ಏ.15ರ ವರಿಗೆ ನಾರಾಯಣಪುರ ಜಲಾಶಯಕ್ಕೆ ನೀರು ಹರಿಸಲು ಒತ್ತಾಯ: ಮಾಜಿ ಸಚಿವ ನರಸಿಂಹ ನಾಯಕರಿಂದ ಜಲ ಸಂಪನ್ಮೂಲ ಸಚಿವ ಉಪ ಮುಖ್ಯಮಂತ್ರಿ D.K.ಶಿವಕುಮಾರವರಿಗೆ ಮನವಿ.
ಸುರಪುರ ಟೈಮ್ಸ್ ವಾರ್ತೆ
ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಮಾನ್ಯ ಉಪ ಮುಖ್ಯಮಂತ್ರಿ ಜಲ ಸಂಪನ್ಮೂಲ ಸಚಿವ D. K. ಶಿವುಕುಮಾರವರಿಗೆ ನಾರಾಯಣಪುರ ಜಲಾಶಯ ವ್ಯಾಪ್ತಿಯ ರೈತರ ಪರವಾಗಿ ಮಹತ್ವದ ಮನವಿ ಸಲ್ಲಿಸಲಾಯಿತು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಸಚಿವರಾದ ರಾಜುಗೌಡ (ನರಸಿಂಹ ನಾಯಕ) ಅವರು ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ವ್ಯಾಪ್ತಿಯಲ್ಲಿ ಬೆಳೆದಿರುವ ಬೆಳೆಗಳು ಈಗ ಕಟಾವು ಹಂತಕ್ಕೆ ತಲುಪಿರುವುದನ್ನು ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ನೀರಿನ ಸರಬರಾಜು ಅತ್ಯಂತ ಪ್ರಮುಖವಾಗಿದ್ದು, ಏಪ್ರಿಲ್ 15ರವರೆಗೆ ನಿರಂತರವಾಗಿ ಕಾಲುವೆಗಳಿಗೆ ನೀರು ಹರಿಸುವುದು ಅವಶ್ಯಕವಾಗಿದೆ ಎಂದು ಅವರು ಮನವಿಯಲ್ಲಿ ವಿವರಿಸಿದರು. ರೈತರು ತಮ್ಮ ಬೆಳೆಗಳನ್ನು ಸುರಕ್ಷಿತವಾಗಿ ಕಟಾವು ಮಾಡಿಕೊಳ್ಳಲು ಇದು ನಿರ್ಣಾಯಕ ಸಮಯವಾಗಿದೆ ಎಂದು ಹೇಳಿದರು.
ಒಂದು ವೇಳೆ ಈ ಹಂತದಲ್ಲಿ ನೀರು ಹರಿವನ್ನು ನಿಲ್ಲಿಸಿದರೆ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗುವ ಸಾಧ್ಯತೆ ಇದ್ದು, ರೈತರ ಆರ್ಥಿಕ ಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆತಂಕ ವ್ಯಕ್ತಪಡಿಸಲಾಯಿತು.
ಈ ಹಿನ್ನೆಲೆಯಲ್ಲಿ, ರೈತರ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಂಡು ಸಂಬಂಧಿತ ಅಧಿಕಾರಿಗಳಿಗೆ ಏಪ್ರಿಲ್ 15ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಸ್ಪಷ್ಟ ಆದೇಶ ನೀಡಬೇಕೆಂದು ಮಾಜಿ ಸಚಿವ ನರಸಿಂಹ ನಾಯಕರು ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

