ದೇವಸೂಗೂರಿನ ಶ್ರೀ ಸೂಗುರೇಶ್ವರ ಸ್ವಾಮಿಯ ಜೋಡು ರಥಗಳಿಗೆ ತೇರಿನ ಮನೆ ಶಂಕುಸ್ಥಾಪನೆ|20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಾಣ – ಶಿವಶಂಕರಪ್ಪ ಸಾಹುಕಾರ್ ಹೇಮನಾಳರ ಭಕ್ತಿಸೇವೆ.

ಸುರಪುರ ಟೈಮ್ಸ್ ವಾರ್ತೆ

ದೇವಸೂಗೂರು : ಸುಕ್ಷೇತ್ರ ದೇವಸೂಗೂರಿನ ಆರಾಧ್ಯ ದೈವವಾದ ಶ್ರೀ ಸೂಗುರೇಶ್ವರ ಸ್ವಾಮಿಯ ಜೋಡು ರಥಗಳಿಗೆ ನಿರ್ಮಾಣಗೊಳ್ಳಲಿರುವ ತೇರಿನ ಮನೆಯ ಶಂಕುಸ್ಥಾಪನೆ ಕಾರ್ಯಕ್ರಮವು ಇಂದು ಭಕ್ತಿಭಾವದಿಂದ ನೆರವೇರಿಸಲಾಯಿತು.
ಸುಮಾರು 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ತೇರಿನ ಮನೆಯ ಕಾಮಗಾರಿಯನ್ನು, ಶ್ರೀ ಸೂಗುರೇಶ್ವರ ಸ್ವಾಮಿಯ ಪರಮಭಕ್ತರು ಹಾಗೂ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್ ಹೇಮನಾಳ ಅವರು ತಮ್ಮ ಭಕ್ತಿ ಸೇವೆಯಾಗಿ ಸಂಪೂರ್ಣವಾಗಿ ಹೊಣೆ ಹೊತ್ತು ನಡೆಸಲಿದ್ದಾರೆ.
ಶಂಕುಸ್ಥಾಪನೆ ಕಾರ್ಯಕ್ರಮವು ಸೂಗುರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ರಾಹುಲ್ ಸ್ವಾಮಿ ಶಿವಲಿಂಗ ಅವರ ಸಾನಿಧ್ಯದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಏ. ವೈ. ಮಲ್ಲಪ್ಪ ದಣಿ, ಸದಸ್ಯರಾದ ಸಿ. ಅಶೋಕ್, ಜಿಂದಪ್ಪ, ಶರಣಪ್ಪ, ಅರ್ಚಕ ಸಂಘದ ಅಧ್ಯಕ್ಷ ಬಂಗಿ ಸೂಗಯ್ಯ ಸ್ವಾಮಿ ಸೇರಿದಂತೆ ಅರ್ಚಕರಾದ ಶಾಂತ ವೀರೇಶ್, ನಂದಿಕೋಲ್ ಸುರೇಶ್, ಅರೋಲಿ ಸುರೇಶ್, ಶಿವಲಿಂಗ, ಬಸಯ್ಯ, ರಾಚಯ್ಯ, ಮರುಳ, ಡಾ. ಪ್ರಕಾಶಯ ನಂದಿ ,ಸತೀಶ್ ದೊಡ್ಡಿ, ದೇವಸ್ಥಾನದ ಸಿಬ್ಬಂದಿಗಳಾದ ನವೀನ್ ಕುಮಾರ್ ಮತ್ತು ಅಣ್ಣವೀರಯ್ಯ ಸ್ವಾಮಿ ಸೇರಿದಂತೆ ಅನೇಕ ಭಕ್ತರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದು.

Leave a Reply

Your email address will not be published. Required fields are marked *

error: Content is protected !!