ರಸಗೊಬ್ಬರ ಅಂಗಡಿಗಳ ಮೇಲೆ ಜಂಟಿ ಕೃಷಿ ನಿರ್ದೇಶಕರ ದಾಳಿ: ದಾಸ್ತಾನು, ದರ, ಗುಣಮಟ್ಟಕ್ಕೆ ಕಟ್ಟು ನಿಟ್ಟಿನ ಪರಿಶೀಲನೆ!


ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲೂಕಿನ ವಿವಿಧ ರಸಗೊಬ್ಬರ ಅಂಗಡಿಗಳಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಯುರಿಯಾ, ಡಿಎಪಿ ಸೇರಿದಂತೆ ವಿವಿಧ ರಸಗೊಬ್ಬರಗಳ ದಾಸ್ತಾನು, ಲಭ್ಯತೆ ಹಾಗೂ ಗುಣಮಟ್ಟವನ್ನು ಸಮಗ್ರವಾಗಿ ಪರಿಶೀಲಿಸಿದರು. ಅಲ್ಲದೆ ನಿಗದಿತ ಸರಕಾರಿ ದರದಲ್ಲಿ ರಸಗೊಬ್ಬರ ಮಾರಾಟವಾಗುತ್ತಿದೆಯೇ ಎಂಬುದರ ಮೇಲೂ ಕಣ್ಣಿಟ್ಟರು.
ಇದೀಗ ಬಹುತೇಕ ಬೆಳೆಗಳು ಕೊಯ್ದಿಲಿನ ಹಂತದಲ್ಲಿರುವುದರಿಂದ, ಯುರಿಯಾ ಮತ್ತು ಡಿಎಪಿ ರಸಗೊಬ್ಬರಗಳನ್ನು ಮುಂಗಾರು ಹಂಗಾಮಿನವರೆಗೆ ಸೂಕ್ತವಾಗಿ ಸಂಗ್ರಹಣೆ ಹಾಗೂ ನಿರ್ವಹಣೆ ಮಾಡಬೇಕು ಎಂದು ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.
ಮುಂದಿನ ಹಂಗಾಮಿನಲ್ಲಿ ರಸಗೊಬ್ಬರ ವಿತರಣೆಯನ್ನು ಕೆ-ಕಿಸಾನ್ ತಂತ್ರಾಂಶದಲ್ಲಿ ದಾಖಲಾಗಿರುವ ಜಮೀನಿನ ವಿವರಗಳ ಆಧಾರದ ಮೇಲೆ ಮಾತ್ರ ನೀಡಬೇಕು ಎಂದು ಕಠಿಣ ಸೂಚನೆ ನೀಡಿದರು.


ಇನ್ನೂ, ರೈತರು ರಸಗೊಬ್ಬರ ಖರೀದಿಸುವ ಸಂದರ್ಭದಲ್ಲಿ ಎಫ್‌ಐಡಿ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಮನಗೌಡ ಮಾಲಿ ಪಾಟೀಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!