ಭತ್ತದ ಹುಲ್ಲು ಸುಟ್ಟರೆ ಮಣ್ಣಿನ ಫಲವತ್ತತೆ ಹಾಳು: ರಾಮನಗೌಡ ಪಾಟೀಲ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ಸುರಪುರ ತಾಲೂಕು ಭತ್ತವನ್ನು ಸುಮಾರು 52000 ಹಕ್ಷರ ಪ್ರದೇಶದಲ್ಲಿ ರೈತರು ಬೆಳೆಯುತ್ತಾರೆ ಇಲ್ಲಿನ ರೈತರು ಭತ್ತ ಕೊಯ್ಲಿನ ನಂತರ ಉಳಿದ ಕೊಲಿಗಳನ್ನು ಸುಡುವುದರಿಂದ ಭೂಮಿಯಲ್ಲಿರುವ ಅನೇಕ ಕೃಷಿಗೆ ಉಪಯೋಗವಿರುವ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳುಗಳು ನಾಶವಾಗುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಮನಗೌಡ ಪಾಟೀಲ ತಿಳಿಸಿದ್ದಾರೆ.
ಭತ್ತದ ಹುಲ್ಲು ಸುಡುವುದರಿಂದ ವಾತವರಣಕ್ಕೆ ಕಾರ್ಬನ ಡೈ ಆಕ್ಸೆಡ್, ಕಾರ್ಬನ್ ಮೊನಾಡ್, ನೈಟ್ರಸ ಆಡ, ಮಿಥೇನ್ ಮತ್ತು ಸಲ್ಪರ ಆಡ್ ಬಿಡುಗಡೆಯಾಗಿ ವಾತವರಣ ಮಾಲಿನ್ಯವಾಗಿ ಅನೇಕ ರೋಗಾಣುಗಳು ಹರಡುತ್ತವೆ.
ಭತ್ತ ಕೊಯ್ಲಿನ ನಂತರ ಉಳಿದ ಕೊಲಿಗಳನ್ನು ಸುಡದೆ ಮರುಬಳಕೆ ಮಾಡಬೇಕು. ಮಣ್ಣಿನಲ್ಲಿ ಮಿಶ್ರಣ ಮಾಡಿ ಕೊಳೆಯುವಂತೆ ನೋಡಬೇಕು ಇದರಿಂದ ಭೂಮಿಯಲ್ಲಿ ಕಾರ್ಬನ ಶೇಖರಣೆಯಾಗಿ ಕೃಷಿ ಉಪಯೋಗವಿರುವ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳುಗಳು, ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಹುಲ್ಲುನ ಮರುಬಳಕೆಯಿಂದ ಜೈವಿಕ ಅನಿಲ ತಯಾರಿಕೆಗೆ ಕಚ್ಚವಸ್ತುವಾಗಿ ಬಳಸಬಹುದು, ದನಗಳಿಗೆ ಮೇಯಲು ಬಿಡಬೇಕು, ಪೇಪರ ತಯಾರಿಸಲು, ಊಟದ ತಟ್ಟೆ ತಯಾರಿಕೆಯಲ್ಲಿ ಉಪಯೋಗಿಸಬಹುದು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!