ಶುಚಿ, ರುಚಿ ಅಡುಗೆಯಿಂದ ಶಿಕ್ಷಣಕ್ಕೆ ನೆರವಾಗಿ;ಚನ್ನಪ್ಪಗೌಡ ಚೌದ್ರಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ;ವಸತಿ ನಿಲಯದಲ್ಲಿ ಅಡುಗೆ ತಯಾರಿಸುವ ತಾಯಿಯಂದಿರು ಶುಚಿ ಹಾಗೂ ರುಚಿಯಾದ ಅಡುಗೆ ಮಾಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂದು ಚನ್ನಪ್ಪ ಗೌಡ ಚೌದ್ರಿ ಹೇಳಿದರು.
ಅವರು ನಗರದ ಡಿ ದೇವರಾಜ್ ಅರಸು ಭವನದಲ್ಲಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ಸಿಬ್ಬಂದಿಗಳಿಗೆ ಆರೋಗ್ಯ ಶಿಕ್ಷಣ ಮತ್ತು ಅಡುಗೆ ತಯಾರಿಸುವ ಕೌಶಲ್ಯಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಅಡುಗೆ ಆಸ್ಪತ್ರೆಯಾಗಿ ಆಹಾರ ಔಷಧಿಯಾಗಬೇಕು. ಅದು ಶಿಸ್ತು ಮತ್ತು ಸ್ವಚ್ಛತೆಯಿಂದ ಕೂಡಿರಬೇಕು. ಅಡುಗೆಯಲ್ಲಿಪ್ರೀತಿ, ವಿಶ್ವಾಸ ಇದ್ದಾಗ ಹೆಚ್ಚಿನ ಶುಚಿ ಮತ್ತು ರುಚಿ ನೀಡುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಲ್ಲಪ್ಪ ರವರು ಮಾತನಾಡಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು ಸ್ವ ಸ್ವಚ್ಛತೆ ಮತ್ತು ಸಾಮಾಜಿಕ ಸ್ವಚ್ಛತೆ ಕಾಪಾಡ ಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ತಿಪ್ಪಾರೆಡ್ಡಿ ಮಾತನಾಡಿ ವಿವಿಧ ಬಗೆಯ ಶುಚಿಯಾದ ರುಚಿಯಾದ ಸಾಂಬಾರ ತಯಾರಿಸುವ ಕಾಶ್ಯಲ್ಯವನ್ನು , ಕಲೆಯನ್ನು ಪ್ರಾಯೋಗಿಕವಾಗಿ ಕರಗತ ಮಾಡಿಕೊಂಡು ನಿಲಯದ ವಿದ್ಯಾರ್ಥಿಗಳಿಗೆ ರುಚಿ ರುಚಿಯಾದ ಅಡುಗೆ ತಯಾರಿಸಿ ಆರೋಗ್ಯ ಮತ್ತು ಶಿಸ್ತನ್ನು ಕಾಪಾಡಲು ಸಿಬಂದಿಗಳಿಗೆ ಕರೆ ಕೊಟ್ಟರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಶಿವಮೊಗ್ಗದ ಮಂಜುನಾಥ ಮುಖ್ಯ ಅಡಿಗೆಯವರಿಗೆ ವಿವಿಧ ಬಗೆಯ ಸಾಂಬಾರ್ ಮತ್ತು ಖಾದ್ಯಗಳನ್ನು ತಯಾರಿಸುವುದನ್ನು ಪ್ರಾಯೋಗಿಕವಾಗಿ ತರಬೇತಿ ನೀಡಿದರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ವಿಶ್ರಾಂತ ನಿಲಯ ಮೇಲ್ವಿಚಾರಕರಾದ ಜಯಪ್ಪ , ಶಾಂತಾಬಾಯಿ, ನಾಗಪ್ಪ ಕೊಡೆಕಲ್, ಮಹಾದೇವಿ ರವರು ವೇದಿಕೆ ಮೇಲೆ ಉಪಸ್ಥಿತರಿದ್ದರು.ಇಲಾಖೆಯ ನಿಲಯ ಮೇಲ್ವಿಚಾರಕರು ಅಡುಗೆಯವರು ಅಡುಗೆ ಸಹಾಯಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!