ಡಾ. ಬಾಬು ಜಗಜೀವನ್ ರಾಂ ವೃತ ಉದ್ಘಾಟನೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿ ಡಾ|| ಬಾಬು ಜಗಜೀವನ ರಾಂರವರ ಜಯಂತಿಯ ಅಂಗವಾಗಿ ಶನಿವಾರ ಮಾದಿಗ ದಂಡೋರ ಎಮ್.ಆರ್.ಪಿ.ಎಸ್. ತಾಲೂಕಾ ಸಮಿತಿ ವತಿಯಿಂದ ಮತ್ತು ಮಾದಿಗ ಸಮಾಜದ ವತಿಯಿಂದ ಸುರಪುರ ಪಟ್ಟಣದ ತಹಸೀಲ್ ಮತ್ತು ಕೋರ್ಟ್ ರಸ್ತೆಯಲ್ಲಿ ಡಾ|| ಬಾಬು ಜಗಜೀವನ ರಾಂರವರ ನಾಮಫಲಕವನ್ನು ಹಾಕಿ ವೃತ್ತವನ್ನು ತಾಲೂಕು ದಂಡಾಧಿಕಾರಿ ಹೆಚ್.ಎ. ಸರ್ಕಾವಸ್ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಎಮ್.ಆರ್.ಪಿ.ಎಸ್. ಮಾದಿಗ ದಂಡೋರ ತಾಲೂಕಾ ಅಧ್ಯಕ್ಷ ಬಸವರಾಜ ಹಾದಿಮನಿ ಮಾತನಾಡಿ
ಅಸಮಾನತೆ ವಿರುದ್ಧ ಹೋರಾಟ ನಡೆಸಿದ ಡಾ.ಬಾಬು ಜಗಜೀವನ ರಾಂ ಕೇಂದ್ರದಲ್ಲಿ ಹಲವು ಇಲಾಖೆಗಳ ಸಚಿವರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಸದಾ ಆಧ್ಯಯನ ಶೀಲತೆಯಿಂದ ಅಪಾರ ಜ್ಞಾನ ಹೊಂದಿದ್ದರು. ಅವರ ಹೋರಾಟ ಹಾಗೂ ಜೀವನದ ಮೌಲ್ಯಗಳು ಪ್ರತಿಯೊಬ್ಬರಿಗೂ ಆದರ್ಶ ಎಂದರು. ಯಾವುದೇ ರೀತಿ ಸಂಘಟನೆಗೆ ಚ್ಯುತಿ ಬರದಂತೆ ಸಂಘನೆಯನ್ನು ಮಾಡಬೇಕೆಂದು ಮಾರ್ಮಿಕವಾಗಿ ಹೇಳಿದರು.
ವೃತ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ಮಹ್ಮದ್ ಸಲೀಂ, ತಾಪಂ ಅಧಿಕಾರಿ ಬಸವರಾಜ ಸಜ್ಜನ್, ಅಕ್ಷರ ದಾಸೋಹ ಅಧಿಕಾರಿ ಪಂಡಿತ ನಿಂಬೂರೆ ಹಾಗೂ ಮಾದಿಗ ಸಮಾಜದ ಮುಖಂಡರಾದ ದಾನಪ್ಪ ಕಡಿಮನಿ ಲಕ್ಷ್ಮೀಪೂರ, ಮರೆಪ್ಪ ಗುತ್ತೆದಾರ ದೇವಪುರ, ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ, ನಿಂಗಣ್ಣ ಬುಡ್ಡಾ ದೀವಳಗುಡ್ಡ, ಭೀಮಣ್ಣ ದೀವಳಗುಡ್ಡ, ಕಾಂತಪ್ಪ ದೀವಳಗುಡ್ಡ, ಬಸವರಾಜ ಮುಷ್ಟಳ್ಳಿ, ಬಸವರಾಜ ಕೊಂಗಂಡಿ, ರಮೇಶ ಓಕಳಿ, ಬಾಪು ಕೋನ್ಹಾಳ ಎಮ್.ಆರ್.ಪಿ.ಎಸ್. ತಾಲೂಕಾ ಪದಾಧಿಕಾರಿಗಳಾದ ಯಲ್ಲಪ್ಪ ಹೆಮ್ಮಡಗಿ, ಈಶ್ವರ ಸತ್ಯಂಪೇಟೆ, ಈಶ್ವರ ಕಟ್ಟಿಮನಿ ಸತ್ಯಂಪೇಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

