ಅಂಬೇಡ್ಕರ್ ಜಯಂತಿ ಅದ್ಧೂರಿ ಆಚರಣೆಗೆ ಸಜ್ಜಾದ ತಾಲ್ಲೂಕು ಆಡಳಿತ|ತಹಸೀಲ್ದಾರ್ ಸರಕಾವಸ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ| ಮೆರವಣಿಗೆ, ಉಪನ್ಯಾಸಕ್ಕೆ ರೂಪರೇಷೆ.

ಸುರಪುರ ಟೈಮ್ಸ್ ವಾರ್ತೆ
ಸುರಪುರ:ತಾಲ್ಲೂಕು ಆಡಳಿತದಿಂದ ಏಪ್ರಿಲ್ 14ರಂದು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಹೆಚ್.ಎ. ಸರಕಾವಸ್ ತಿಳಿಸಿದರು.
ನಗರದ ಪ್ರಜಾಸೌಧದಲ್ಲಿರುವ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಜಯಂತಿಯನ್ನು ಗೌರವಯುತವಾಗಿ ಮತ್ತು ಶಿಸ್ತಿನಿಂದ ಆಚರಿಸಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.


ಅವರು ಮುಂದುವರಿದು, ಏಪ್ರಿಲ್ 14ರಂದು ಬೆಳಗ್ಗೆ 8 ಗಂಟೆಗೆ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯಿತಿಗಳು, ಅಂಗನವಾಡಿಗಳು, ಆರೋಗ್ಯ ಕೇಂದ್ರಗಳು ಮತ್ತು ವಸತಿ ನಿಲಯಗಳಲ್ಲಿ ಡಾ. ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಯಂತಿ ಆಚರಿಸಬೇಕು ಎಂದರು.
ಬೆಳಗ್ಗೆ 9 ಗಂಟೆಗೆ ನಗರದ ಬಸ್ ನಿಲ್ದಾಣದ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತ, ಅರಮನೆ ಮಾರ್ಗ, ವೇಣುಗೋಪಾಲಸ್ವಾಮಿ ದೇವಸ್ಥಾನ ರಸ್ತೆ ಮಾರ್ಗವಾಗಿ ತಹಸೀಲ್ದಾರ್ ಕಚೇರಿವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚಿಸಿದರು.


ನಂತರ ಬೆಳಗ್ಗೆ 11 ಗಂಟೆಗೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಜಯಂತ್ಯುತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಶೇಷ ಉಪನ್ಯಾಸ ಕೂಡ ಇರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹ್ಮದ್ ಸಲೀಂ, ನಗರಸಭೆ ಪೌರಾಯುಕ್ತ ಬಸವರಾಜ್ ಟಣಕೆದಾರ, ಪಿಐ ಉಮೇಶ್ ನಾಯಕ ಉಪಸ್ಥಿತರಿದ್ದರು.

ಸಭೆಯಲ್ಲಿ ಭಾಗವಹಿಸಿದ ಪ್ರಮುಖರು
  ಮಾನಪ್ಪ ಕಟ್ಟಿಮನಿ, ಭೀಮನಗೌಡ ಲಕ್ಷ್ಮಿ, ರಾಮಚಂದ್ರ ವಾಗಣಗೇರಾ, ಮಾನಪ್ಪ ಕರಡಕಲ್, ಗೋಪಾಲ ವಜ್ಜಲ್, ಚಂದ್ರಪ್ಪ ಕಟ್ಟಿಮನಿ, ರಾಹುಲ್ ಹುಲಿಮನಿ, ಮಾಳಪ್ಪ ಕಿರದಳ್ಳಿ, ಹಣಮಂತ ಭದ್ರಾವತಿ, ಹಣಮಂತ ಕಟ್ಟಿಮನಿ ಬೊಮ್ಮನಳ್ಳಿ, ಶಿವಮೋನಯ್ಯ ಎಲ್‌ಡಿ ನಾಯಕ, ಭೀಮು ನಾಯಕ ಮಲ್ಲಿಬಾವಿ, ನಿಂಗಣ್ಣ ಬುಡ್ಡಾ, ನಾಗರಾಜ್ ನಾಯಕ ಪ್ಯಾಪಲಿ, ವಾಸು ನಾಯಕ ಭೈರಿಮಡ್ಡಿ, ವಿಶ್ವನಾಥ ಹೊಸಮನಿ, ಬಸವರಾಜ ಶೆಳ್ಳಗಿ, ರಾಜು ದೊಡ್ಡಮನಿ, ಮೂರ್ತಿ ಬೊಮ್ಮನಳ್ಳಿ, ವೈಜನಾಥ ಹೊಸಮನಿ, ರಾಮಣ್ಣ ಶೆಳ್ಳಗಿ, ಶರಣಪ್ಪ ವಾಗಣಗೇರಾ, ಧರ್ಮರಾಜ್ ಬಡಿಗೇರ್, ಮಲ್ಲು ಮುಷ್ಠಳ್ಳಿ, ಆಕಾಶ ಕಟ್ಟಿಮನಿ, ಹಣಮಂತ ಹೊಸಮನಿ ಬೊಮ್ಮನಳ್ಳಿ, ವೀರಭದ್ರ ತಳವಾರಗೇರಾ, ಗಣೇಶ ದೇವಿಕೇರಿ, ಮಹೇಶ ಯಾದಗಿರಿ, ಶಿವಶಂಕರ ಬೊಮ್ಮನಳ್ಳಿ, ಶೇಖರ ಮಂಗಳೂರು, ರಮೇಶ ಬಾಚಿಮಟ್ಟಿ, ಗೋವರ್ಧನ ತೇಲ್ಕರ್, ಕುಮಾರ ಹುಲಿಕರ್, ಸಿದ್ದಪ್ಪ ಸುರಪುರಕರ್, ರಾಜು ಭಂಡಾರಿ, ಕೃಷ್ಣಾ ಹುಲಿಕಲ್, ವಿಕ್ರಮ್ ಕರಡಕಲ್ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಿದರು.


ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣ ಕಲಬುರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!