ಸುರಪುರ ಬೋವಿಗಲ್ಲಿಯ ಶ್ರೀ ಹುಲಿಗೆಮ್ಮ ದೇವಿ ಜಾತ್ರೆ ಫೆ.10ರಿಂದ 17ರವರೆಗೆ

ಸುರಪುರ ಟೈಮ್ಸ್ ವಾರ್ತೆ

ಸುರಪುರ; ನಗರದ ಬೋವಿಗಲ್ಲಿ ಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತಿಭಾವದಿಂದ ಜಾತ್ರಾ ಮಹೋತ್ಸವವನ್ನು ಫೆಬ್ರವರಿ 10 ರಿಂದ 17ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.
ಫೆಬ್ರವರಿ 10ರಂದು ಮಂಗಳವಾರ ಚಿಗರಿಹಾಳದಿಂದ ಕೊಂಡದ ಕಟ್ಟಿಗೆ ಆಗಮನದೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಫೆಬ್ರವರಿ 11ರಂದು ಬುಧವಾರ ಸಂಜೆ 6 ಗಂಟೆಗೆ ದೇವಿಯು ಗಂಗಸ್ಥಳಕ್ಕೆ (ಶೆಳ್ಳಗಿ ಮಂಟಪಕ್ಕೆ) ತೆರಳಲಿದ್ದು, ಫೆಬ್ರವರಿ 12ರಂದು ಗುರುವಾರ ನದಿಯಿಂದ ಗುಡಿಗೆ ಆಗಮನ ಹಾಗೂ ಸಂಜೆ 6 ಗಂಟೆಗೆ ಸುರಪುರ ಪಟ್ಟಣದಲ್ಲಿ ಭವ್ಯ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಲಿದೆ.
ಫೆಬ್ರವರಿ 13ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಪಾಯಸ ತಿರುವ ಕಾರ್ಯಕ್ರಮ ಹಾಗೂ 11.45ಕ್ಕೆ ಅಗ್ನಿಕೊಂಡ ಮತ್ತು ಜಾತ್ರಾ ಮಹೋತ್ಸವ ಜರುಗಲಿದೆ. ಫೆಬ್ರವರಿ 17ರಂದು ಮಂಗಳವಾರ ರಾತ್ರಿ 8 ಗಂಟೆಗೆ ಶ್ರೀ ದೇವಿಯ ಗರ್ಭಗುಡಿ ಪ್ರವೇಶದೊಂದಿಗೆ ಜಾತ್ರೆ ಸಮಾರೋಪ ಗೊಳ್ಳಲಿದೆ ಎಂದು ದೇವಸ್ಥಾನದ ಅರ್ಚಕರಾದ ಹುಲಗಪ್ಪ ಪೂಜಾರಿ ತಾತನವರು ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆಯಬೇಕೆಂದು ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ಗೋಪಾಲ ಮರೆಪ್ಪ ಆಲ್ದಾಳ ಗುತ್ತೆದಾರರು, ಉಪಾಧ್ಯಕ್ಷ ಶ್ರೀ ರಾಘವೇಂದ್ರ ಎಂ. ಹಾಗೂ ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!