⚡BREAKING: ಕೃಷಿ ಹೊಂಡದಲ್ಲಿ ನಾಲ್ವರು ಮಕ್ಕಳು ಮುಳುಗಿ ಸಾವು.

ಸುರಪುರ ಟೈಮ್ಸ್ ವಾರ್ತೆ

ಕೆಂಭಾವಿ;ಕೃಷಿ ಹೊಂಡದಲ್ಲಿ ಈಜುಲು ಹೋಗಿದ್ದ ನಾಲ್ವರು ಮಕ್ಕಳು ಮೃತಪಟ್ಟಿರುವ ಘಟನೆ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಜರುಗಿದೆ.

ಕಿರಣ(6), ಶರತ್(6), ಹನುಮೇಶ್(7) ಮತ್ತು ಬಸಮ್ಮ(11) ಮೃತ ದುರ್ದೈವಿಗಳು. ಬಿಸಿಲಿನ ತಾಪದಿಂದ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ನೀರಿಗೀಳಿದ ಮಕ್ಕಳಿಗೆ ಅದೇ ಕೃಷಿ ಹೊಂಡ ಮೃತ್ಯಕೂಪವಾಗಿದೆ.

ಶಾಲೆಗೆ ರಜೆ ಇದ್ದ ಕಾರಣಕ್ಕೆ ಈಜಲೆಂದು ಮಕ್ಕಳು ಕೃಷಿ ಹೊಂಡಕ್ಕೆ ಹೋಗಿದ್ದರು ಈ ವೇಳೆ ಈ ದುರ್ಘಟನೆ ನಡೆದಿದೆ. ಮಕ್ಕಳನ್ನು ಕಳೆದುಕೊಂಡು ಪಾಲಕರು ಆಘಾತಗೊಂಡಿದ್ದು, ಮೃತ ಮಕ್ಕಳ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ‌. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!