ನಾಳೆ 1858 ಸುರಪುರ ವಿಜಯೋತ್ಸವ

ಸುರಪುರ ಟೈಮ್ಸ್ ವಾರ್ತೆ

ಸುರಪುರ : ಇಲ್ಲಿಯ ವೀರಪ್ಪ ನಿಷ್ಠಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ನಾಳೆ ಭಾನುವಾರ ಬೆಳಗ್ಗೆ 10.30 ಕ್ಕೆ ಸುರಪುರ ವಿಜಯೋತ್ಸವ 1858 ಕಾರ್ಯಕ್ರಮ ಏರ್ಪಡಿಸಲಾಗಿದೆ. ಭೀಮರಾಯನ ಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರ, ಓಕುಳಿ ಪ್ರಕಾಶನ ಮತ್ತು ಜಾಗೃತಿ ಸಮಾಜ ಸೇವಾ ಸಂಘ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅರಸು ಮನೆತನದ ಡಾ.ರಾಜಾ ಕೃಷ್ಣಪ್ಪ ನಾಯಕ ಉದ್ಘಾಟಿಸುವರು. ವೀರಪ್ಪ ನಿಷ್ಠಿ ಎಂಜನಿಯರಿಂಗ್ ಕಾಲೇಜಿನ ಕಾರ್ಯದರ್ಶಿ ಡಾ.ಶಾಂತಲಾ ಎಸ್.ನಿಷ್ಠಿ ಅಧ್ಯಕ್ಷತೆ ವಹಿಸುವರು. ಸಾಹಿತಿ ರಿಯಾಜ್ ಬೋಡೆ, ಪ್ರಥಮ ದರ್ಜೆ ಗುತ್ತಿಗೆದಾರ್ ದೇವಿಂದ್ರಪ್ಪಗೌಡ ಗೌಡಗೇರಿ, ಪಿಎಸ್‌ಐ ಕೃಷ್ಣ ಸುಬೇದಾರ್, ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಅಧ್ಯಕ್ಷ ಉಮೇಶ ಮೂಡಬೂಳ, ಉಪನ್ಯಾಸಕರಾದ ರಾಮನಗೌಡ, ರಾಜಗೋಪಾಲ ವಿಭೂತಿ, ಸುರಪುರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎಚ್.ಶ್ರವಣಕುಮಾರ ನಾಯಕ ಮುಖ್ಯ ಅತಿಥಿಗಳಾಗಿರುತ್ತಾರೆ. ಎಸ್‌ಟಿಒ ಸಣ್ಣಕೆಪ್ಪ ಕೊಂಡಿಕಾರ, ಉಪನ್ಯಾಸಕ ಬಸವರಾಜ ಕೊಡೇಕಲ್, ಹಿರಿಯ ವೈದ್ಯ ಡಾ.ಸತ್ಯನಾರಾಯಣ ಅಲ್ದಾರ್ಥಿ, ಹುಣಸಗಿಯ ಸಹಾಯಕ ಗ್ರಂಥಪಾಲಕ ಹಾಗೂ ಸಂಶೋಧಕ ಬಸನಗೌಡ ಎಸ್.ಪಾಟೀಲ್, ಕೆಂಭಾವಿಯ ಶರಣಬಸಯ್ಯ ಹಿರೇಮಠ ಸನ್ಮಾನಿತರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!