ವಿಶೇಷ ಚೇತನರನ್ನು ಪ್ರೀತಿಯಿಂದ ಆರೈಕೆ ಮಾಡಿ;ಸಚಿನಕುಮಾರ ಸಾಲಕ್ಕಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ ;ವಿಶೇಷ ಚೇತನರನ್ನು ಪ್ರೀತಿಯಿಂದ ಆರೈಕೆ ಮಾಡುವುದರ ಜೊತೆಗೆ ಎಪಿಡಿ ಸಂಸ್ಥೆಯಲ್ಲಿ ಸಿಗುವ ಎಲ್ಲಾ ಸೌಲಭ್ಯವನ್ನು ಪಡೆದುಕೊಂಡು ನಿಮ್ಮ ಮಕ್ಕಳನ್ನು ಸ್ವಾಲಂಬಿಗಳಾಗಿಸಿ ಎಂದು ಅಜೀಮ್ ಪ್ರೇಮಜೀ ಫೌಂಡೇಷನ್ ಜಿಲ್ಲಾ ಸಂಯೋಜಕ ಸಚಿನಕುಮಾರ ಸಾಲಕ್ಕಿ ಪಾಲಕರಲ್ಲಿ ವಿನಂತಿಸಿಕೊಂಡರು.
ಅವರು ಸುರಪುರದ ಎಪಿಡಿ ಸಂಸ್ಥೆವತಿಯಿಂದ ವಿಶೇಷ ಚೇತನರಿಗೆ ಅಗತ್ಯ ಉಪಕರಣಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಪ್ರಾಸ್ತವಿಕವಾಗಿ ಸಂಸ್ಥೆಯ ತಾಲೂಕ ಸಂಯೋಜಕ ಗೀರಿಶ ಕುಲ್ಕರ್ಣಿ ಮಾತನಾಡಿ ಎಪಿಡಿ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಅಜೀಮ್ ಪ್ರೇಮಜೀ ಫೌಂಡೇಷನ್ ಧನಸಹಾಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷ ಚೇತನರಿಗೆ ಅವಶ್ಯವಿರುವ ಸಾಧನ ಸಲಕರಣೆಗಳು ಹಾಗೂ ಅಗತ್ಯವಿರುವ ಮಾರ್ಗದರ್ಶನ ನೀಡುತ್ತಿದೆ ಪಾಲಕರು ಇದರ ಸದುಪಯೋಗ ಪಡಿಸಿಕೊಳ್ಳಿಬೇಕು ಎಂದರು. ಅಜೀಮ್ ಪ್ರೇಮಿಜೀ ಪೌಂಡೇಷನನ್ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ ಮಾತನಾಡಿ ವಿಶೇಷ ಚೇತನ ಮಕ್ಕಳು ದೇವರ ಪ್ರಸಾದದಂತೆ, ಅವರನ್ನು ತುಂಬಾ ಗೌರವದಿಂದ, ಪ್ರೀತಿಯಿಂದ ನೋಡಿಕೊಳ್ಳುವುದರ ಜೊತೆಗೆ ಈ ಮಕ್ಕಳು ನಮಗೆ ಭಾರ ಎಂಬ ಮನೋಭಾವನೆ ಬೇಡ ಎಂದರು. ಈ ಸಂಸ್ಥೆಯಲ್ಲಿ ಉಚಿತವಾಗಿ ಪಿಸಿಯೋಥೆರಪಿ, ಅಗತ್ಯ ಮಾರ್ಗದರ್ಶನ ನೀಡುತ್ತಾರೆ ಇದರ ಸದುಪಯೋಗ ಪಡೆದುಕೊಳ್ಳಿಬೇಕು. ಕಾರ್ಯಕ್ರಮದಲ್ಲಿ ಪಿಸಿಯೋಥೆರಪಿಸ್ಟ ಶರಣಬಸಮ್ಮ , ತಾಲೂಕಿನ ವಿವಿಧ ಗ್ರಾಮಗಳಿಂದ ವಿಶೇಷ ಚೇತನ ಫಲಾನುಭವಿಗಳು ಹಾಗೂ ಎಪಿಡಿ ಸಂಸ್ಥೆಯ ಸಿಬಂದ್ಧಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!