ಶ್ರೀ ಶ್ರೀ ಶ್ರೀ ಭೋಜಲಿಂಗೇಶ್ವರ 31ನೇ ಜಾತ್ರಾ ಮಹೋತ್ಸವ ಅಂಗವಾಗಿ ಉಚ್ಚಾಯೋತ್ಸವ ಫೆ.23, ರಥೋತ್ಸವ, ಫೆ. 24 ರಂದು ಧರ್ಮಸಭೆ.

ಸುರಪುರ ಟೈಮ್ಸ್ ವಾರ್ತೆ

ಸುರಪುರ : ಶಹಾಪೂರ ತಾಲೂಕಿನ ಸಾವೂರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಾವೂರ ಮಠದ ಪೂಜ್ಯ ಶ್ರೀ ಶರಭಯ್ಯ ಸ್ವಾಮಿಗಳು ಇವರ ನೇತೃತ್ವದಲ್ಲಿ ಶ್ರೀ ಸಚಿದಾನಂದ ನಿತ್ಯ ನಿರಂಜನ ಮೂರ್ತಿ ಸ್ವಯಂಸಿದ್ಧ ಶ್ರೀ ಶ್ರೀ ಶ್ರೀ ಭೋಜಲಿಂಗೇಶ್ವರ 31ನೇ ಜಾತ್ರಾ ಮಹೋತ್ಸವ ಅಂಗವಾಗಿ ಫೆಬ್ರವರಿ 23. ರಂದು ಸೋಮವಾರ ಸಾಯಂಕಾಲ 6:30 ಉಚ್ಚಾಯೋತ್ಸವ, 24. ರಂದು ಮಂಗಳವಾರ ಬೆಳಿಗ್ಗೆ 6.30.ಕೆ. ಶ್ರೀ ಭೋಜಲಿಂಗೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಮುಂಜಾನೆ 9:15ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ, 2, ಗಂಟೆಗೆ ಉಸುಕಿನ ಚೀಲ ಎತ್ತುವುದು ಕಾರ್ಯಕ್ರಮದಲ್ಲಿ ವಿಜೇತರಾದ ವರಿಗೆ ಪ್ರಥಮ ಬಹುಮಾನ ರೂ. 5,000, ಎರಡನೇ ಬಹುಮಾನರೂ. 1100 ವಿತರಿಸಲಾಗುವುದು. ಸಾಯಂಕಾಲ 6:30ಕ್ಕೆ ರಥೋತ್ಸವ ರಾತ್ರಿ 7:30ಕ್ಕೆ ಧರ್ಮಸಭೆ ಜರುಗುವದು.ಈ ಧರ್ಮ ಸಭೆಯನ್ನು ಕೂಚಬಾಳ ಭೀಮಾಶಂಕರಮಠದ ಪೂಜ್ಯಶ್ರೀ ಪದ್ಮನಾಭ ಗುರೂಜಿ ಅವರು ಉದ್ಘಾಟಿಸುವರು, ಶಹಪೂರ ಚರಬಸವೇಶ್ವರ ಸಂಸ್ಥಾನ ಗದ್ದಗೆ ಮಠದ ಪೂಜ್ಯಶ್ರೀ ಬಸವಯ್ಯ ಶರಣರು ಸಮ್ಮುಖ, ಸಾವೂರ ಭೋಜ ಲಿಂಗೇಶ್ವರ ಮಠದ ಪೂಜ್ಯಶ್ರೀ ಶರಭಯ್ಯ ಶರಣರು ಅಧ್ಯಕ್ಷತೆ ವಹಿಸುವರು, ಸಾವೂರ ಭೋಜ ಲಿಂಗೇಶ್ವರ ಮಠದ ಶ್ರೀ ಬಾಲಯೋಗಿ ಭೋಜಲಿಂಗ ಸ್ವಾಮಿಗಳು ಆಶೀರ್ವದಿಸುವರು, ಕುರಮ.ಸಂ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಾಪೂರ, ಗು.ವಿ ನಿವೃತ್ತ ಪ್ರಾಧ್ಯಪಕ ಡಾ. ಎ.ಪಿ. ಹೊಸಮನಿ ಸೈದಾಪೂರ, ಡಿ.ಡಿ.ಯು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಭೀಮಣ್ಣ ಮೇಟಿ, ಶಹಾಪೂರ ಸಿಪಿಐ ಎಸ್ ಎಂ ಪಾಟೀಲ್, ಶಹಪೂರ ನ್ಯಾಯವಾದಿ ವಿಶ್ವನಾಥ ರಡ್ಡಿ ಸಾಹು ಸಾವೂರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದಲಿಂಗ ರಡ್ಡಿ ಸಾಹು, ಯಾದಗಿರಿಯ ಮಹೇಶರಡ್ಡಿ ಮುದ್ರಾಳ, ಸುರಪೂರ್ ನ್ಯಾಯವಾದಿ ಯಂಕಾರಡ್ಡಿ ಬೋನಾಳ ಇವರು ಮುಖ್ಯ ಅತಿಥಿಗಳಾಗಿ ಆಗಮಿಸು ವರು.ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ ಗದ್ದಿಗೆ, ಶಹಪೂರಅ.ಬಾ.ವೀ. ಲಿಂ ಮಹಾಸಭಾ ಅಧ್ಯಕ್ಷ ಸಿದ್ದು ಸಾಹು ಆರಬೋಳ, ಸಾವೂರ ಯೋಗ ಗುರು ಹಣಮಂತರಡ್ಡಿ, ಶಹಪೂರ ಬಾಣಿಜಗ ಅಧ್ಯಕ್ಷ ಮಹೇಶ ಆನೆಗುಂದಿ, ಸಾವೂರ ಮುಖಂಡರಾದ ವಿಶ್ವನಾಥ ರೆಡ್ಡಿ ಪ್ರೋ. ಪಾಟೀಲ್, ಸಂಗನಗೌಡ ಸುರಡ್ಡಿ, ಸಾವೂರ ನಿವೃತ್ತ ನಿರ್ವಾಹಕ ನಾಗರೆಡ್ಡಿ ಸುರೆಡ್ಡಿ, ಸಾವೂರ ಮುಖಂಡ ಶರಣಗೌಡ ಮಾಲಿ ಪಾಟೀಲ್‌, ವೆಂಕಣ್ಣಗೌಡ ಮಾಲಿ ಬಿರಾದರ ಸಾವೂರ, ಶರಣಪ್ಪ ಸಾಹು ಅವುಂಟಿ ಸಾವೂರ, ದ್ಯಾವಪ್ಪ ದೋರಿ ಸಾವೂರ ಇವರು ಅತಿಥಿಗಳಾಗಿ ಆಗಮಿಸುವರು.ಈ ಕಾರ್ಯಕ್ರಮಕ್ಕೆ ಸಾವೂರ, ಕಾಟಮಳ್ಳಿ, ಬಿರನೂರ, ಪರಸಾಪೂರ, ಹತ್ತಿಗುಡೂರ, ಕೊಂಗಂಡಿ, ಮಂಡಹಳ್ಳಿ ಗ್ರಾಮದ ಗುರುಹಿರಿಯರು ಹಾಗೂ ಎಲ್ಲಾ ಧರ್ಮದ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾಧಿಗಳು ಆಗಮಿಸಬೇಕೆಂದು ಸದ್ಭಕ್ತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ದ್ದಾರೆ.

Leave a Reply

Your email address will not be published. Required fields are marked *

error: Content is protected !!