ಭಕ್ತಿಭಾವದ ಸೋಮನಾಥ ಜ್ಯೋತಿರ್ಲಿಂಗಕ್ಕೆ ಪೂಜೆ – ರಂಗಂಪೇಟೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ನಗರದ ರಂಗಂಪೇಟೆಯ ಈಶ್ವರ ಬನಶಂಕರಿ ದೇವಿಯ ದೇವಸ್ಥಾನದಲ್ಲಿ ಸೋಮನಾಥ ಜ್ಯೋತಿರ್ಲಿಂಗದ ಅಂಗವಾಗಿ ಶುಕ್ರವಾರ ವಿಶೇಷ ಪೂಜೆ, ಭಜನೆ ಹಾಗೂ ಸತ್ಸಂಗ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ರಂಗಂಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ಧಾರ್ಮಿಕ ಉತ್ಸಾಹ ವ್ಯಕ್ತಪಡಿಸಿದರು.
ಗುಜರಾತ್ ರಾಜ್ಯದಲ್ಲಿರುವ ಇತಿಹಾಸ ಪ್ರಸಿದ್ಧ ಸೋಮನಾಥ ಜ್ಯೋತಿರ್ಲಿಂಗದ ಆರಾಧನೆಯ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪರಮಪೂಜ್ಯ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಷ್ಯರಾದ ಶರಣು ಗುರೂಜಿ ಹಾಗೂ ದೇವಾಲಯದ ಅರ್ಚಕ ನಿಂಗಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ಅನೇಕ ಕುಟುಂಬಗಳು ಹಾಗೂ ಭಕ್ತರು ಸಂಕಲ್ಪ ಪೂಜೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

ಕಾರ್ಯಕ್ರಮದ ಅಂಗವಾಗಿ ಸಂಜೆ ವೇಳೆ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಮಹಿಳೆಯರು ಕುಂಭಕಳಸಗಳನ್ನು ಹೊತ್ತು ಭಜನೆಗಳೊಂದಿಗೆ ಮೆರವಣಿಗೆಯಲ್ಲಿ ದೇವಾಲಯದವರೆಗೆ ಆಗಮಿಸಿದರು. ಭಜನೆಗಳ ಮಧ್ಯೆ ನಡೆದ ಈ ಮೆರವಣಿಗೆ ಭಕ್ತಿಭಾವದ ವಾತಾವರಣವನ್ನು ಇನ್ನಷ್ಟು ಮೆರಗುಗೊಳಿಸಿತು.
ಪೂಜಾ ಕಾರ್ಯಕ್ರಮದ ನಂತರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಿಲ್ಲಾ ಶಿಕ್ಷಕಿ ಶಿಲ್ಪಾ ಅವಂಟಿ ಅವರ ನೇತೃತ್ವದಲ್ಲಿ ಸತ್ಸಂಗ ಕಾರ್ಯಕ್ರಮ ಜರುಗಿತು. ಸತ್ಸಂಗದಲ್ಲಿ ಆಧ್ಯಾತ್ಮಿಕ ಚಿಂತನೆಗಳು ಹಾಗೂ ಭಜನೆಗಳ ಮೂಲಕ ಭಕ್ತರಲ್ಲಿ ಧಾರ್ಮಿಕ ಸ್ಪೂರ್ತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ನಿಷ್ಕ್ರಿ ಕಡ್ಡಪ್ಪನವರ ವಿರಕ್ತ ಮಠದ ಪ್ರಭುಲಿಂಗ ಮಹಾಸ್ವಾಮಿಗಳು, ರುಕ್ಕಾಪುರದ ಗುರುಶಾಂತಮೂರ್ತಿ ಶಿವಾಚಾರ್ಯರು, ಡಾ. ಸುರೇಶ ಸಜ್ಜನ್, ರಾಜಾ ಸಂತೋಷ ನಾಯಕ, ಮಲ್ಲಣ್ಣ ಸಾಹು ಮುಧೋಳ, ಸಂಗನಗೌಡ ಬೆಳ್ಳಿ ಬೋನ್ಹಾಳ ಮಲ್ಲಿಕಾರ್ಜುನ ಕಡೆಚೂರ, ವೀರುಪಾಕ್ಷಿ ಕೋನ್ಹಾಳ, ಸೋಮಶೇಖರ್ ಶಾಬಾದಿ,ಸೂಗರೇಶ ವಾರದ್, ನಿಂಗಪ್ಪ ರಾಯಚೂರಕರ್, ಶರಣಪ್ಪ ಕಲಕೇರಿ, ಸೋಮರಾಯ ಶಹಾಪುರ, ಅಂಬ್ರೇಶ ಕುಂಬಾರ, ರಘುರಾಮ ಕಡಬೂರ, ರಾಘವೇಂದ್ರ ಓಬಳಶೆಟ್ಟಿ, ಚನ್ನಬಸಪ್ಪ ಚಟ್ಟಿ, ಸಂಗಪ್ಪ ಚಟ್ಟಿ, ಶಿವಶರಣಪ್ಪ ಹೆಡಗಿನಾಳ, ವೀರಭದ್ರಯ್ಯ ಹಿರೇಮಠ ಬೋನ್ಹಾಳ, ಈಶ್ವರಗೌಡ ಮಾಲಿಪಾಟೀಲ್ ಬೋನ್ಹಾಳ, ವಿನಯಕುಮಾರ್ ಅವಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಾಧುರಿ ಕಲಕುಂಡ, ರಾಜೇಶ್ವರಿ ಜ್ಯೋತಿ ಶಾಬಾದಿ, ಜಯಮ್ಮ ಓಬಳಶೆಟ್ಟಿ, ಪಾರ್ವತಿ ಚಟ್ಟಿ, ಸಂಜನಾ ಬೋಡಾ, ನೀಲಮ್ಮ ಕುಂಬಾರ, ರೇಖಾ ಗುಳಗಿ, ಸಂಗಣ್ಣ ಯಕ್ಕೇಳ್ಳಿ, ಮೌನೇಶ ನಾಳವಾರ, ರಾಜು ಸಾಲವಾಡಗಿ, ರಮೇಶ ಡೊಳ್ಳೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಸೋಮನಾಥ ಜ್ಯೋತಿರ್ಲಿಂಗ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಸೋಮನಾಥ ಜ್ಯೋತಿರ್ಲಿಂಗವು ಭಾರತದ ಆಧ್ಯಾತ್ಮಿಕ ಪರಂಪರೆಯ ಪ್ರತೀಕವಾಗಿದ್ದು ಭಕ್ತರಲ್ಲಿ ಭಕ್ತಿ, ಶ್ರದ್ಧೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುತ್ತದೆ ಎಂದು ಹೇಳಿದರು. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಆತ್ಮೀಯತೆಯನ್ನು ವೃದ್ಧಿಸುವುದಕ್ಕೆ ಸಹಕಾರಿಯಾಗುತ್ತವೆ.
ಡಾ.ಸುರೇಶ ಸಜ್ಜನ್
ಅದ್ಯಕ್ಷರು ತಾಲೂಕು ವೀರಶೈವ ಲಿಂಗಾಯತ ಸಮಿತಿ ಸುರಪುರ.


