ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ: ಪಾರದರ್ಶಕವಾಗಿ ನಿಖರ ಮಾಹಿತಿ ಸಂಗ್ರಹಿಸಲು ತಹಸೀಲ್ದಾರ  ಸರಕಾವಸ್ ಸೂಚನೆ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಸುರಪುರ ತಾಲೂಕಿನಲ್ಲಿ ಮೊದಲನೇ ಹಂತದಲ್ಲಿ ಮನೆ-ಮನೆ ಸಮೀಕ್ಷೆ ಮೇ 5 ರಿಂದ ಮೇ 17ರವರೆಗೆ, ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಮೇ 19 ರಿಂದ ಮೇ 21 ರವರೆಗೆ ಹಾಗೂ ಸ್ವಯಂ ಘೋಷಣೆ ಮೇ 19 ರಿಂದ ಮೇ 23 ರ ವರೆಗೆ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್  ಎಚ್.ಎ ಸರಕವಾಸ್ ತಿಳಿಸಿದ್ದಾರೆ.

ಅದರ ಪೂರ್ವಭಾವಿಯಾಗಿ ಇಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಸುರಪುರದಲ್ಲಿ  ಸಮೀಕ್ಷೆಗೆ ನೇಮಿಸಿದ ನೌಕರರಿಗೆ ತರಬೇತಿಯನ್ನು ಅವರು ಸಸಿಗೆ ನೀರೆರುವ ಮೂಲಕ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ  ತಾಪಂ ಅಧಿಕಾರಿ ಬಸವರಾಜ ಸಜ್ಜನ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹ್ಮದ್ ಸಲಿಂ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!