ಮಹಿಳಾ ಭಾನುವಾರ ಆಚರಣೆ|ಎಲ್ಲಾ ಕ್ಷೇತ್ರಗಳಲ್ಲೂ ಮಹಿಳಾ ಸಾಧನೆಗೆ ಪ್ರಶಂಸೆ; R.ಆನಂದ.
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ. ಇಂದಿನ ದಿನಮಾನಗಳಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಆರ್. ಆನಂದ ಹೇಳಿದರು.
ಅವರು ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ಮಹಿಳಾ ಭಾನುವಾರವನ್ನು ಭಕ್ತಿಭಾವದಿಂದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಿಸ್ ಮಂಜುಳಾ ಜಾಕೋಬ್ ಮಾತನಾಡಿ ಮಹಿಳೆಯರು ದೇವರ ಕೃಪಾವರಗಳನ್ನು ಹೊಂದಿರುವವರು. ಅವರ ಪ್ರೀತಿ, ಕರುಣೆ ಮತ್ತು ನಿಸ್ವಾರ್ಥ ಸೇವೆ ಸಮಾಜಕ್ಕೆ ದಾರಿದೀಪವಾಗಿದ್ದು, ಕುಟುಂಬ ಹಾಗೂ ಸಮುದಾಯದ ಬಲವರ್ಧನೆಗೆ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಅಂಗವಾಗಿ ಮಹಿಳಾ ಸೇವಾ ಸಂಘದ ಸದಸ್ಯೆಯರು ಸ್ತುತಿ-ಆರಾಧನೆ ನಡೆಸಿ, ಕಿರು ನಾಟಕ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಈ ಸಂದರ್ಭದಲ್ಲಿ ರೆ. ಪ್ರಕಾಶ್ ಹಂಚಿನಾಳ, ಸಾಮುವೇಲ್ ಮ್ಯಾಥ್ಯೂ, ವಸಂತಕುಮಾರ, ಪಾಲನಾಯ್ಕ, ಅಮಿತ್ ಪಾಲ್, ಜಯಪ್ಪ, ದೇವಪುತ್ರ, ಮಾನುವೆಲ್ ತಂಗಪಾಂಡೆ, ವಿಜಯಕುಮಾರ, ಜಸ್ಟಿನ್ ಜಿಮ್ಮಿ, ಥಾಮಸ್ ಮ್ಯಾಥ್ಯೂ, ನವೀನ್ ಕುಮಾರ, ಹನೋಕ್ ಸೇರಿದಂತೆ ಮಹಿಳಾ ಸೇವಾ ಸಂಘದ ಸುನೀಲಾ ಶಾಂತಕುಮಾರ, ಸುಜಾತಾ ಆನಂದ, ಸೋನಾಸುಕುಮಾರಿ, ಆಲಿಸ್, ಚಂದ್ರ ಮ್ಯಾಥ್ಯೂ, ಸುಮತಿ ವಸಂತ, ಸುಜಾತ ಜಯಪ್ಪ, ಲಲಿತಾ ದೇವಪುತ್ರ, ಸುಕುಮಾರಿ ಇಮ್ಮಾನುವೇಲ್, ಸಾಗರಿಕ, ಶೋಭಾ, ರೆಬೆಕ್ಕಾ, ಸ್ಟೆಲ್ಲಾ, ರತ್ನಮ್ಮ, ಜೋವಿತಾ, ಸುನೀತಾ, ಶಾಲಿನಿ, ಎಸ್ತರ್, ಸೌಮ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

