾಡಿದ ಅವರು ಬೌದ್ಧರಿಗೆ ತಮ್ಮ ಧಾರ್ಮಿಕ ಕ್ಷೇತ್ರ ಸ್ವತಂ ತ್ರವಾಗಿ ನಿರ್ವಹಿಸುವ ಅವಕಾಶಕ್ಕಾಗಿ ಸಂವಿಧಾನದ ಕಲಂ 13, 25, ಮತ್ತು 29ನ್ನು ಜಾರಿಗೊಳಿಸಲು ಅಡ್ಡಿಯಾಗಿರುವ ಬಿ.ಟಿ ಆ್ಯಕ್ಟ್ 1949ನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಬಿಕ್ಕು ಹಾಗೂ ಬಿಕ್ಕುಣಿ ಸಂಘ, ಉಪಾಸಕ- ಉಪಾಸಿಕಾ ಜಿಲ್ಲಾ ಸಮಿತಿ, ಸಮಸ್ತ ದಲಿತ ಸಂಘಟನೆಗಳು, ಬೌದ್ಧ ಸಂಘ ಸಂಸ್ಥೆಗಳು, ಬುದ್ಧ ವಿಹಾರದ ಸಮಿತಿಗಳ ಸಂಯುಕ್ತಾಶ್ರಯದಲ್ಲಿ
ಮೇ.5ರಂದು ಬೆಳಿಗ್ಗೆ 10 ಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ ಕಚೇರಿ, ಶಾಸ್ತ್ರಿ ಸರ್ಕಲ್ ಮಾರ್ಗವಾಗಿ ಸುಭಾಷ್ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿ ಸಮಾವೇಶಗೊಂಡು ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮತ್ತು ಬಿಹಾರ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲ ತಾಲೂಕುಗಳಿಂದ ಮತ್ತು ಸುತ್ತಮುತ್ತಲಿನ ಎಲ್ಲ ಬೌದ್ಧ ಅನುಯಾಯಿಗಳು, ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ವೆಂಕಟೇಶ್ ಹೊಸಮನಿ,ನಾಗಣ್ಣ ಕಲ್ಲದೇವನಹಳ್ಳಿ, ಭೀಮರಾಯ ಸಿಂದಿಗೇರಿ,ಮಾಳಪ್ಪ ಕಿರದಳ್ಳಿ,ಚಂದಪ್ಪ ಪಂಚಮ್ಮ ,ಶಿವಶಂಕರ್ ಹೊಸಮನಿ ಶರಮೀಳಾ ಕರ್ಡಕಲ್ಲ ,ಅವಿನಾಶ ಹೊಸಮನಿ ನಾಗರಾಜ ಬೇವಿನಗಿಡ, ಪರಶುರಾಮ ಗೋವಾ ,ಮಲ್ಲು ಮುಷ್ಠಳಿ ,ಬನ್ನಪ್ಪ ಕೋನ್ಹಾಳ , ಮುತ್ತುರಾಜ ಕೋನ್ಹಾಳ, ವೈಜನಾಥ ಹೊಸಮನಿ, ಮಾನಪ್ಪ ಜಾಂಢದಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


