ಸುರಪುರದಲ್ಲಿ ಕಟ್ಟಡ ಸಾಮಾಗ್ರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆ|ಮಲ್ಲಣ್ಣ ಸಾಹುಕಾರ ಮಧೋಳ ಅಧ್ಯಕ್ಷರಾಗಿ ಆಯ್ಕೆ | ನೂತನ ಪದಾಧಿಕಾರಿಗಳ ಘೋಷಣೆ.


ಸುರಪುರ ಟೈಮ್ಸ್ ವಾರ್ತೆ

ಸುರಪುರ : ತಾಲೂಕಿನ ಕಟ್ಟಡ ಸಾಮಾಗ್ರಿಗಳ ಮಾರಾಟಗಾರ ಮಾಲೀಕರ ಕ್ಷೇಮಾಭಿವೃದ್ಧಿಗಾಗಿ ನೂತನ ಸಂಘವನ್ನು ಸ್ಥಾಪಿಸಿ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಜರುಗಿತು.
ಸಮೀಪದ ರಂಗಂಪೇಟೆಯ ಈಶ್ವರ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಸಂಘದ ಸ್ಥಾಪನೆಗೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ನಡೆಸಲಾಯಿತು. ಸರಕಾರದ ನಿಯಮಾವಳಿಗಳ ಪ್ರಕಾರ ಸಂಘವನ್ನು ನೋಂದಾಯಿಸುವ ನಿರ್ಧಾರ ಕೈಗೊಳ್ಳಲಾಯಿತು. ಬಳಿಕ ಸರ್ವ ಸದಸ್ಯರ ಒಪ್ಪಿಗೆಯೊಂದಿಗೆ ಸಂಘಕ್ಕೆ “ತಾಲೂಕು ಕಟ್ಟಡ ಸಾಮಾಗ್ರಿಗಳ ಮಾರಾಟಗಾರ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ” ಎಂದು ನಾಮಕರಣ ಮಾಡಲಾಯಿತು.


ಈ ವೇಳೆ ಮಲ್ಲಣ್ಣ ಸಾಹುಕಾರ ಮಧೋಳ ಅವರನ್ನು ಸಂಘದ ಅಧ್ಯಕ್ಷರಾಗಿ ಹಾಗೂ ಮಲ್ಲಿಕಾರ್ಜುನ ವಿರುಪಾಕ್ಷಪ್ಪ ಸಜ್ಜನ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಜೊತೆಗೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಆಯ್ಕೆ ಮಾಡಿ, ಸಂಘವನ್ನು ಬಲಪಡಿಸುವ ದಿಶೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ನಿರ್ಧರಿಸಲಾಯಿತು.


ಸಂಘದ ಮೂಲಕ ವ್ಯಾಪಾರಿಗಳ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹಿತಾಸಕ್ತಿಯನ್ನು ಕಾಪಾಡಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ನೂತನ ಪದಾಧಿಕಾರಿಗಳು ಭರವಸೆ ನೀಡಿದರು.


ಪದಾಧಿಕಾರಿಗಳ ಪಟ್ಟಿ :
ಜೋಧರಾಯ ಚೌಧರಿ (ಗೌರವಾಧ್ಯಕ್ಷ), ಮಲ್ಲಣ್ಣ ಸಾಹುಕಾರ ಮಧೋಳ (ಅಧ್ಯಕ್ಷ), ಯಂಕಣ್ಣ ಗದ್ವಾಲ್, ನಿಖಿಲ್ ದತ್ತುರಾವ್ (ಉಪಾಧ್ಯಕ್ಷರು), ಮಲ್ಲಿಕಾರ್ಜುನ ವಿರುಪಾಕ್ಷಪ್ಪ ಸಜ್ಜನ್ (ಪ್ರಧಾನ ಕಾರ್ಯದರ್ಶಿ), ವಿಜಯಕುಮಾರ ಕಡೇಚೂರು (ಸಹ ಕಾರ್ಯದರ್ಶಿ), ಶಕೀಲ್ ಅಬ್ದುಲ್ ರಹೆಮಾನ್ (ಖಜಾಂಚಿ), ಮೌನೇಶ್ ನಗರಗುಂಡ (ಉಪ ಖಜಾಂಚಿ), ಸಿದ್ದಣ್ಣ ಸಾಹುಕಾರ ಮಧೋಳ, ನಿಂಗಣ್ಣ ಶರಬಣ್ಣ ಹೊಸಮನಿ, ರಮೇಶಕುಮಾರ ಪಂಚಾರಾಮ, ಮಹೇಂದ್ರಸಿಂಗ್, ಮೊಹಸೀನ್ ಶಕೀಲ್ ಅಹ್ಮದ್, ತಿರುಪತಿ ತ್ರಿವೇದಿ, ನಾಗರಾಜ ಪೂಜಾರಿ (ಕಾರ್ಯಕಾರಿ ಸಮಿತಿ ಸದಸ್ಯರು).

Leave a Reply

Your email address will not be published. Required fields are marked *

error: Content is protected !!